ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಂಬಾಡಿ ನಿರ್ಮಾಣದಲ್ಲಿ ವಿಶ್ವೇಶ್ವರಯ್ಯನವರ ಪಾತ್ರ

By ಬಿ.ವಿ.ಕುಲಕರ್ಣಿ
|
Google Oneindia Kannada News

ಕನ್ನಂಬಾಡಿ ಅಣೆಕಟ್ಟನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ವಿಶ್ವೇಶ್ವರಯ್ಯನವರು ಮದ್ರಾಸ್ ಸರ್ಕಾರದ ವಿರೋಧದ ಮಧ್ಯೆ ಅಣೆಕಟ್ಟನ್ನು ನಿರ್ಮಿಸಿ, ಕಾವೇರಿ ಮೇಲಿನ ಹಕ್ಕನ್ನು ಪ್ರತಿಪಾದಿಸಿರುವುದಕ್ಕೆ ಮುಂದೆ ಕರ್ನಾಟಕ ರಾಜ್ಯದಲ್ಲಿ ಕಾವೇರಿ ಯೋಜನೆಗಳನ್ನು ಯಶಸ್ವಿಯಾಗಿ ರೂಪಿಸುವುದಕ್ಕೆ ಸಾಧ್ಯವಾಯಿತು. ವಿಶ್ವೇಶ್ವರಯ್ಯನವರು ಯಶಸ್ವಿಯಾಗಿ ಮುಖ್ಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿರುವುದಕ್ಕೆ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರನ್ನು ಮೈಸೂರು ಸಂಸ್ಥಾನದ ದಿವಾನರನ್ನಾಗಿ ನೇಮಿಸಿದ್ದರು.

1912 ರಿಂದ 1918 ರವರೆಗಿನ ಇವರ ದಿವಾನಗಿರಿಯ ಅವಧಿಯಲ್ಲಿ ಮೈಸೂರು ಸಂಸ್ಥಾನ ಸಾಧಿಸಿದ್ದು ಬಹಳಷ್ಟು. ವಿಶ್ವೇಶ್ವರಯ್ಯನವರ ದಿವಾನಗಿರಿಯ ಅವಧಿಯಲ್ಲಿ ಮೈಸೂರು ಸಂಸ್ಥಾನಕ್ಕೆ ಒಳ್ಳೆಯ ಬುನಾದಿ ಹಾಕಿದಂತಾಗಿತ್ತು. ವಿಶ್ವೇಶ್ವರಯ್ಯನವರ ಅವಧಿಯಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ (1913), ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ (1916), ಕನ್ನಡ ಸಾಹಿತ್ಯ ಪರಿಷತ್ತು (1915) ಸ್ಥಾಪನೆಯಾಯಿತು.

ಮೈಸೂರು ಬ್ಯಾಂಕು ಪ್ರಾರಂಭಿಸಿದಾಗ ಜನರಲ್ಲಿ ವಿಶ್ವಾಸ ಬರುವಂತೆ ತಮ್ಮ ಸ್ವಂತ ಹಣವನ್ನೇ ಠೇವಣೆಯಾಗಿ ಇಟ್ಟು ಬ್ಯಾಂಕ್ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನಂಬಿಕೆ ಬರುವಂತೆ ಮಾಡಿದ್ದರು. ಮೈಸೂರು ಬ್ಯಾಂಕು ಈಗ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಗಿ ಇತ್ತೀಚೆಗೆ ಒಂದು ನೂರು ವರ್ಷಗಳ ಸಾರ್ಥಕ ಸೇವೆಯನ್ನು ನೀಡಿರುತ್ತದೆ. ಕನ್ನಡ ನಾಡು ಮತ್ತು ನುಡಿಯ ಅಭಿವೃದ್ಧಿಗಾಗಿ ಇವರು ಸ್ಥಾಪಿಸಿದ ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷಗಳ ಸಾರ್ಥಕ ಆಸ್ತಿತ್ವವನ್ನು ಹೊಂದಿದೆ.

