SM Krishna Statue: ವಿಧಾನಸೌಧ ಆವರಣದಲ್ಲಿ SMK ಪ್ರತಿಮೆ ನಿರ್ಮಾಣ ನಿರ್ಧಾರ ಶೀಘ್ರ
ಬೆಳಗಾವಿ, ಡಿಸೆಂಬರ್ 11: ಮುಖ್ಯಮಂತ್ರಿಯಾಗಿ, ವಿದೇಶಾಂಗ ಸಚಿವರಾಗಿ ರಾಜಕಾರಣ ಮೂಲಕ ಅಪಾರ ಕೊಡುಗೆ ನೀಡಿದ, ಸರಳ ಜೀವನ ಮೂಲಕ ಸ್ಪೂರ್ತಿಯಾಗಿರುವ ದಿವಂಗತ ಎಸ್.ಎಂ. ಕೃಷ್ಣ ಅವರು ನಮ್ಮನ್ನಗಲಿದ್ದಾರೆ. ಅವರ ಅಂತಿಮಕ್ರಿಯೆ ಇಂದು ಹುಟ್ಟೂರಿನಲ್ಲಿ ನಡೆಯಲಿದೆ. ಇತ್ತ ಬೆಳಗಾವಿ ಅಧಿವೇಶನದಲ್ಲಿ ಸಚಿವರು ಎಸ್.ಎಂ.ಕೃಷ್ಣ ಅವರ ಪ್ರತಿಮೆ ನಿರ್ಮಾಣವನ್ನು ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ ಮುಂದೆ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಸುದ್ದಿಗಾರರ ಜೊತೆಗೆ ಅಧಿವೇಶನ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ತಮ್ಮ ಮುಂದಿಟ್ಟ ಮನವಿಯನ್ನು ತಿಳಿಸಿದರು. ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಅಂದರೆ ವಿಕಾಸಸೌಧದ ಮುಂದೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪುತ್ಥಳಿ ನಿರ್ಮಿಸಬೇಕು ಎಂದು ಶಾಸಕರು ಕೋರಿದ್ದಾರೆ ಎಂದರು.

ಶಾಸಕರ ಮನವಿ ಪರಿಗಣಿಸಿ ಶೀಘ್ರವೇ ಈ ಬಗ್ಗೆ ಚರ್ಚಿಸಿ ತೀರ್ಮಾನ ಪ್ರಕಟಿಸಲಾಗುವುದು ಎಂದು ಅವರು ತಿಳಿಸಿದರು.
ಕಳೆದ ಆರು ತಿಂಗಳಿಂದ ತೀವ್ರ ಅನಾರೋಗ್ಯದಿಂದ ನರಳುತ್ತಿದ್ದ ಎಸ್.ಎಂ.ಕೃಷ್ಣ ಅವರು ಮಂಗಳವಾರ ನಸುಕಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಕಲಾಪವನ್ನು ಮೊಟಕುಗೊಳಿಸಲಾಯಿತು. ಅದಕ್ಕು ಮೊದಲು ಸಂತಾಪ ಸೂಚಿಸಲಾಯಿತು.
ಬುಧವಾರ ಸರ್ಕಾರಿ ಶಾಲಾ ಕಾಲೇಜುಗಳಿಗೆ, ಸರ್ಕಾರಿ ಕಚೇರಿಗಳಿಗೆ ಘೋಷಿಸಲಾಗಿದ್ದು, ಮೂರು ದಿನ ಶೋಕಾಚರಣೆ ಮಾಡಲಾಗುತ್ತದೆ. ಪುತ್ಥಳಿ ನಿರ್ಮಾಣ ಕುರಿತು ಶೀಘ್ರವೇ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅವರು ಪುನರಚ್ಚರಿಸಿದರು.
ಕರ್ನಾಟಕ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿದ್ದ ಎಸ್.ಎಂ. ಕೃಷ್ಣ ಅವರ ಸರಳ ಬದುಕು, ಕೆಲಸದ ಬದ್ಧತೆಯಿಂದ ಅವರು ಇತರರಿಗೂ ಸದಾ ಸ್ಫೂರ್ತಿದಾಯಕರು ಎಂದು ಅವರ ಅಗಲಿಕೆಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ರಾಜ್ಯ ರಾಜಕೀಯ ಗಣ್ಯರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
ಇದೇ ಡಿಸೆಂಬರ್ 20ರಿಂದ ನಡೆಯಲಿರುವ ಮೂರು ದಿನದ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಶುಭಾಶಯ ಕೋರಿ ಮಾಜಿ ಸಿಎಂ ದಿ.ಎಸ್.ಎಂ.ಕೃಷ್ಣ ಅವರು ಕೊನೆ ಪತ್ರ ಬರೆದಿದ್ದರು. ಕನ್ನಡ, ನಾಡು ನುಡಿ ಭಾಷೆ ವಿಚಾರದಲ್ಲಿ ಅಪಾರ ಅಭಿಮಾನ ಹೊಂದಿದವರಾಗಿದ್ದರು.
ಇಂದು ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವು ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸರ್ಕಾರಿ ಗೌರವದೊಂದಿಗೆ ಅಂತಿಮ ಕ್ರಿಯೆ ನಡೆಯಲಿದೆ.












Click it and Unblock the Notifications