ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೌರಿ ಹತ್ಯೆ ಮಾಡಲು ಗುಂಡು ಕೊಟ್ಟಿದ್ದು ಸರ್ಕಾರಿ ನೌಕರ!

By Manjunatha
|
Google Oneindia Kannada News

ಬೆಂಗಳೂರು, ಜುಲೈ 26: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಅದ್ಯಾವ ಮಟ್ಟಿಗೆ ಚುರುಕಾಗಿದೆಯೆಂದರೆ ಪ್ರತಿದಿನವೂ ಹೊಸ ಹೊಸ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕುತ್ತಲೇ ಇದೆ. ಆರೋಪಿಗಳ್ನು ಬಂಧಿಸುತ್ತಲೇ ಇದೆ.

ಅಂತಿಮವಾಗಿ ಸರ್ಕಾರಿ ನೌಕರನೊಬ್ಬನನ್ನು ಎಸ್‌ಐಟಿಯು ಬಂಧಿಸಿದ್ದು, ಆತನೇ ಗುಂಡುಗಳನ್ನು ನೀಡಿದ್ದು ಹಾಗೂ ಶಸ್ತ್ರಾಸ್ತ್ರ ಚಲಾಯಿಸಲು ತರಬೇತಿ ನೀಡಿದ್ದು ಎಂದು ಎಸ್‌ಐಟಿ ಆರೋಪಿಸುತ್ತಿದೆ.

ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ! ಅರೆ ಇದೇನಿದು? ಪರಶುರಾಮ್ ವಾಘ್ಮೋರೆ ಖುಲಾಸೆ!

ಮಡಿಕೇರಿಯ ರಾಜೇಶ್ ಡಿ ಬಂಗೇರನನ್ನು ಇತ್ತಿಚೆಗಷ್ಟೆ ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಆತ ವಿಧಾನಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರ ಆಪ್ತ ಕಾರ್ಯದರ್ಶಿಯಾಗಿದ್ದಾನೆ!

ಗುಂಡು ಕೊಟ್ಟಿದ್ದ ಸರ್ಕಾರಿ ನೌಕರ ರಾಜೇಶ್

ಗುಂಡು ಕೊಟ್ಟಿದ್ದ ಸರ್ಕಾರಿ ನೌಕರ ರಾಜೇಶ್

ಅಮೋಲ್ ಕಾಳೆಗೆ ಜೀವಂತ ಗುಂಡುಗಳನ್ನು ಈತನೇ ಕೊಟ್ಟಿದ್ದ ಎನ್ನಲಾಗಿದ್ದು, ಕೊಲೆಯ ದಿನ ಗೌರಿಯ ಎದೆ ಹೊಕ್ಕಿದ್ದ ಗುಂಡುಗಳನ್ನು ರಾಜೇಶನೇ ಕೊಟ್ಟಿದ್ದು ಎಂದು ಎಸ್‌ಐಟಿ ಹೇಳಿದೆ.

ಗೌರಿ ಲಂಕೇಶ್ ಹತ್ಯೆ : ಗನ್ ಮತ್ತು ಬೈಕ್‌ಗಾಗಿ ಎಸ್‌ಐಟಿ ಶೋಧಗೌರಿ ಲಂಕೇಶ್ ಹತ್ಯೆ : ಗನ್ ಮತ್ತು ಬೈಕ್‌ಗಾಗಿ ಎಸ್‌ಐಟಿ ಶೋಧ

ಶಸ್ತ್ರಾಸ್ತ್ರ ಪರಿಣಿತಿ

ಶಸ್ತ್ರಾಸ್ತ್ರ ಪರಿಣಿತಿ

ಶಸ್ತ್ರಾಸ್ತ್ರ ಬಳಸುವುದರಲ್ಲಿ ಪರಿಣಿತಿ ಹೊಂದಿದ್ದ ರಾಜೇಶ್ ಇತರರಿಗೆ ಶಸ್ತ್ರಾಸ್ತ್ರ ಚಲಾಯಿಸುವುದರ ಬಗ್ಗೆ ತರಬೇರಿ ಸಹ ನೀಡುತ್ತಿದ್ದ. ಪರಶುರಾಮ್ ವೋಘ್ಮೋರೆಗೂ ಈತನೇ ಬಂದೂಕು ಚಲಾಯಿಸುವುದನ್ನು ಹೇಳಿಕೊಟ್ಟಿದ್ದ ಎನ್ನಲಾಗಿದೆ.