krs

ಮದ್ರಾಸ್ ವಿಶ್ವವಿದ್ಯಾನಿಲಯದ ಅಧೀನದಲ್ಲೇ ಮೈಸೂರು ಸಂಸ್ಥಾನದ ಕಾಲೇಜುಗಳೂ ಕಾರ್ಯ ನಿರ್ವಹಿಸುತ್ತಿದ್ದವು. ಮೈಸೂರು ರಾಜ್ಯಕ್ಕೆ ಒಂದು ವಿಶ್ವವಿದ್ಯಾನಿಲಯ ಬೇಕು ಎನ್ನುವ ಅವಶ್ಯಕತೆಯನ್ನು ವಿಶ್ವೇಶ್ವರಯ್ಯನವರು ಮನಗಂಡು ಭಾರತ ಸರ್ಕಾರಕ್ಕೆ ಮತ್ತು ಮದ್ರಾಸ್ ಸರ್ಕಾರಕ್ಕೆ ಒಂದು ಪ್ರಸ್ತಾವನೆಯನ್ನು ಸಲ್ಲಿಸಿ ಮೈಸೂರು ವಿಶ್ವವಿದ್ಯಾನಿಲಯವನ್ನು ಮಂಜೂರು ಮಾಡಿಸುವಲ್ಲಿ ಗಣನೀಯ ಪಾತ್ರ ವಹಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಆಗಿನ ದಿವಾನರಾಗಿದ್ದ ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಅನೇಕ ಪ್ರಗತಿಪರ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬಂದಿದ್ದವು. ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರು ಒಬ್ಬರಿಗೊಬ್ಬರು ಪೂರಕವಾಗಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವಕಾಶ ಕೊಡದೆ ಇದ್ದರೆ ವಿಶ್ವೇಶ್ವರಯ್ಯನವರಿಗೆ ಸಾಧನೆ ಮಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ವಿಶ್ವೇಶ್ವರಯ್ಯನವರು ಸಂಸ್ಥಾನದ ಅಭಿವೃದ್ಧಿಗಾಗಿ ಶ್ರಮ ಪಡದೇ ಇದ್ದಲ್ಲಿ ಮೈಸೂರು ಬ್ಯಾಂಕು, ಮೈಸೂರು ವಿಶ್ವವಿದ್ಯಾನಿಯ, ಕನ್ನಡ ಸಾಹಿತ್ಯ ಪರಿಷತ್ತು ಇವುಗಳು ಆಸ್ತಿತ್ವಕ್ಕೆ ಬರುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ನಾಲ್ವಡಿಯವರು ಮತ್ತು ವಿಶ್ವೇಶ್ವರಯ್ಯನವರು ಒಬ್ಬರಿಗೊಬ್ಬರು ಪೂರಕವಾಗಿ ಕಾರ್ಯ ನಿರ್ವಹಿಸಿರುವುದರಿಂದ ಮೈಸೂರು ಸಂಸ್ಥಾನ ಪ್ರಗತಿಯನ್ನು ಕಾಣಲು ಸಾಧ್ಯವಾಯಿತು.

ವಿಶ್ವೇಶ್ವರಯ್ಯನವರ ಜನ್ಮ ಶತಾಬ್ಧಿ ಕಾರ್ಯಕ್ರಮ 15 ಸೆಪ್ಟೆಂಬರ್, 1961ರಂದು ಬೆಂಗಳೂರಿನಲ್ಲಿ ನೆರವೇರಿತು. ಈ ಸಮಾರಂಭದಲ್ಲಿ ಪಂಡಿತ್ ಜವಹರಲಾಲ್ ನೆಹರೂ ಅವರು ಭಾಗವಹಿಸಿ, ವಿಶ್ವೇಶ್ವರಯ್ಯ ಅವರಿಗೆ ಗೌರವ ಸೂಚಿಸಿದರು. ಈ ಸಮಾರಂಭದಲ್ಲಿ, ವಿಶ್ವೇಶ್ವರಯ್ಯನವರು ಉತ್ತರ ನೀಡುತ್ತಾ ದೇಶಕ್ಕಾಗಿ ಬೇಕಾಗಿರುವ ಕೆಲವು ಮೂಲಭೂತ ವಿಚಾರಗಳ ಕುರಿತಾಗಿ ಹೇಳಿದ್ದು: "ಪ್ರತಿಯೊಬ್ಬ ನಾಗರೀಕ ಕೆಲಸದ ಅವದಿಯಲ್ಲಿ ನಿಯಮಿತವಾಗಿ ಮತ್ತು ಶಿಸ್ತುಬದ್ಧ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವ ಅವಶ್ಯಕತೆಯಿದೆ. ಪ್ರತಿಯೊಬ್ಬರೂ ಮಧುರ ಭಾಂಧವ್ಯ ಮತ್ತು ಸಹಕಾರ ಮನೋಭಾವನೆ ಆಧರಿಸಿ ಜೀವನವನ್ನು ರೂಪಿಸಿಕೊಳ್ಳತಕ್ಕದ್ದು ಎಂದರು.

English summary
Engineer's Day is observed in India on September 15 in honour of Sir Mokshagundam Visvesvaraya who was born on the day in 1860. He was the chief designer of the flood protection system designed and built for the city of Hyderabad, as well as the chief engineer responsible for the construction of the Krishna Raja Sagara dam in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X