ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇಲೆ ಕವಿದುಕೊಂಡು ಕುಳಿತಿದೆ ಮೋಡ, ಮಳೆ ಬರುತ್ತಾ ನೋಡಾ!

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 27: ನವೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಇನ್ನೂ ಬೆಂಗಳೂರಿಗರ ಮೈಗೆ ಚಳಿ ತಟ್ಟಿಲ್ಲ ಎಂಬ ಚಿಂತೆಯಲ್ಲಿರುವಾಗಲೇ ಕಾರ್ಮೋಡಗಳು ಕಳೆದೆರಡು ದಿನಗಳಿಂದ ಆಗಸದಲ್ಲಿ ಜೂಜಾಟವಾಡ ತೊಡಗಿವೆ. ಮಳೆ ಬರುವ ನಿರೀಕ್ಷೆ ಹೊತ್ತವರಿಗೆ ಇಲ್ಲಿದೆ ಸುದ್ದಿ...

ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!ನವೆಂಬರ್ ಮುಗೀತಾ ಬಂತು, ಬೆಂಗಳೂರಲ್ಲಿ ಚಳಿ ಎಲ್ಲಿ..?!

ನೈಋತ್ಯ ಮಳೆ ಮಾರುತಗಳ ಮಾಯವಾದ ಬಳಿಕ ಒಂದೆರಡು ಬಾರಿ ಮಳೆ ಬಿದ್ದಿದ್ದು ಬಿಟ್ಟರೆ, ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಒಣಹವೆ ಮುಂದುವರೆದಿತ್ತು. ಆದರೆ, ತಿಂಗಳ ಕೊನೆಗೆ ಮತ್ತೆ ಮಳೆ ಮೋಡಗಳು ಆವರಿಸತೊಡಗಿವೆ.

South Interior Karnataka expecting light rain and thundershowers Nov 27-29

ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳ ಕೆಲ ಪ್ರದೇಶದಲ್ಲಿ ಸೋಮವಾರದಿಂದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹಾಗೂ ಸ್ಕೈ ಮ್ಯಾಟ್ ವರದಿ ಹೇಳುತ್ತಿದೆ. ನವೆಂಬರ್ 27 ರಿಂದ 29ರೊಳಗೆ ಮಳೆ ನಿರೀಕ್ಷಿಸಬಹುದು.

ವಿಡಿಯೋ : ಮಹಾ ಮಳೆಗೆ ತತ್ತರಿಸಿದ ಮುಂಬೈವಿಡಿಯೋ : ಮಹಾ ಮಳೆಗೆ ತತ್ತರಿಸಿದ ಮುಂಬೈ

ಬಂಗಾಳಕೊಲ್ಲಿಯ ನೈಋತ್ಯ ಭಾಗದಲ್ಲಿ ಶ್ರೀಲಂಕಾ ಸಮೀಪ ಮೇಲ್ಮೈ ಸುಳಿಗಾಳಿ ಸಹಿತ ಅಲ್ಪ ಪ್ರಮಾಣದ ವಾಯುಭಾರ ಕುಸಿತ ಉಂಟಾಗಿದೆ. ತಮಿಳುನಾಡು, ಕೇರಳ ಹಾಗೂ ಲಕ್ಷದ್ವೀಪ ಪ್ರದೇಶದಲ್ಲಿ ಸೋಮವಾರದಿಂದ ಹಿಂಗಾರು ಚುರುಕುವ ಸಾಧ್ಯತೆ ಕಂಡು ಬಂದಿದೆ.

ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇನ್ನೆರಡು ದಿನಗಳ ಮುಂದುವರೆಯಲಿದ್ದು, ತುಂತುರು ಹಾಗೂ ಗುಡುಗು ಸಹಿತ ಮಳೆ ಸಾಧ್ಯತೆಯಿದೆ.

English summary
According to Skymet Weather, South Interior Karnataka expecting light rain and thundershowers from November 27-29.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X