ಏಳು ದಿನದಲ್ಲಿ 15 ಗಂಟೆ ಅಷ್ಟೆ ನಡೆದಿರುವ ಸದನ: ಸ್ಪೀಕರ್ ಬೇಸರ

ಬೆಂಗಳೂರು, ಫೆಬ್ರವರಿ 14: ಈ ಬಾರಿ ಬಜೆಟ್ ಅಧಿವೇಶನವು ಕೇವಲ ಗೊಂದಲ, ಗದ್ದಲಗಳಲ್ಲಿಯೇ ಕಳೆದು ಹೋಗುತ್ತಿರುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಸದನದ ಬಾವಿಗಿಳಿದು ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು, 'ಸದನದಲ್ಲಿ ಈ ರೀತಿಯ ಗದ್ದಲದ ವಾತಾವರಣ ನಿರ್ಮಾಣ ಆಗಿರುವುದು ಕಂಡರೆ ನನ್ನ ಹೃದಯ ಕಿತ್ತು ಬರುತ್ತದೆ' ಎಂದು ರಮೇಶ್ ಕುಮಾರ್ ನೊಂದುಕೊಂಡರು.

ಸದನದಲ್ಲಿ ಇಂದು ಮಾತನಾಡಿದ ಅವರು, ಯಾವುದೇ ಚರ್ಚೆಯೇ ಇಲ್ಲದೆ ಬಜೆಟ್ ಅಂಗೀಕಾರವಾಗಿದೆ, ನಾವು ಮನೆಗೆ ವಸ್ತುಗಳನ್ನು ತರಲು ನೂರು ಅಂಗಡಿ ಅಡ್ಡಾಡುತ್ತೇವೆ, ಮನೆಯಲ್ಲಿ ಚರ್ಚೆ ಮಾಡುತ್ತೇವೆ ಆದರೆ ರಾಜ್ಯದ ಭವಿಷ್ಯ ನಿರ್ಧರಿಸುವ ಬಜೆಟ್‌ ಬಗ್ಗೆ ಚರ್ಚೆಯೇ ಆಗದಿರಿವುದು ದುರಾದೃಷ್ಟಕರ ಎಂದರು.

Speaker Ramesh Kumar upset about debate not happening in session

ಸದನದ ಕಾರ್ಯಕಲಾಪದ ವರದಿಗಳನ್ನು ಓದಿ ಹೇಳಿದ ರಮೇಶ್‌ ಕುಮಾರ್, ಏಳು ದಿನದಲ್ಲಿ 15 ಗಂಟೆ 10 ನಿಮಿಷವಷ್ಟೆ ಸದನ ನಡೆದಿದೆ ಎಂದು ಹೇಳಿದರು. ತೆರಿಗೆ ಹಣ ವ್ಯಯ ಮಾಡಿ ಸದನ ನಡೆಸುವಾಗ ಹೀಗೆ ಆಗಬಾರದು, ನಾನು ಯಾರನ್ನೂ ಪರ ಅಥವಾ ವಿರೋಧ ವಹಿಸಿ ಮಾತನಾಡುತ್ತಿಲ್ಲ ಎಂದರು.

ಬಿಜೆಪಿ ಸದಸ್ಯರು ಗದ್ದಲ ಮುಂದುವರೆಸಿದಾಗ, ಸ್ವಲ್ಪ ಮ್ಯಾನರ್ಸ್‌ ಇರಬೇಕಾಗುತ್ತೆ, ಇವರನ್ನೆಲ್ಲಾ ಯಾರು ಇಲ್ಲಿಗೆ ಆರಿಸಿ ಕಳಿಸುತ್ತಾರೆ' ಎಂದು ಒಮ್ಮೆ ಸಿಟ್ಟಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+