Government employee; ಸಾಮಾನ್ಯ ಸಭೆಗೆ ಹೋಗಲು ವಿಶೇಷ ಅನುಮತಿ

ಬೆಂಗಳೂರು, ಸೆಪ್ಟೆಂಬರ್ 08; ಕರ್ನಾಟಕ ಸರ್ಕಾರ ಸರ್ಕಾರಿ ಅಧಿಕಾರಿಗಳು ಸೆಪ್ಟೆಂಬರ್ 11ರಂದು ನಡೆಯುವ ಸಭೆಯಲ್ಲಿ ಪಾಲ್ಗೊಳ್ಳಲು ಅಧಿಕಾರಿ/ ನೌಕರರಿಗೆ ವಿಶೇಷ ಅನುಮತಿಯನ್ನು ನೀಡಿದೆ. 2022-23ನೇ ಸಾಲಿನ ವಾರ್ಷಿಕ ಸದಸ್ಯರ ಸಾಮಾನ್ಯ ಸಭೆ ನಡೆಯಲಿದೆ.

ವೀರಭದ್ರ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-1) ಈ ಕುರಿತು ಅಧಿಕೃತ ಜ್ಞಾಪನಾ ಪತ್ರವನ್ನು ಹೊರಡಿಸಿದ್ದಾರೆ. ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ) ಇವರ ದಿನಾಂಕ 28/8/2003ರ ಮನವಿಯನ್ನು ಉಲ್ಲೇಖ ಮಾಡಿದ್ದಾರೆ.

Special Permissions For Government Employees To Participate In September 11th Meeting

ಈ ಜ್ಞಾಪನಾ ಪತ್ರ ದಿನಾಂಕ 11/9/2023ರಂದು ನಡೆಯಲಿರುವ ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)ದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಭಾಗವಹಿಸುವ ಅಧಿಕಾರಿ/ ನೌಕರರಿಗೆ ವಿಶೇಷ ಅನುಮತಿ ನೀಡುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಜ್ಞಾಪನಾ ಪತ್ರದ ವಿವರ; ಉಲ್ಲೇಖಿತ ಪತ್ರದಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)ದ 2022-23ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯು ದಿನಾಂಕ 11/9/2023ರಂದು ಮಧ್ಯಾಹ್ನ 1.30ಗಂಟೆಗೆ ನಡೆಸಲು ಉದ್ದೇಶಿಸಲಾಗಿದ್ದು, ಸದರಿ ಸಭೆಯಲ್ಲಿ ಭಾಗವಹಿಸಲು ಅನುವಾಗುವಂತೆ ಅಧಿಕಾರಿ/ ನೌಕರರಿಗೆ ವಿಶೇಷ ಅನುಮತಿ ನೀಡುವಂತೆ ಕೋರಲಾಗಿತ್ತು.

ದಿನಾಂಕ 11/9/2023ರಂದು ಮಧ್ಯಾಹ್ನ 1.30 ಗಂಟೆಯಿಂದ ನಡೆಯುವ ಕರ್ನಾಟಕ ಸರ್ಕಾರ ಸಚಿವಾಲಯ ಸಹಕಾರ ಸಂಘ (ನಿ)ದ 2022-23 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಹಾಜರಾಗ ಬಯಸುವ ಅಧಿಕಾರಿ/ ನೌಕರರಿಗೆ ತಮ್ಮ ಮೇಲಾಧಿಕಾರಿಗಳ ಅನುಮತಿ ಪಡೆದು, ಸದರಿ ಸಭೆಯಲ್ಲಿ ಭಾಗವಹಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದೆ.

ಸೆಪ್ಟೆಂಬರ್ 11ರ ಸೋಮವಾರ ಮಧ್ಯಾಹ್ನ 1.30 ಗಂಟೆಯಿಂದ 3 ಗಂಟೆವರೆಗೆ (ಭೋಜನ ವಿರಾಮದ ಮಧ್ಯಾಹ್ನ 1.30 ರಿಂದ 2.10ರ ವೇಳೆಯನ್ನು ಒಳಗೊಂಡಂತೆ ವಿಶೇಷ ಅನುಮತಿ ನೀಡಲಾಗಿದೆ. ಸಂಬಂಧಿತ ಮೇಲಾಧಿಕಾರಿಗಳು ಶಾಖೆ/ ಕಚೇರಿಯ ಕೆಲಸಗಳಿಗೆ ತೊಡಕಾಗದಂತೆ ಎಚ್ಚರವಹಿಸಿ ಸಂಘದ ಸದಸ್ಯರಾಗಿರುವ ಅಧಿಕಾರಿ/ ನೌಕರರುಗಳಿಗೆ ಮಾತ್ರ ವಿಶೇಷ ಅನುಮತಿಯನ್ನು ಮಂಜೂರು ಮಾಡುವಂತೆ ಸೂಚಿಸಲಾಗಿದೆ.

ಸರ್ವಸದಸ್ಯರ ವಿಶೇಷ ಮಹಾಸಭೆ; ಮತ್ತೊಂದು ಕಡೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸರ್ವಸದಸ್ಯರ ವಿಶೇಷ ಮಹಾಸಭೆಯ ದಿನಾಂಕ ನಿಗದಿ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್‌ ಉದ್ಯಾನವನ, ಬೆಂಗಳೂರು ಇದರ 20220 ಉಪವಿಧಿಗಳನ್ನು ತಿದ್ದುಪಡಿ ಮಾಡಲು ಉದ್ದೇಶಿಸಲಾಗಿದೆ.

ಈ ವಿಷಯದ ಸೂಚಿಯನ್ವಯ 'ಸರ್ವಸದಸ್ಯರ ವಿಶೇಷ ಮಹಾಸಭೆ'ಯನ್ನು ವಾಸ್ತವ/ ವರ್ಚುವಲ್ ವಿಧಾನದ ಮೂಲಕ ದಿನಾಂಕ 1/10/2023ರ ಭಾನುವಾರ ಬೆಳಗ್ಗೆ 11 ಗಂಟೆಗೆ ಮಹಾವೀರ ಸಮುದಾಯ ಭವನ, ಹಿರೇ ಸಿಂದೋಗಿ ರಸ್ತೆ, ಗೋಶಾಲೆ ಹತ್ತಿರ, ಕೊಪ್ಪಳ, ಕೊಪ್ಪಳ ಜಿಲ್ಲೆ ಇಲ್ಲಿ ಸಂಘದ ರಾಜಾಧ್ಯಕ್ಷ ಸಿ. ಎಸ್‌. ಷಡಾಕ್ಷರಿ ಅಧ್ಯಕ್ಷತೆಯಲ್ಲಿ 'ಸರ್ವ ಸದಸ್ಯರ ವಿಶೇಷ ಮಹಾಸಭೆ'ಯನ್ನು ಆಯೋಜಿಸಲಾಗಿದೆ ಎಂದು ಹೇಳಿದೆ. ಸಂಘದ ಸರ್ವಸದಸ್ಯರು ಈ ವಿಶೇಷ ಮಹಾಸಭೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಲು ಕೋರಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+