Tour Package: ರಾಜ್ಯದ ಈ ಜಿಲ್ಲೆಯಿಂದ ಗೋಕಾಕ್ ಫಾಲ್ಸ್‌ಗೆ ವಿಶೇಷ ಬಸ್: ಟೂರ್ ಪ್ಯಾಕೇಜ್ ಘೋಷಣೆ, ವಿವರ
Gokak Falls Tour: ಕರ್ನಾಟಕದಲ್ಲಿ ಮಳೆ ಜೋರಾಗಿದ್ದರಿಂದ ಜೋಗ ಜಲಪಾತ, ಗೋಕಾಕ್ ಜಲಪಾತ ಸೇರಿದಂತೆ ಅನೇಕ ಫಾಲ್ಸ್‌ಗಳಲ್ಲಿ ನೀರು ಧುಮ್ಮಿಕ್ಕುತ್ತಿದೆ. ಈ ಸಂಬಂಧ ಪ್ರವಾಸಿಗರಿಗೆ ಅನುಕೂಲವಾಗುವಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ. ಹಾಗಾದ್ರೆ ಎಲ್ಲಿಂದ ಎಲ್ಲಿಗೆ? ವಿಶೇಷ ಬಸ್ ಸಂಚಾರ ಸಮಯ, ಟಿಕೆಟ್ ದರ, ಮಾರ್ಗಗಳು, ವೇಳಾಪಟ್ಟಿ ಹಾಗೂ ಮಹಿಳೆಯರಿಗೆ ಉಚಿತವಾಗಿ ಸಂಚರಿಸಬಹುದೇ? ವಿವರ ಇಲ್ಲಿದೆ.
ಪ್ರತಿ ಎರಡನೇ ಮತ್ತು 4ನೇ ಶನಿವಾರ ಹಾಗೂ ಭಾನುವಾರ, ಸಾರ್ವತ್ರಿಕ ರಜಾದಿನಗಳಲ್ಲಿ ಸಂಕೇಶ್ವರದಿಂದ ಗೋಕಾಕ್ ಪಾಲ್ಸ್‌ಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಈ ಪ್ರವಾಸ ಪ್ಯಾಕೇಜ್ ಜುಲೈ 12ರಿಂದ ಆರಂಭವಾಗಲಿದೆ. ಆನ್‌ಲೈನ್ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ಈ ಲಿಂಕ್ http://ksrtc.in ಬಳಸಿ ಮೊದಲೇ ಆಸನ ಕಾಯ್ದಿರಿಸಬಹುದೆಂದು ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಬಸ್ ಸಂಚಾರದ ಸಮಯ, ವೇಳಾಪಟ್ಟಿ
ಸಂಕೇಶ್ವರದಿಂದ ಬಸ್‌ನಿಲ್ದಾಣದಿಂದ ಬೆಳಗ್ಗೆ 9.30ಕ್ಕೆ ಹೊರಡುವ ಬಸ್ ಹಿಡಕಲ್ ಡ್ಯಾಂ 10.30ಕ್ಕೆ ತಲುಪುತ್ತದೆ. ವೀಕ್ಷಣೆ ಬಳಿಕ ಅಲ್ಲಿಂದ 11. 30ಕ್ಕೆ ಹೊರಟು ಗೋಡಚಿನ ಮಲ್ಕಿಗೆ ಮಧ್ಯಾಹ್ನ 12 ಗಂಟೆಗೆ ಬರಲಿದೆ. ಅಲ್ಲಿ ಒಂದೂವರೆಗೆ ಗಂಟೆ ವೀಕ್ಷಣೆ ಬಳಿಕ ಅಲ್ಲಿಂದ ಮಧ್ಯಾಹ್ನ 01.30ಕ್ಕೆ ಬಿಟ್ಟು ಗೋಕಾಕ್ ಫಾಲ್ಸ್‌ಗೆ 02 ಗಂಟೆಗೆ ಬಂದು ತಲುಪುತ್ತದೆ. ಸಂಜೆ 04.30 ಗಂಟೆವರೆಗೂ ಅಲ್ಲಿ ವೀಕ್ಷಣೆಗೆ ಅವಕಾಶ ಇದ್ದು, ನಂತರ ಗೋಕಾಕ್ ಫಾಲ್ಸ್ ನಿಂದ ಹೊರಟು ಸಂಕೇಶ್ವರಕ್ಕೆ ಸಂಜೆ 06ಕ್ಕೆ ಬರಲಿದೆ.
