ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Varsha Wodeyar ಮಹಿಳಾ ಕೆಎಎಸ್‌ ಅಧಿಕಾರಿ 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ

|
Google Oneindia Kannada News

ಬೆಂಗಳೂರು, ನವೆಂಬರ್ 15; ಮಹಿಳಾ ಕೆಎಎಸ್ ಅಧಿಕಾರಿಯೊಬ್ಬರು 5 ಲಕ್ಷದ ಜೊತೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಶೇಷ ತಹಶೀಲ್ದಾರ್ ಆಗಿ ಅಧಿಕಾರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು.

ಮಂಗಳವಾರ ಬೆಂಗಳೂರಿನ ಕಂದಾಯ ಭವನದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ವಿಶೇಷ ತಹಶೀಲ್ದಾರ್ ವರ್ಷಾ ವಡೆಯರ್‌ 5 ಲಕ್ಷ ಲಂಚ ಸ್ವೀಕಾರ ಮಾಡುವಾಗ ಈ ದಾಳಿ ನಡೆದಿದೆ.

 ದಾವಣಗೆರೆ:7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ, ಪಾಲಿಕೆ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ ದಾವಣಗೆರೆ:7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ, ಪಾಲಿಕೆ ವ್ಯವಸ್ಥಾಪಕ ಲೋಕಾಯುಕ್ತ ಬಲೆಗೆ

Special Tahsildar Varsha Wodeyar Caught Red Handed By Lokayukta

ಖಾತೆ ಮಾಡಿಸುವ ವಿಚಾರವಾಗಿ ವರ್ಷಾ ವಡೆಯರ್ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಮಂಗಳವಾರ ಲಂಚ ಸ್ವೀಕಾರ ಮಾಡುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ, ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹೊಳಲ್ಕೆರೆ; ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ಎಸ್‌ಡಿಎ ಸಿಬ್ಬಂದಿ ಹೊಳಲ್ಕೆರೆ; ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ, ಎಸ್‌ಡಿಎ ಸಿಬ್ಬಂದಿ

ವರ್ಗಾವಣೆ ವಿವಾದ; ವರ್ಷಾ ವಡೆಯರ್ ಈ ಮೊದಲು ರಾಮನಗರ ಜಿಲ್ಲೆಯ ಕನಕಪುರ ಶಹಶೀಲ್ದಾರ್ ಆಗಿದ್ದರು. ಆಗ ಅವರನ್ನು ವರ್ಗಾವಣೆ ಮಾಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಹಲವಾರು ಸಂಘಟನೆಗಳು ಅವರ ಪರವಾಗಿ ನಿಂತು ಬೆಂಬಲ ನೀಡಿದ್ದವು, ಸಾಮಾಜಿಕ ಜಾಲತಾಣದಲ್ಲಿಯೂ ಅವರನ್ನು ಬೆಂಬಲಿಸಿ ಅಭಿಯಾನ ನಡೆದಿತ್ತು.

ಮೇಕೆದಾಟು ಹೋರಾಟ ಸಮಿತಿ ಅಧ್ಯಕ್ಷ ಮಲ್ಲಪ್ಪ ಎಂಬುವವರು ಮಾತನಾಡಿ, "ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಬಂದ ಫಲಿತಾಂಶದಿಂದ ಡಿಕೆ ಸಹೋದರರು ಪಾಠ ಕಲಿಯಬೇಕು. ತಾಲೂಕಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿರುವ ತಹಶೀಲ್ದಾರ್ ವರ್ಷಾ ವಡೆಯರ್‌ಗೆ ಚೇಲಾಗಳ ಮೂಲಕ ಕಿರುಕುಳ ನೀಡುವುದು ನಿಲ್ಲಿಸಬೇಕು" ಎಂದು ಆಗ್ರಹಿಸಿದ್ದರು.

"ತಾವು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲ ಎಂಬ ಕಾರಣಕ್ಕೆ ಡಿಕೆ ಸಹೋದರರು ತಮ್ಮ ಚೇಲಾಗಳ ಮೂಲಕ ನಾನಾ ರೀತಿಯ ಕಿರುಕುಳವನ್ನು ನೀಡಿ ಹೆಣ್ಣು ಮಗಳ ಕಣ್ಣಲ್ಲಿ ನೀರು ಹಾಕಿಸುತ್ತಿದ್ದಾರೆ" ಎಂದು ಆರೋಪಿಸಿದ್ದರು.

English summary
Special tahsildar and KAS officer Varsha Wodeyar caught red handed by lokayukta at Kandaya Bhavana, Bengaluru on November 15th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X