20 ಗುಂಡುಗಳನ್ನು ಪಡೆದಿದ್ದ ಕಾಳೆ

20 ಗುಂಡುಗಳನ್ನು ಪಡೆದಿದ್ದ ಕಾಳೆ

ಗೌರಿ ಹತ್ಯೆಯ ಸೂತ್ರಧಾರಿ ಅಮೋಲ್ ಕಾಳೆಗೆ ರಾಜೇಶ್ ಒಟ್ಟು 20 ಜೀವಂತ ಗುಂಡುಗಳನ್ನು ನೀಡಿದ್ದ. ಹಾಗಾಗಿ ಇವರು ಸರಣಿ ಹತ್ಯೆಗಳಿಗೆ ಸ್ಕೆಚ್ ಹಾಕಿದ್ದರು ಎಂಬ ಅನುಮಾನ ಎಸ್‌ಐಟಿಯನ್ನು ಕಾಡುತ್ತಿದ್ದು. ಆ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ನಡೆಸಿದ್ದಾರೆ.

ಮೋಹನ್ ನಾಯಕ್ ಕೊಟ್ಟ ಸುಳಿವು

ಮೋಹನ್ ನಾಯಕ್ ಕೊಟ್ಟ ಸುಳಿವು

ಈ ಹಿಂದೆ ನವೀನ್ ಕುಮಾರ್ ನನ್ನು ಬಂಧಿಸಿದಾಗ ಆತ ಮಡಿಕೇರಿಯಲ್ಲಿ ಗುಂಡು ಮಾರಾಟ ಬರುವುದಾಗಿ ಹೇಳಿ ಬರಲಿಲ್ಲವೆಂದು ಹೇಳಿದ್ದ ಆದರೆ ಆತ ಯಾರೆಂಬುದು ಎಸ್‌ಐಟಿಗೆ ಗೊತ್ತಾಗಿರಲಿಲ್ಲ. ಆದರೆ ಮೊನ್ನೆಯಷ್ಟೆ ಸುಳ್ಯದಲ್ಲಿ ಮೋಹನ್ ನಾಯಕ್‌ನನ್ನು ಬಂಧಿಸಿದ ನಂತರ ಆತ ಹೇಳಿದ ಮಾಹಿತಿಯ ಮೇರೆಗೆ ರಾಜೇಶ್‌ ಡಿ ಬಂಗೇರನನ್ನು ಎಸ್‌ಐಟಿ ಬಂಧಿಸಿತು.

ಎಲ್ಲರನ್ನೂ ಬಂಧಿಸಿದೆಯಾ ಎಸ್‌ಐಟಿ?

ಎಲ್ಲರನ್ನೂ ಬಂಧಿಸಿದೆಯಾ ಎಸ್‌ಐಟಿ?

ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಬಂಧಿಸಿದ ಎಸ್‌ಐಟಿ ಗೌರಿ ಹತ್ಯೆಯ ಪ್ರಕರಣದಲ್ಲಿ ಮೊದಲಿಗೆ ಮಾಸ್ಟರ್‌ ಮೈಂಡ್ ಆದ ಅಮೋಲ್ ಕಾಳೆಯನ್ನು ಬಂಧಿಸಿತು ನಂತರ ಪ್ರವೀಣ್ , ಅಮಿತ್ ದಾಗ್ವೇಲ್ಕರ್‌ನನ್ನು ಬಂಧಿಸಿದ್ದರು. ಆ ನಂತರ ಗೌರಿಗೆ ಗುಂಡು ಹೊಡೆದ ಪರಶುರಾಮ್ ವಾಘ್ಮೋರೆಯ ಬಂಧನವಾಯ್ತು. ಆ ನಂತರ ಶಸ್ತ್ರಾಸ್ತ್ರ ಪೂರೈಸಿದ್ದ ಮೋಹನ್ ನಾಯ್ಕನ ಬಂಧಿಸಲಾಯಿತು. ಆ ನಂತರ ಅಂದು ಬೈಕ್ ಚಲಾಯಿಸಿದ್ದ ಗಣೇಶ್ ವಿಸ್ಕಿನ್ ಎಂಬಾತನನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದರು. ಈಗ ಗುಂಡು ನೀಡಿದ್ದ ರಾಜೇಶ್‌ನನ್ನು ಬಂಧಿಸಿದ್ದಾರೆ ಅಲ್ಲಿಗೆ ಹತ್ಯೆಯಲ್ಲಿ ಭಾಗವಹಿಸಿದ್ದ ಬಹತೇಕರನ್ನು ಎಸ್‌ಐಟಿ ಬಂಧಿಸಿದೆ.

