ಸೌಜನ್ಯ ಪೋಷಕರನ್ನು ಬಲವಂತವಾಗಿ ಒಪ್ಪಿಸಲಾಯಿತೇ?
ಪ್ರ: ಸೌಜನ್ಯ ಕೊಲೆ ಪ್ರಕರಣ ಮರುಜೀವ ಪಡೆಯಲು ಸೌಜನ್ಯ ಪೋಷಕರು ಆತ್ಮಸಾಕ್ಷಿಯಾಗಿ ಒಪ್ಪಿದರೇ ಅಥವಾ ಅವರನ್ನು ಬಲವಂತದಿಂದ ಒಪ್ಪಿಸಲಾಯಿತೇ. ಈ ಪ್ರಕರಣದಲ್ಲಿ ಆಕೆಯ ಪೋಷಕರನ್ನು ಹರಕೆಯ ಕುರಿ ಮಾಡಲಾಗುತ್ತಿದೆಯೇ?
ಶೆಟ್ಟಿ: ಸೌಜನ್ಯ ಕೊಲೆ ಪ್ರಕರಣ ಹೊರಬಾರದೆಂದು ಬಲವಂತ ಪಡಿಸಿದ್ದು ನಾವಲ್ಲ, ಅವರು. ಒಂದು ವರ್ಷಗಳ ಕಾಲ ಮನೆಯಿಂದ ಹೊರಗೆ ಬಾರದ ಹಾಗೆ, ಕೇಸಿನ ಬಗ್ಗೆ ಯಾರ ಬಳಿಯೂ ಬಾಯಿ ಬಿಡದ ಹಾಗೆ ಬೆದರಿಕೆ ಹಾಕಿದ್ದರು. ಈಗ ನಮ್ಮ ಬೆಂಬಲದಿಂದ ಅವರ ಪೋಷಕರು ಹೋರಾಟದಲ್ಲಿ ಧುಮುಕಿದ್ದಾರೆ. ತನ್ನ ಮಗಳಿಗೆ ಬಂದ ಸಾವು ಮತ್ತು ಅದರಿಂದ ನಮಗಾತ್ತಿರುವ ನೋವು ಜಗತ್ತಿನಲ್ಲಿ ಯಾರಿಗೂ ಬರದಿರಲಿ ಎನ್ನುವುದು ಸೌಜನ್ಯ ಪೋಷಕರ ನಿಲುವು.
ಪ್ರ: ಸೌಜನ್ಯ ಕೊಲೆ ಪ್ರಕರಣ ಸಂಬಂಧ ನಡೆಯುತ್ತಿರುವ ಹೋರಾಟಗಳು ಧರ್ಮಸ್ಥಳ ಮತ್ತು ಹೆಗ್ಗಡೆಯವರನ್ನು ಟಾರ್ಗೆಟ್ ಮಾಡಲು ಎನ್ನಲಾಗುತ್ತಿದೆಯಲ್ಲಾ?
ಶೆಟ್ಟಿ: ನಾವು ನಂಬುವ ದೇವರು ಮಂಜುನಾಥ ಮತ್ತು ಅಣ್ಣಪ್ಪ. ಧರ್ಮಸ್ಥಳದ ಹೆಸರಿಗೆ ಕಪ್ಪುಚುಕ್ಕೆ ಬರಬಾರದೆನ್ನುವುದು ನಮ್ಮ ಉದ್ದೇಶ. ಪ್ರಾಯಶಃ ಧರ್ಮಸ್ಥಳದಲ್ಲಿ ಮಂಜುನಾಥ ಮತ್ತು ಅಣ್ಣಪ್ಪನಿಗೂ ನೆಲೆಸಲಾಗದ ಸ್ಥಿತಿ ಇದ್ದಿರಬಹುದು. ನಾವು ನಂಬಿದ ದೇವಸ್ಥಾನಕ್ಕೆ ಬಂದಿರುವ ಕಪ್ಪುಚುಕ್ಕೆ ಹೋಗಲಾಡಿಸುವುದು ನಮ್ಮ ಉದ್ದೇಶ. ನಮ್ಮ ಹೋರಾಟ ಸೌಜನ್ಯಳಿಗೆ ನ್ಯಾಯ ಸಿಗಬೇಕಷ್ಟೇ. ನಾನು ಹಿಂದೂ, ಎಂದಿಗೂ ಈ ನಾಡಿನ ಧರ್ಮದೇಗುಲಕ್ಕೆ ಕಪ್ಪುಚುಕ್ಕೆ ತರುವ ಕೆಲಸವನ್ನು ಮಾಡುವುದಿಲ್ಲ.
