• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಿಳಾ ವಿಶೇಷ ಘಟಕಗಳಲ್ಲಿ ಯಾವ ಸೌಲಭ್ಯಗಳಿವೆ?

|

ಅತ್ಯಾಚಾರ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ ಹೀಗೆ ಹಲವು ರೀತಿಯ ದೌರ್ಜನ್ಯಗಳಿಗೆ ಒಳಗಾದ ಮಹಿಳೆಯರು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ 'ಮಹಿಳಾ ವಿಶೇಷ ಚಿಕಿತ್ಸಾ ಘಟಕ' ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನ್ಯಾಯ ಪಡೆಯಲು ಬೇರೆ ಬೇರೆ ಸ್ಥಳಗಳಿಗೆ ಹೋಗಲು ತೊಂದರೆ ಮತ್ತು ಮುಜುಗರ ಅನುಭವಿಸಬೇಕಾಗುತ್ತದೆ. ಈ ರೀತಿಯ ವಿಳಂಬದಿಂದ ಪ್ರಮುಖ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒಂದೇ ಸೂರಿನಡಿ ವೈದ್ಯಕೀಯ ಚಿಕಿತ್ಸೆ, ಪೊಲೀಸರಿಂದ ಪ್ರಥಮ ವರ್ತಮಾನ ವರದಿ ದಾಖಲು, ಕಾನೂನು ನೆರವು ಹಾಗೂ ಮಾನಸಿಕ ಸ್ಥೈರ್ಯ ಮತ್ತು ಪುನರ್ವಸತಿ ಕುರಿತ ಆಪ್ತ ಸಮಾಲೋಚನೆ ನೀಡಲು ಈ ಘಟಕಗಳನ್ನು ಆರಂಭಿಸಲಾಗಿದೆ.

2014-15 ಸಾಲಿನ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವಂತೆ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಶೀಘ್ರ ನೆರವನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ 'ಮಹಿಳಾ ವಿಶೇಷ ಚಿಕಿತ್ಸಾ ಘಟಕ'ಗಳನ್ನು ಜಿಲ್ಲೆಗೆ ಒಂದರಂತೆ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ಬೆಂಗಳೂರಿನ ಐದು ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುತ್ತಿದೆ.

ಎಲ್ಲಿವೆ ಆಸ್ಪತ್ರೆ : ಬೆಂಗಳೂರಿನ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಕೆ.ಸಿ. ಜನರಲ್ ಆಸ್ಪತ್ರೆಗ ಹಾಗೂ ವಾಣಿ ವಿಲಾಸ ಆಸ್ಪತ್ರೆಗಳಲ್ಲಿ ಮಹಿಳೆಯರ ವಿಶೇಷ ಚಿಕಿತ್ಸಾ ಘಟಕಗಳನ್ನು ಆರಂಭಿಸಲಾಗುತ್ತಿದೆ.

ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ವೈದ್ಯಕೀಯ ಚಿಕಿತ್ಸೆ, ಪೊಲೀಸ್ ನೆರವು, ಕಾನೂನು ನೆರವು, ಸಮಾಲೋಚನೆ, ರಕ್ಷಣೆ ಮುಂತಾದ ಸೇವೆಗಳನ್ನು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನೊಂದ ಮಹಿಳೆಯರಿಗೆ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

ಹೇಗಿದೆ ವ್ಯವಸ್ಥೆ : ಪ್ರತಿ ಘಟಕದಲ್ಲಿ 2 ರಿಂದ 3 ಕೊಠಡಿಗಳು ಶೌಚಾಲಯ ವ್ಯವಸ್ಥೆಯೊಂದಿಗೆ ಇರುತ್ತವೆ. ವೈದ್ಯಕೀಯ ಚಿಕಿತ್ಸಾ ಕೊಠಡಿ, ಆಪ್ತ ಸಮಾಲೋಚನಾ ಕೊಠಡಿ, ಪೊಲೀಸ್ ಅಧಿಕಾರಿಗಳು ಮತ್ತು ವಕೀಲರಿಗೆ ಪ್ರತ್ಯೇಕವಾದ ಕೊಠಡಿ ಹಾಗೂ ಮಹಿಳಾ ಸಹಾಯವಾಣಿ ಇರುತ್ತದೆ. ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತವೆ. ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಕೇಂದ್ರದ ಸಂಯೋಜಕರಾಗಿರುತ್ತಾರೆ.

ದೊರೆಯುವ ಸೇವೆಗಳು : ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆ, ಪ್ರಥಮ ವರ್ತಮಾನ ವರದಿ (ಎಫ್ಐಆರ್)ದಾಖಲು, ಆಪ್ತ ಸಮಾಲೋಚನೆ, ಕಾನೂನು ಸಲಹೆ ಮತ್ತು ನೆರವು, ಸುರಕ್ಷಿತ ವಸತಿ ಸೌಲಭ್ಯ, ಉಚಿತ ಮಹಿಳಾ ಸಹಾಯವಾಣಿ 181.