ಗಿರೀಶ್ ಕಾರ್ನಾರ್ಡ್‌ ಹೆಸರು ಮೊದಲಿಗೆ

ಗಿರೀಶ್ ಕಾರ್ನಾರ್ಡ್‌ ಹೆಸರು ಮೊದಲಿಗೆ

ವಿಚಾರವಾದಿಗಳ ಕೊಲೆಗೆ ಹಂತಕರು ಹಿಟ್ ಲಿಸ್ಟ್ ತಯಾರಿಸಿದ್ದರು. ಅದರಲ್ಲಿ ನಾಟಕಕಾರ, ಜ್ಞಾನಪೀಠ ಪ್ರಶಸ್ತಿ ವಿಜೇತ ಗಿರೀಶ್ ಕಾರ್ನಾಡ್ ಅವರ ಹೆಸರು ಮೊದಲಿಗಿತ್ತು. ಎರಡನೇಯ ಹೆಸರು ಗೌರಿ ಲಂಕೇಶ್ ಅವರದ್ದಾಗಿತ್ತು. ಆದರೆ ಏಕೋ ಗೌರಿಯನ್ನೇ ಹಂತಕರು ಮೊದಲಿಗೆ ಇಲ್ಲವಾಗಿಸಿದರು. ಭಗವಾನ್, ನಿಡುಮಾಡಿ ಸ್ವಾಮಿ, ನಟರಾಜ್ ಹುಲಿಯಾರ್ ಅವರ ಹೆಸರುಗಳು ಈ ಲಿಸ್ಟ್‌ನಲ್ಲಿ ಇದ್ದವು.

ಘಟನೆ ದಿನ ನಡೆದದ್ದು ಏನು?

ಘಟನೆ ದಿನ ನಡೆದದ್ದು ಏನು?

ಬಂಗೇರಾನಿಂದ ಪಡೆದ ಗುಂಡುಗಳನ್ನು ಅಮೋಲ್ ಕಾಳೆಯ ಆಪ್ತ ಗೌರಿ ಹತ್ಯೆಯಲ್ಲಿ ಪ್ರಮುಖ ಮಾಸ್ಟರ್‌ ಮೈಂಡ್ ಪ್ರವೀಣ್ ಅಲಿಯಾಸ್ ಸುಜಿತ್ ಸುಳ್ಯದಲ್ಲಿ ಬಂಧಿತನಾದ ಮೋಹನ್ ನಾಯ್ಕಗೆ ಕೊಟ್ಟಿದ್ದ ಅದನ್ನು ಪಡೆದ ಆತ ಬಂದೂಕು ರೆಡಿ ಮಾಡಿ ಅದನ್ನು ಪ್ರವೀಣ್‌ಗೆ ನೀಡಿದ್ದ ಬಂದೂಕನ್ನು ಪ್ರವೀಣ್ , ಹುಬ್ಬಳ್ಳಿಯಲ್ಲಿ ಬಂದಿತನಾದ ಗಣೇಶ್ ವಿಸ್ಕಿನ್‌ಗೆ ನೀಡಿದ್ದ ಆತ ಬಂದೂಕು ಪಡೆದುಕೊಂಡು ಬೈಕ್ ತೆಗೆದುಕೊಂಡು ನಿಗದಿತ ಸ್ಥಳಕ್ಕೆ ಹೋಗಿ ಕೋಡ್‌ವರ್ಡ್‌ ಹೇಳಿ ಪರಶುರಾಮ್‌ನನ್ನು ಹತ್ತಿಸಿಕೊಂಡು ಗೌರಿ ಮನೆಯ ಬಳಿ ಹೋಗಿದ್ದ. ಗೌರಿಯನ್ನು ಹತ್ಯೆ ಮಾಡಿದ ನಂತರ, ಘಟನಾ ಸ್ಥಳದಿಂದ ಸುಮಾರು ಒಂದು ಕಿಲೊಮೀಟರ್ ದೂರ ನಿಂತಿದ್ದ ಕಾರಿನ ಬಳಿಕೆ ಕೆರದುಕೊಂಡು ಹೋಗಿ ಪರಶುರಾಮ್‌ನನ್ನು ಇಳಿಸಿ, ಆ ನಂತರ ಬಂದೂಕನ್ನು ಆತನೇ ಕಸಿದುಕೊಂಡು ಹೋಗಿದ್ದ.

English summary
SIT arrests 11 accused in Gauri Lankesh murder case. A government worker also involved in murder. SIT said government worker Rajesh supply bullets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X