ಸಹಾಯಕ ಪ್ರಾಧ್ಯಾಪಕರ ವಿಶೇಷ ವರ್ಗಾವಣೆ: ಮಾರ್ಗಸೂಚಿ
ಬೆಂಗಳೂರು, ಅಕ್ಟೋಬರ್ 07: ಕರ್ನಾಟಕದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಆಯುಕ್ತರ ಕಛೇರಿ ಸಹಾಯಕ ಪ್ರಾಧ್ಯಾಪಕರ ವಿಶೇಷ ವರ್ಗಾವಣೆ ಕುರಿತು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹೊಸದಾಗಿ ಆಯ್ಕೆಗೊಂಡಿರುವ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗೊಳಿಸುವ ಸಂಬಂಧ ಜಾರಿಯಲ್ಲಿರುವ ವರ್ಗಾವಣೆ ನಿಯಮಗಳನ್ವಯ ವಿಶೇಷ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ವಿವರಣೆ ನೀಡಲಾಗಿದ್ದು, ಮಾರ್ಗಸೂಚಿಯನ್ನು ಸಹ ನೀಡಲಾಗಿದೆ.
ಈ ಕುರಿತು ಆಯುಕ್ತರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಸರ್ಕಾರದ ಅಧಿಸೂಚನೆ ದಿನಾಂಕ 03-11-2023, ದಿನಾಂಕ 05-09-2024ರ ಸರ್ಕಾರದ ಅಧಿಸೂಚನೆ, ಸರ್ಕಾರದ ಅಧಿಸೂಚನೆ ದಿನಾಂಕ 29.01.2021ರ ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ವರ್ಗಾವಣೆ ನಿಯಮಗಳು, 2021 ಮುಂತಾದವುಗಳನ್ನು ಉಲ್ಲೇಖ ಮಾಡಲಾಗಿದೆ.

ಕಾಲೇಜು ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ ವಿವಿಧ ವಿಷಯಗಳ ಒಟ್ಟು 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭರ್ತಿ ಮಾಡಲು ಕ್ರಮವಹಿಸಲಾಗಿದ್ದು, ಅದರಂತೆ, 26 ವಿಷಯಗಳ 1208 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಗೊಂಡಿರುವ ಅಭ್ಯರ್ಥಿಗಳ ಅಂತಿಮ ಆಯ್ಕೆಪಟ್ಟಿಯನ್ನು ಸರ್ಕಾರದ ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುತ್ತದೆ.
ಸದರಿ ಪಟ್ಟಿಯಲ್ಲಿ ಆಯ್ಕೆಗೊಂಡ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳಿಂದ ಪಡೆದು, ಅವುಗಳ ನೈಜತೆ ಪರಿಶೀಲಿಸಿ, ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಲಾಗಿತ್ತು. ಪ್ರಸ್ತುತ ಅವರುಗಳಲ್ಲಿ ಒಟ್ಟು 1001 ಸಹಾಯಕ ಪ್ರಾಧ್ಯಾಪಕರುಗಳಿಗೆ ನೇಮಕಾತಿ ಆದೇಶ ಹೊರಡಿಸಲಾಗಿದೆ.
ಅಧಿಸೂಚನೆಯನ್ವಯ ನೇಮಕಾತಿ ಆದೇಶ ಪಡೆದಿರುವ ಸಹಾಯಕ ಪ್ರಾಧ್ಯಾಪಕರಿಗೆ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಎದುರಾಗಿ ಸ್ಥಳ ನಿಯುಕ್ತಿಗೊಳಿಸಬೇಕಾಗಿರುತ್ತದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಕಾಲೇಜು ಶಿಕ್ಷಣ ಇಲಾಖೆಯ ಬೋಧಕರ ಸಿಬ್ಬಂದಿಗಳ ವರ್ಗಾವಣೆ) ನಿಯಮಗಳು, 2021 ಅನ್ನು ಜಾರಿಗೊಳಿಸಲಾಗಿದ್ದು, ಸದರಿ ನಿಯಮಗಳ ನಿಯಮ (9) ರನ್ವಯ ಹೊಸದಾಗಿ ನೇಮಕಾತಿ ಆದೇಶ ಪಡೆದಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ ವಲಯ "ಇ" ರಲ್ಲಿ ಕಾರ್ಯಭಾರಕ್ಕೆ ಅನುಗುಣವಾಗಿ ಅಗತ್ಯವಿರುವಷ್ಟು ಖಾಲಿ ಹುದ್ದೆಗಳನ್ನು ಗುರುತಿಸಿ, ಆ ಹುದ್ದೆಗಳಿಗೆ ಎದುರಾಗಿ ಸ್ಥಳನಿಯುಕ್ತಿಗೊಳಿಸಬೇಕಾಗಿರುತ್ತದೆ ಎಂದು ಹೇಳಿದೆ.
