ಇಂದು & ನಾಳೆ SMVT ಬೆಂಗಳೂರು – ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು, ಗುಡ್‌ನ್ಯೂಸ್
ಬೆಂಗಳೂರು, ಅಕ್ಟೋಬರ್ 05: ಭಾರತೀಯ ರೈಲ್ವೆ ಇಲಾಖೆಯ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು "ಟ್ರೇನ್ಸ್ ಆನ್ ಡಿಮ್ಯಾಂಡ್" ಯೋಜನೆಯಡಿ ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ಮಾರ್ಗದಲ್ಲಿ ಒಂದು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ಕಾರ್ಯಾಚರಣೆ ಮಾಡುತ್ತಿದೆ. ದಸರಾ ಹಬ್ಬದ ಪ್ರಯುಕ್ತ ಆಚರಣೆ ಮುಗಿಸಿ ಮರಳಿ ಬರುವವರಿಗೆ ಅನುಕೂಲವಾಗಲಿದೆ ಎಂದು ಈ ವಿಶೇಷ ಟ್ರಿಪ್ ಗಳ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಬೆಳಗಾವಿ-ಎಸ್‌ಎಂವಿಟಿ ಬೆಂಗಳೂರು ವಿಶೇಷ ರೈಲು (ಸಂಖ್ಯೆ 06221) ಅಕ್ಟೋಬರ್ 05 ರಂದು ಭಾನುವಾರ) ಬೆಳಗಾವಿಯಿಂದ ರಾತ್ರಿ 8:00 ಗಂಟೆಗೆ ಹೊರಟು, ಅಕ್ಟೋಬರ್ 06 ರಂದು ಬೆಳಗ್ಗೆ 8:30ಕ್ಕೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ಬಂದು ತಲುಪಲಿದೆ.

ನಿಲುಗಡೆ ನಿಲ್ದಾಣಗಳ ಪಟ್ಟಿ
ಈ ಮಾರ್ಗದದಲ್ಲಿ ಸಾಗುವ ರೈಲು ಲೊಂಡಾ (8:53 ಗಂಟೆಗೆ), ಅಳ್ನಾವರ (9:30 PM), ಧಾರವಾಡ (10:08 PM), ಹುಬ್ಬಳ್ಳಿ (10:40 PM), ಹಾವೇರಿ (12:16 AM), ಹರಿಹರ (1:03 AM), ದಾವಣಗೆರೆ (1:28 AM), ಬೀರೂರು (2:58 AM), ಅರ್ಸೀಕೆರೆ (3:45 AM), ತುಮಕೂರು (5:18 AM), ಚಿಕ್ಕಬಳ್ಳಾಪುರ (6:12 AM) ದಲ್ಲಿ ನಿಲುಗಡೆ ನೀಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಎಸ್‌ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ರೈಲು (ಸಂಖ್ಯೆ 06222) ಈ ರೈಲು ಅಕ್ಟೋಬರ್ 06 ಸೋಮವಾರ ರಾತ್ರಿ 9:00 ಗಂಟೆಗೆ ಎಸ್‌ಎಂವಿಟಿ ಬೆಂಗಳೂರು ನಿಲ್ದಾಣದಿಂದ ಹೊರಟು, ಅಕ್ಟೋಬರ್ 07 ರಂದು ಬೆಳಗ್ಗೆ 8:30ಕ್ಕೆ ಬೆಳಗಾವಿ ನಿಲ್ದಾಣವನ್ನು ಸೇರಲಿದೆ.
ನಿಲುಗಡೆ ನಿಲ್ದಾಣಗಳು ಯಾವುವು?
ಈ ಮಾರ್ಗದಲ್ಲಿ ರೈಲು ಚಿಕ್ಕಬಳ್ಳಾಪುರ ರೈಲು ನಿಲ್ದಾಣಕ್ಕೆ (9:38 ಗಂಟೆಗೆ) ಬರಲಿದೆ. ನಂತರ ತುಮಕೂರು (10:56 PM), ಅರ್ಸೀಕೆರೆ (11:55 PM), ಬೀರೂರು (12:40 AM), ದಾವಣಗೆರೆ (2:03 AM), ಹರಿಹರ (2:20 AM), ಹಾವೇರಿ (3:12 AM), ಹುಬ್ಬಳ್ಳಿ (5:00 AM), ಧಾರವಾಡ (5:33 AM), ಅಳ್ನಾವರ (6:10 AM), ಲೊಂಡಾ (6:48 AM) ನಿಲ್ದಾಣದಲ್ಲಿ ನಿಲುಗಡೆ ನೀಡಿ ಬೆಳಗಾವಿ ತಲುಪಲಿದೆ. ಈ ವಿಶೇಷ ರೈಲುಗಳು ಪ್ರಯಾಣಿಕರ ಬೇಡಿಕೆಯನ್ನು ಗಮನಿಸಿ ಕೇವಲ ಒಂದು ಟ್ರಿಪ್‌ಗೆ ಮಾತ್ರ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.











Click it and Unblock the Notifications