ಪ್ರ: ಬೆಳ್ತಂಗಡಿ ಶಾಸಕ ವಸಂತ ಬಂಗೇರ ಸಿಬಿಐ ತನಿಖೆಯಾಗ ಬೇಕು ಅನ್ನುತ್ತಿದ್ದಾರೆ. ಶಾಸಕರ ಮೂಲಕ ಸರಕಾರಕ್ಕೆ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆಯಾ?
ಶೆಟ್ಟಿ: ವಸಂತ ಬಂಗೇರ ಅವರು ಹತ್ತಾರು ವರ್ಷಗಳಿಂದ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಸಿಐಡಿ ತನಿಖೆಯಿಂದ ಏನೂ ಪ್ರಯೋಜನವಿಲ್ಲ ಎನ್ನುವುದು ಅವರಿಗೂ ಗೊತ್ತಿರುವ ವಿಚಾರ. ಸಿಬಿಐ ತನಿಖೆಗೆ ಸಿಎಂ ಒಪ್ಪಿಸಿಯೇ ಕ್ಷೇತ್ರಕ್ಕೆ ಕಾಲಿಡುತ್ತೇನೆ ಎಂದಿದ್ದಾರೆ. ನೋಡೋಣ.
ಪ್ರ: ಅವಳಿ ಜಿಲ್ಲೆಯ ಶಾಸಕರು ಮತ್ತು ಸಚಿವರ ಸಹಕಾರ ನಿಮಗೆ ಸಿಗುತ್ತಿಲ್ಲ ಎನ್ನುವ ಆರೋಪವಿದೆ?
ಶೆಟ್ಟಿ: ಹೌದು. ಬಂಗೇರ ಹೊರತುಪಡಿಸಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ಯಾವ ಶಾಸಕರೂ, ಸಚಿವರೂ ಈ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸುತ್ತಿಲ್ಲ. ವಿನಯ್ ಕುಮಾರ್ ಸೊರಕೆಯಂತಹ ಜವಾಬ್ದಾರಿಯುತ ಸಚಿವರೂ ಅವರ ರಕ್ಷಣೆಗೆ ನಿಂತಿದ್ದಾರೆ. ಇದೆಲ್ಲಾ ನಮಗೆ ಬಹಳ ನೋವಿದೆ. ನಾವು ದೇವರನ್ನು ನಂಬಿದವರು. ನಮ್ಮ ಹೋರಾಟದಲ್ಲಿ ಸತ್ಯ ಇದ್ದರೆ ಆ ಮಂಜುನಾಥನೇ ನಮಗೆ ನ್ಯಾಯ ಕೊಡಿಸುತ್ತಾನೆ ಎನ್ನುವ ಅಚಲ ನಂಬಿಕೆಯಲ್ಲಿದ್ದೇವೆ.

ಪ್ರ: ಸ್ಥಳೀಯ ಜನರ ಬೆಂಬಲ ಹೋರಾಟಕ್ಕೆ ಎಷ್ಟರ ಮಟ್ಟಿಗೆ ಸಿಗುತ್ತಿದೆ? ಸೌಜನ್ಯ ಕೇಸಿನ ಮೂಲಕ ಹೆಗ್ಗಡೆ ಕುಟುಂಬದ ಮೇಲಿನ ಸಿಟ್ಟನ್ನು ತೀರಿಸಿ ಕೊಳ್ಳಲಾಗುತ್ತಿದೆ. ಅದಕ್ಕಾಗಿಯೇ ಬಂದ್ ನಡೆದ ದಿನ ಬೆಳ್ತಂಗಡಿಯ ಇತಿಹಾಸದಲ್ಲೇ ಅತಿ ಹೆಚ್ಚು ಜನ ಸೇರಿದ್ದರು ಎನ್ನಲಾಗುತ್ತಿದೆಯಲ್ಲಾ?