ಘಟಕದ ಕರ್ತವ್ಯಗಳು

* ಸಹಾಯವಾಣಿ 181 ರಿಂದ ನೊಂದ ಮಹಿಳೆಯರಿಂದ ಕರೆ ಸ್ವೀಕಾರ ಹಾಗೂ ಕರೆಗಳನ್ನು ದಾಖಲಿಸುವುದು.

* ವೈದ್ಯಾಧಿಕಾರಿಗಳಿಂದ ಮಹಿಳೆಯರಿಗೆ ವೈದ್ಯಕೀಯ ಪರೀಕ್ಷೆ ಹಾಗೂ ಚಿಕಿತ್ಸೆ ಒದಗಿಸುವುದು.

* ನುರಿತ ಸಮಾಲೋಚಕರಿಂದ ಅಗತ್ಯ ಸಮಾಲೋಚನೆ ಒದಗಿಸುವುದು.

* ಇನ್‍ಸ್ಪೆಕ್ಟರ್ ದರ್ಜೆಯ ಮಹಿಳಾ ಪೊಲೀಸ್ ಅಧಿಕಾರಿಯಿಂದ ಎಫ್ಐಆರ್ ದಾಖಲು

* ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕಾನೂನು ಸಲಹೆಗಾರರಿಂದ ಕಾನೂನು ನೆರವು

* ಸರ್ಕಾರದಿಂದ ಗುರುತಿಸಲ್ಪಟ್ಟ ಸ್ವಯಂ ಸೇವಾ ಸಂಸ್ಥೆಗಳು/ಸರ್ಕಾರಿ ಗೃಹಗಳಲ್ಲಿ ಮಹಿಳೆಯರಿಗೆ ಆಶ್ರಯ

ಕೌಟುಂಬಿಕ ದೌರ್ಜನ್ಯ ಮತ್ತು ಇತರೆ ಲೈಂಗಿಕ ಅಥವಾ ದೈಹಿಕ ಹಿಂಸೆಗೆ ಒಳಗಾದ ಮಹಿಳೆಯರು, ಹೆಣ್ಣು ಮಕ್ಕಳು ಮತ್ತು ಬಾಲಕಿಯರು. ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಹಾಗೂ ಸಮಾಲೋಚನೆಯನ್ನು ಗೌಪ್ಯವಾಗಿ ಮತ್ತು ಸುರಕ್ಷಿತ ವಾತಾವರಣದಲ್ಲಿ ಯಾರ ಉಪಸ್ಥಿತಿ ಅವಶ್ಯಕತೆ ಇದೆಯೋ ಅಂತಹ ವ್ಯಕ್ತಿಗಳು ಹಾಗೂ ದೌರ್ಜನ್ಯಕ್ಕೊಳಗಾದ ಮಹಿಳೆಯರು ಇಚ್ಛಿಸಿದ ಕುಟುಂಬದ ಸದಸ್ಯರ ಸಮಕ್ಷಮದಲ್ಲಿ ನೀಡಲಾಗುವುದು.

ಉಪಯೋಗವೇನು : ಮಹಿಳಾ ವಿಶೇಷ ಘಟಕದಲ್ಲಿ 24 ಗಂಟೆಗಳೂ ಸಿಬ್ಬಂದಿಗಳು ಹಾಜರಿದ್ದು, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಎಲ್ಲಾ ಅಗತ್ಯ ಸೇವೆಗಳನ್ನು ಒಂದೇ ಸೂರಿನಲ್ಲಿ ನೀಡುತ್ತಾರೆ. ನೊಂದ ಮಹಿಳೆಯ ಪ್ರಕರಣ ದಾಖಲಿಸುವಾಗ ಮತ್ತೊಮ್ಮೆ ಹಿಂಸೆ ಅಥವಾ ಮುಜುಗರ ಪಡುವಂತಹ ಪ್ರಸಂಗಗಳನ್ನು ತಡೆಗಟ್ಟಬಹುದು.

ನೊಂದ ಮಹಿಳೆಯರಿಗೆ ಯಾವುದೇ ಭೇದಭಾವವಿಲ್ಲದೆ ಉಚಿತವಾಗಿ ಘಟಕದಲ್ಲಿ ಸೌಲಭ್ಯಗಳು ನೀಡಲಾಗುವುದು ಹಾಗೂ ವೈದ್ಯಕೀಯ, ಕಾನೂನು ಮತ್ತು ಮಾನಸಿಕ ಸಮಾಲೋಚನೆಯನ್ನು ಒಳಗೊಂಡಂತಹ ಪುನರ್ವಸತಿ ಸೌಲಭ್ಯಗಳನ್ನು ಶೀಘ್ರದಲ್ಲಿಯೇ ನೀಡಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A special ward to attend to women, who are victims of sexual assault, set up at Government Hospital of all districts in Karnataka. Apart from treatment in special wards social workers and a counselor will be available. The social workers will help the victims in getting proper treatment, filing complaint and arranging for temporary accommodation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more