ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಜೆಟ್ ವಿರುದ್ದ ಕೆಲವು ಕಾಂಗ್ರೆಸ್ ನಾಯಕರ ಅತೃಪ್ತಿ!

By Gururaj
|
Google Oneindia Kannada News

Recommended Video

Karnataka Budget 2018 : ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ

ಬೆಂಗಳೂರು, ಜುಲೈ 06 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ ಬಳಿಕ ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ತುರ್ತಾಗಿ ಸಮನ್ವಯ ಸಮಿತಿ ಸಭೆ ಕರೆಯುವಂತೆ ನಾಯಕರು ಒತ್ತಾಯಿಸಿದ್ದಾರೆ.

ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಲಾಗಿದೆ ಎಂದು ಕೆಲವು ನಾಯಕರು ಅಸಮಾಧಾನಗೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ ಎಂದು ಕೆಲವು ನಾಯಕರು ಆರೋಪ ಮಾಡಿದ್ದು, ಸಮನ್ವಯ ಸಮಿತಿ ಸಭೆ ಕರೆಯಲಿ ಎಂದು ಆಗ್ರಹಿಸಿದ್ದಾರೆ.

ಉ. ಕರ್ನಾಟಕ, ಕರಾವಳಿಗೆ ಎಚ್‌ಡಿಕೆ ಕೊಟ್ಟಿದ್ದೇನು? ಅಭಿಮಾನಿಗಳು ಮುಂದಿಟ್ಟ ಪಟ್ಟಿ ಇದುಉ. ಕರ್ನಾಟಕ, ಕರಾವಳಿಗೆ ಎಚ್‌ಡಿಕೆ ಕೊಟ್ಟಿದ್ದೇನು? ಅಭಿಮಾನಿಗಳು ಮುಂದಿಟ್ಟ ಪಟ್ಟಿ ಇದು

ಕಾಂಗ್ರೆಸ್ ನಾಯಕರಾದ ಎಚ್.ಕೆ.ಪಾಟೀಲ್, ಡಿ.ಕೆ.ಸುರೇಶ್, ಜಮೀರ್ ಅಹಮದ್ ಖಾನ್, ತನ್ವೀರ್ ಸೇಠ್ ಸೇರಿದಂತೆ ವಿವಿಧ ನಾಯಕರು ಬಜೆಟ್‌ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ನಾಯಕರ ಮುಂದಿನ ನಡೆದ ಕುತೂಹಲಕ್ಕೆ ಕಾರಣವಾಗಿದೆ.

ಮೈತ್ರಿ ಸರ್ಕಾರದ ಬಜೆಟ್‌ಗೆ ಮಂತ್ರಿಗಳಿಂದಲೇ ಅಸಮಾಧಾನ!ಮೈತ್ರಿ ಸರ್ಕಾರದ ಬಜೆಟ್‌ಗೆ ಮಂತ್ರಿಗಳಿಂದಲೇ ಅಸಮಾಧಾನ!

Some Congress leaders upset with Karnataka budget 2018-19

'ಬಜೆಟ್‌ನಲ್ಲಿ ಉತ್ತರ ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಯಾವುದೇ ಯೋಜನೆ, ಅನುದಾನವನ್ನು ನಿಗದಿತವಾಗಿ ನೀಡಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷಕ್ಕೆ ಅಲ್ಪ ಸಂಖ್ಯಾತರು ಮತ ಹಾಕಿದ್ದರು. ಅವರನ್ನು ಬಜೆಟ್‌ನಲ್ಲಿ ಕಡೆಗಣಿಸಲಾಗಿದೆ' ಎಂದು ಎಚ್.ಕೆ.ಪಾಟೀಲ್ ಆರೋಪಿಸಿದರು.

ಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlightsಕರ್ನಾಟಕ ಬಜೆಟ್ 2018 : ಕುಮಾರಸ್ವಾಮಿ ಆಯವ್ಯಯದ Highlights

'ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಉತ್ತರ ಕರ್ನಾಟಕ ಭಾಗಕ್ಕೆ ವಿವಿಧ ಯೋಜನೆಗಳನ್ನು ಘೋಷಣೆ ಮಾಡಬೇಕು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ತಕ್ಷಣ ಸಭೆ ಕರೆದು ಆಗಿರುವ ಅನ್ಯಾಯ ಸರಿಪಡಿಸಬೇಕು' ಎಂದು ಎಚ್.ಕೆ.ಪಾಟೀಲ್ ಒತ್ತಾಯಿಸಿದ್ದಾರೆ.

English summary
Some Congress leaders upset with state budget 2018-19 presented by Chief Minister H.D.Kumaraswamy. Leaders alleged that in the budget development of north Karnataka neglected and minorities not get popular projects. Congress leaders demanded to call meeting of coordination committee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X