ಶೆಟ್ಟಿ: ಬೆಳ್ತಂಗಡಿಯ ಇತಿಹಾಸದಲ್ಲಿ ದಾಖಲೆ ಬರೆದ ಸಮಾವೇಶ. ಬಂದ ಜನರಲ್ಲಿ ಅವರ ಮತ್ತು ಅವರ ಕುಟುಂಬದ ಮೇಲೆ ಸ್ಥಳೀಯರಿಗೆ ಬೇಸರವಿದೆ, ನೋವಿದೆ. ಸುಮಾರು ಎಪ್ಪತ್ತರಿಂದ ಎಂಬತ್ತು ಸಾವಿರ ಜನ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಅಕ್ಕಿ, ಬೇಳೆ ದೇಣಿಗೆ ನೀಡಿದರು. ಕೇವಲ ಒಂದೇ ವಾರದ ಹಿಂದೆ ನಾವು ಈ ಸಮಾವೇಶದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆವು. ಆ ಸಭೆಯಲ್ಲಿ ಐದು, ಹತ್ತು ಎಂದು 209,000/- ರೂಪಾಯಿ ಮೊತ್ತ ದೇಣಿಗೆ ಸಂಗ್ರಹವಾಗಿತ್ತು. ಸ್ಥಳೀಯರು ಇಲ್ಲಿ ನಡೆಯುತ್ತಿರುವ ದೌರ್ಜನ್ಯ ನೋಡುತ್ತಾ ಬರುತ್ತಾ ಇದ್ದಾರೆ. ಸಹನೆಗೂ ಒಂದು ಮಿತಿಯಿದೆ ಅಲ್ಲವೇ? ಡಾ. ವೇದವಳ್ಳಿ ಅರಳಿ ಮತ್ತು ಪದ್ಮಲತಾ ಸಾವಿನ ಪ್ರಕರಣ ಸ್ಥಳೀಯರು ಇನ್ನೂ ಮರೆತಿಲ್ಲ.
ಪ್ರ: ಉಜಿರೆಯ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳನ್ನು ಹೋರಾಟಕ್ಕೆ ಇಳಿಯದಂತೆ ಕಾಲೇಜಿನ ಆಡಳಿತ ಮಂಡಳಿ ಕಟ್ಟಪ್ಪಣೆ ಮಾಡಿದೆ ಎನ್ನುವ ಮಾತಿದೆ. ಇದಕ್ಕೆ ನಿಮ್ಮ ಉತ್ತರ?
ಶೆಟ್ಟಿ: ಅಲ್ಲಿ ಬ್ರಿಟಿಷ್ ಆಡಳಿತ ನಡೆಯುತ್ತಿದೆ. ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದರೆ ಟಿಸಿ ಕೊಟ್ಟು ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಲಾಗುತ್ತಿದೆ. ಕಾಲೇಜು ಆಡಳಿತ ಮಂಡಳಿಯ ಬೆದರಿಕೆಯ ಹೊರತಾಗಿಯೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ನನ್ನ ವಿರುದ್ದ ಕೂಡಾ ಕಳೆದ 22ನೇ ತಾರೀಕಿನಂದು ಶತ್ರುಸಂಹಾರ ಹೋಮ, ಪ್ರತ್ಯಂಗಿರಾ ಹೋಮ ನಡೆಸಲಾಗಿತ್ತು. ನನ್ನ ಮೇಲೂ ಕೇಸು ದಾಖಲಾಗಿದೆ. ಆದರೆ ಧರ್ಮಸ್ಥಳದ ದೇವಾಲಯದ ಹೆಸರು ಉಳಿಸುವ ಕೆಲಸಕ್ಕೆ ನಾನು ಮುಂದಾಗಿದ್ದಾನೆ. ನನ್ನ ಮೇಲೆ ಮಂಜುನಾಥ ಮತ್ತು ಅಣ್ಣಪ್ಪನ ರಕ್ಷೆ ಇರುತ್ತದೆ.
ಪ್ರ: ಕೊನೆಯದಾಗಿ, ಒಂದು ವೇಳೆ ಸಿಬಿಐ ತನಿಖೆಗೆ ಸರಕಾರ ಒಪ್ಪದಿದ್ದಲ್ಲಿ, ನಿಮ್ಮ ಮುಂದಿನ ನಡೆ?
