ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಾಣ ಬೆದರಿಕೆ ಎಂದು ಉಗ್ರಪ್ಪಗೆ ಮೊರೆ ಹೋದ ಪ್ರೇಮಲತಾ

|
Google Oneindia Kannada News

ಬೆಂಗಳೂರು, ಅಕ್ಟೋಬರ್. 06: ನಮಗೆ ಪೊಲೀಸ್ ಭದ್ರತೆ ಬೇಡ, ನ್ಯಾಯ ಬೇಕು ಎಂದು ಪ್ರೇಮಲತಾ ದಿವಾಕರ್ ದಂಪತಿ ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ. ಎಸ್, ಉಗ್ರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಕೆ ಮಾಡಿದ್ದಾರೆ.

ಪ್ರಕರಣದದ ವಿಚಾರಣೆ ತೀವ್ರ ವಿಳಂಬಗುತ್ತಿದೆ. ನಮಗೆ ಪೊಲೀಸ್ ಭದ್ರೆತೆ ಬೇಕಾಗಿಲ್ಲ. ನ್ಯಾಯ ಬೇಕಿದೆ. ನಮಗೆ ಪ್ರಾಣ ಬೆದರಿಕೆಯೂ ಇದೆ ಎಂದು ಮವಿಯಲ್ಲಿ ಹೇಳಿದ್ದಾರೆ. ಅತ್ತ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳಿಗೆ ನೀಡಿರುವ ಜಾಮೀನನ್ನು ರದ್ದು ಮಾಡುವಂತೆ ಸಿಐಡಿ ಅಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದಾರೆ.[ಸಂದರ್ಶನದಲ್ಲಿ ಪ್ರೇಮಲತಾ ದಿವಾಕರ್ ಹೇಳಿದ್ದೇನು?]

bengaluru

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂರು ವೈದ್ಯಕೀಯ ಪರೀಕ್ಷೆಗೆ ಶ್ರೀಗಳು ಹಾಜರಾಗಬೇಕಿತ್ತು, ಪರೀಕ್ಷೆ ನಡೆಸಿದರೆ ಮಾತ್ರ ಮುಂದಿನ ತನಿಖೆ ನಡೆಸಲು ಸಾಧ್ಯವಿದ್ದು ಶ್ರೀ ಗಳಿಗೆ ನೀಡಿರುವ ಜಾಮೀನನ್ನು ನ್ಯಾಯಾಲಯ ರದ್ದು ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.[ರಾಘವೇಶ್ವರ ಶ್ರೀಗಳ ಜಾಮೀನು ರದ್ದುಗೊಳಿಸಿ : ಸಿಐಡಿ]

ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಪ್ರಕರಣ ಮತ್ತು ಯಕ್ಷಗಾನ ಕಲಾವಿದೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಘವೇಶ್ವರ ಶ್ರೀಗಳು ಜಾಮೀನು ಪಡೆದಿದ್ದರು. ಅಲ್ಲದೇ ಡಿಎನ್ ಎ ಪರೀಕ್ಷೆಗೆ ಸಹಕಾರ ನೀಡಿದ್ದೇನೆ ಎಂದು ಸಿಐಡಿ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ನಿಗದಿಯಂತೆ ಶ್ರೀಗಳಿಗೆ ಸೆಪ್ಟೆಂಬರ್ 30 ರಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಸಿಐಡಿ ಸಿದ್ಧತೆ ಮಾಡಿಕೊಂಡಿತ್ತು.

English summary
Raghaveshwara Bharathi Swamiji case: Singer Premalatha Divakar family met Vidhana Parishath Member V S Ugrappa on Tuesday. Premalatha Divakar family urges to provide security, they have facing life threat by some unknown people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X