ಪ್ರತಿ ಪ್ರಯಾಣಿಕರಿಗೆ ಈ ಟೂರ್ ಪ್ಯಾಕೆಜ್‌ನಡಿ ಸಂಚರಿಸಲು 180 ರೂಪಾಯಿ ನಿಗದಿ ಮಾಡಲಾಗಿದೆ. ವಿಶೇಷ ಸೂಚನೆ ನೋಡುವುದಾದರೆ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಈ ಬಸ್‌ಗಳಲ್ಲಿ ಉಚಿತ ಸಂಚಾರ ಇರುವುದಿಲ್ಲ. ಇದನ್ನು ಗಮನಿಸುವಂತೆ ಮಹಿಳೆಯರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ನಿಪ್ಪಾಣಿ- ಗೋಕಾಕ್ ಪಾಲ್ಸ್‌ಗೆ ವಿಶೇಷ ಸಾರಿಗೆ
ಹೌದು, ನಿಪ್ಪಾಣಿಯಿಂದಲೂ ಗೋಕಾಕ್ ಪಾಲ್ಸ್‌ಗೆ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. NWKRTC ವಿಶೇಷ್ ಬಸ್‌ಗಳು ಜುಲೈ 12ರಿಂದ ಕಾರ್ಯಾಚರಣೆ ಮಾಡಲಿವೆ. ನಿಪ್ಪಾಣಿ ಬಸ್ ನಿಲ್ದಾಣವನ್ನು ಬೆಳಗ್ಗೆ 08.30 ಹೊರಟು ಹಿಡಕಲ್ ಡ್ಯಾಂ 10ಕ್ಕೆ ತಲುಪುತ್ತದೆ. ವೀಕ್ಷಣೆ ಬಳಿಕ ಅಲ್ಲಿಂದ 11 ಗಂಟೆಗೆ ಹೊರಟು ಗೋಡಚಿನ ಮಲ್ಕಿಗೆ ಮಧ್ಯಾಹ್ನ 11.30ಕ್ಕೆ ಬರಲಿದೆ. ಅಲ್ಲಿ ಒಂದೂವರೆಗೆ ಗಂಟೆ ವೀಕ್ಷಣೆ ಬಳಿಕ ಅಲ್ಲಿಂದ ಮಧ್ಯಾಹ್ನ 01 ಗಂಟೆಗೆ ಬಿಟ್ಟು ಗೋಕಾಕ್ ಫಾಲ್ಸ್‌ಗೆ 01.30 ಗಂಟೆಗೆ ಬಂದು ತಲುಪುತ್ತದೆ. ಸಂಜೆ 04 ಗಂಟೆವರೆಗೂ ಅಲ್ಲಿ ವೀಕ್ಷಣೆಗೆ ಅವಕಾಶ ಇದ್ದು, ನಂತರ ಮರಳಿ ಗೋಕಾಕ್ ಫಾಲ್ಸ್ ನಿಂದ ಹೊರಟು ನಿಪ್ಪಾಣಿ ಬಸ್ ನಿಲ್ದಾಣಕ್ಕೆ ಸಂಜೆ 06ಕ್ಕೆ ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಪ್ಯಾಕೇಜ್‌ನಲ್ಲಿ ತಲಾ ಒಬ್ಬ ಪ್ರಯಾಣಿಕರಿಗೆ 230 ರೂಪಾಯಿ ಟಿಕೆಟ್ ಶುಲ್ಕ ವಿಧಿಸಲಾಗಿದೆ. ಸದರಿ ಸಾರಿಗೆ ಪ್ಯಾಕೇಜ್‌ನಲ್ಲಿ 'ಶಕ್ತಿ ಯೋಜನೆ'ಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ ಹಾಗೂ ಟಿಕೆಟ್ ಬುಕ್ ಮಾಡಲು ನೀವು 77609 91879 ಗೆ ಕರೆ ಮಾಡುವಂತೆ ತಿಳಿಸಲಾಗಿದೆ.












Click it and Unblock the Notifications