ಶೆಟ್ಟಿ: ನಮ್ಮ ಬೇಡಿಕೆ ಬರೀ ಸಿಬಿಐ ತನಿಖೆಯಲ್ಲ. ಸಿಬಿಐ ಅಧಿಕಾರಿಗಳೂ ಧರ್ಮಸ್ಥಳಕ್ಕೆ ಬಂದು ಮಂಜುನಾಥನಿಗೆ ನಮಸ್ಕಾರ ಮಾಡಿ ಹೋಗುವವರು ಇದ್ದಾರೆ. ಅವರನ್ನು ಬುಟ್ಟಿಗೆ ಹಾಕಿಕೊಳ್ಳುವುದಿಲ್ಲ ಎನ್ನುವುದು ಏನು ಗ್ಯಾರಂಟಿ? ಹಾಗಾಗಿ ಸುಪ್ರೀಂಕೋರ್ಟ್ ಸುಪರ್ದಿಯಲ್ಲಿ ಸಿಬಿಐ ತನಿಖೆ ಆಗಬೇಕೆನ್ನುವುದು ನಮ್ಮ ಬೇಡಿಕೆ. ನಮ್ಮ ಬೇಡಿಕೆಗೆ ಸರಕಾರ ಒಪ್ಪದಿದ್ದಲ್ಲಿ ಪಿಐಎಲ್ ಹಾಕುತ್ತೇವೆ. ಅದಕ್ಕೂ ಒಪ್ಪದಿದ್ದರೆ ರಕ್ತಕ್ರಾಂತಿ ಆಗುತ್ತದೆ.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
ಹೈಟೆಕ್ ಬೆಂಗಳೂರು ಬಿಸಿನೆಸ್ ಕಾರಿಡಾರ್: 65ಮೀ ವಿಸ್ತರಣೆ, ಮೆಟ್ರೋ-ಸೈಕಲ್ ಟ್ರ್ಯಾಕ್ಗಳೂ ಲಭ್ಯ; ವಿನ್ಯಾಸ ವಿವರ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
Bengaluru Road: ಬನ್ನೇರುಘಟ್ಟ ರಸ್ತೆ ಪ್ರಯಾಣಿಕರಿಗೆ ಗುಡ್ನ್ಯೂಸ್: ಸಮಗ್ರ ಅಭಿವೃದ್ಧಿಗೆ ಜಿಬಿಎ ಮಾಸ್ಟರ್ ಪ್ಲಾನ್ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Iran 10 Demands: ಕದನ ವಿರಾಮಕ್ಕೆ ಇರಾನ್ ವಿಧಿಸಿರುವ 10 ಷರತ್ತುಗಳ ವಿವರ ಇಲ್ಲಿದೆ, ನ್ಯೂಕ್ಲಿಯರ್ ಬೇಡ ಎಂದಿದ್ಯಾಕೆ -
Karnataka Rain: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಈ ಭಾಗಗಳಲ್ಲಿ ಭಾರೀ ಮಳೆ: ಐಎಂಡಿ -
ನಿಮ್ಮ ಸಂಬಳಕ್ಕೆ ಎಷ್ಟು ಬೆಲೆಯ ಮನೆ ಖರೀದಿಸಬಹುದು? Viral ಆಗುತ್ತಿದೆ ಬೆಂಗಳೂರಿನ ಸಿಎ ತಿಳಿಸಿದ 20-30-40 ರೂಲ್ -
Bengaluru Rent House: ಬೆಂಗಳೂರಲ್ಲಿ 1 BHK ಬಾಡಿಗೆ ಮನೆ ಸ್ಕ್ಯಾಮ್; 30,000 ಕೊಟ್ಟರೂ ಒಳ್ಳೆ ಮನೆ ಸಿಗ್ತಿಲ್ಲ, ವೈರಲ್ ಪೋಸ್ಟ್ -
Donald Trump: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಕಳಪೆ ಕೆಲಸ ಮಾಡಿದೆ: ಡೊನಾಲ್ಡ್ ಟ್ರಂಪ್ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
Gold Rate April 8: ಯುದ್ಧ ನಿಂತ ಬೆನ್ನಲ್ಲೇ ಚಿನ್ನ - ಬೆಳ್ಳಿ ಬೆಲೆ ಭಾರೀ ಹೆಚ್ಚಳ, ಎಷ್ಟಿದೆ ಇಂದಿನ ಚಿನ್ನದ ಬೆಲೆ












Click it and Unblock the Notifications