ಒಂದು ವೇಳೆ ವಲಯ "ಇ" ರಲ್ಲಿ ಅಗತ್ಯವಿರುವಷ್ಟು ಖಾಲಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ ವಲಯ "ಇ"ರಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರನ್ನು ವಲಯ "ಡಿ", ವಲಯ "ಸಿ", ವಲಯ "ಬಿ" ಮತ್ತು ವಲಯ "ಎ" ಗೆ ಕ್ರಮವಾಗಿ ವರ್ಗಾವಣೆ ಮಾಡಿ ಖಾಲಿ ಹುದ್ದೆಗಳನ್ನು ಮೊದಲು ಸೃಜಿಸಿಕೊಂಡು ಆ ಹುದ್ದೆಗಳಿಗೆ ಎದುರಾಗಿ ಸ್ಥಳನಿಯುಕ್ತಿಗೊಳಿಸಬೇಕಾಗಿರುತ್ತದೆ.
ವರ್ಗಾವಣೆ ನಿಯಮಗಳ ನಿಯಮ (5) ರಲ್ಲಿ ಆದ್ಯತಾ ಪಟ್ಟಿಗಳನ್ನು ಸಿದ್ಧಪಡಿಸುವ ಬಗ್ಗೆ (Preparation of priority lists) ವಿವರಿಸಲಾಗಿದ್ದು ಅದರಂತೆ ವರ್ಗಾವಣೆಯನ್ನು ಈ ಕೆಳಕಂಡ ಆದ್ಯತಾ ಕ್ರಮದಲ್ಲಿ ಮಾಡಲಾಗುವುದು.
ವರ್ಗಾವಣೆ ನಿಯಮಗಳು: ನಿರ್ಧಿಷ್ಟ ಮಾನದಂಡದ ಅಂಗವಿಕಲತೆಯುಳ್ಳ ವ್ಯಕ್ತಿಯ ಪಕರಣಗಳು. ಗಂಭೀರ ಸ್ವರೂಪದ ಕಾಯಿಲೆಗಳ ಪ್ರಕರಣಗಳು. 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ಏಕಪಾಲಕರು ಅಥವಾ ಮರುವಿವಾಹವಾಗದಿರುವ ವಿಚ್ಛೇದಿತ ಮಹಿಳೆಯರು ಅಥವಾ ಭಾರತೀಯ ಸಶಸ್ತ್ರ ಪಡೆಗಳು ಅಥವಾ ಅರೆಸೇನಾ ಪಡೆಗಳಲ್ಲಿ ಸೇವೆಯನ್ನು ಸಲ್ಲಿಸುತ್ತಿರುವಾಗ ಉಂಟಾದ ನಿರ್ದಿಷ್ಟ ಮಾನದಂಡದ ಅಂಗವಿಕಲತೆಯಿಂದ ಬಳಲುತ್ತಿರುವ ಭೌತಿಕ ಅವಲಂಬಿತ ಪತಿ/ ಪತ್ನಿ ಮತ್ತು ಮಕ್ಕಳನ್ನು ಹೊಂದಿರುವ ಬೋಧಕ ಸಿಬ್ಬಂದಿಯ ಪ್ರಕರಣಗಳು,
ಪತಿ/ ಪತ್ನಿ ಪ್ರಕರಣಗಳು. ಸಾರ್ವಜನಿಕ ಸೇವೆಯ ಹಿತದೃಷ್ಟಿಯಿಂದ ಕಡ್ಡಾಯ ವರ್ಗಾವಣೆಗಳ ಪ್ರಕರಣಗಳು.
ಹೊಸದಾಗಿ ನೇಮಕಾತಿ ಆದೇಶ ಪಡೆದಿರುವ ಸಹಾಯಕ ಪ್ರಾಧ್ಯಾಪಕರುಗಳಿಗೆ ವಲಯ 'ಇ', 'ಡಿ', 'ಸಿ', ಮತ್ತು 'ಬಿ' ಗಳಲ್ಲಿ ಕಾರ್ಯಭಾರಕ್ಕೆ ಅನುಗುಣವಾಗಿ ಅಗತ್ಯವಿರುವಷ್ಟು ಖಾಲಿ ಹುದ್ದೆಗಳನ್ನು ಸೃಜಿಸಲು ವಿವಿಧ ವಲಯಗಳಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಹ ಬೋಧಕರನ್ನು ಗುರುತಿಸಿ, ಅಂತಹ ಬೋಧಕರ ಹೆಸರುಗಳ ಪಟ್ಟಿಯನ್ನು ಕೆಳಗಿನ ಕಾರ್ಯಸೂಚಿ ಪಟ್ಟಿಯಲ್ಲಿ ನಿಗದಿಪಡಿಸಿರುವಂತೆ ಪಕಟಿಸಲಾಗುವುದು.
ಸದರಿ ಪಟ್ಟಿಯಲ್ಲಿನ ಬೋಧಕರುಗಳಿಂದ ವಿಶೇಷ ಪ್ರಕರಣಗಳಡಿ ತಮ್ಮ ವರ್ಗಾವಣೆಯನ್ನು ಮೇಲಿನಂತೆ ಆದ್ಯತಾ ಕ್ರಮಗಳನ್ವಯ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಲು ತಮ್ಮ ಕೋರಿಕೆಯನ್ನು ಆಹ್ವಾನಿಸಲಾಗುವುದು. ಇಚ್ಚೆಯುಳ್ಳ ಬೋಧಕರುಗಳು ತಮ್ಮ ಕೋರಿಕೆಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ EMIS ತಂತ್ರಾಂಶದ ಮೂಲಕ ದಿನಾಂಕ 07-10-2024 ರಿಂದ ದಿನಾಂಕ 14-10-2024ರೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
-
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications