ಸಿದ್ದರಾಮಯ್ಯ ಅವರ ತಂಡ ರಾಜ್ಯವನ್ನು ಮತ್ತೊಂದು ತಾಲಿಬಾನ್ ಮಾಡಲು ಹೊರಟಿದೆ: ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ, ಅಕ್ಟೋಬರ್‌ 05: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರ ತಂಡ ರಾಜ್ಯವನ್ನು ಮತ್ತೊಂದು ತಾಲಿಬಾನ್ ಮಾಡಲು ಹೊರಟಿದೆ ಎಂದು ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಆಂದೋಲ ಮಠದ ಸಿದ್ದಲಿಂಗ ಸ್ವಾಮೀಜಿ ಆರೋಪಿಸಿದ್ದಾರೆ.

ಈ ಕುರಿತು ಗುರುವಾರ ಕಲಬುರಗಿಯಲ್ಲಿ ಶಿವಮೊಗ್ಗ ಹಾಗೂ ಕೋಲಾರದಲ್ಲಿ ನಡರದ ಗಲಭೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಹಿಂದೂಗಳ ಮೇಲೆ ನಡೆದ ಕಲ್ಲು ತೂರಾಟ ಸರ್ಕಾರದ ಪ್ರಾಯೋಜಿತ ಗಲಭೆ. ಘಟನೆ ನಡೆದು ನಾಲ್ಕೈದು ದಿನ ಕಳೆದರು ಸಹ ಗಲಭೆಕೋರರ ವಿರುದ್ಧ ಯಾವುದೆ ಕ್ರಮ ಜರುಗಿಸಿಲ್ಲ ಎಂದು ಹೇಳಿದರು.

siddaramaiahs-team-is-going-to-make

ಕರ್ನಾಟಕ ರಾಜ್ಯದಲ್ಲಿ ಇದೆಲ್ಲಾ ನೋಡಿದರೆ ನಾವು ಕರ್ನಾಟಕದಲ್ಲಿ ಇದ್ದೆವೋ ಅಥವಾ ಪಾಕಿಸ್ತಾನದ, ಅಫ್ಘಾನಿಸ್ತಾನದಲ್ಲಿದ್ದೇವೋ ಎಂದು ಅನುಮಾನ ಹುಟ್ಟಿಕೊಳ್ಳುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಕರ್ನಾಟಕ ಸರ್ಕಾರ ಪುಂಡರ ಹೆಡೆಮುರಿ ಕಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಗುಡುಗಿದರು.

ಇನ್ನೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಕಿಡಿಕಾರಿದ ಅವರು, ಹಿಂದೂ ಕಾರ್ಯಕರ್ತರು ಶಾಲು ಹಾಕಿಕೊಂಡು ಬಂದು ಆ ಸಂಘಟನೆ ಈ ಸಂಘಟನೆ ಎಂದರೆ ಒದ್ದು ಒಳಗೆ ಹಾಕಿ ಎಂದು ಹೇಳುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಶಿವಮೊಗ್ಗ ಗಲಭೆ ನಡೆದು ನಾಲ್ಕೈದು ದಿನಗಳು ಕಳೆದರು ಸಹ ತುಟಿ ಬಿಚ್ಚಿಲ್ಲ.

siddaramaiahs-team-is-going-to-make

ಮೌನಂ ಸಮ್ಮತಿ ಲಕ್ಷಣಂ ಎನ್ನುವ ಹಾಗೆ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಗಲಭೆಯನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರದ ಮುಸ್ಲಿಂ ಗುಂಡಿಗಳನ್ನು ಪೋಷಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಗಣೇಶ ಉತ್ಸವ ಪ್ರತಿಷ್ಠಾಪನೆಗೆ ನೂರಾರು ನಿಯಮಗಳನ್ನು ಜಾರಿಗೆ ತರಲಾಗುತ್ತೆ ಅದನ್ನ ಹಿಂದೂ ಕಾರ್ಯಕರ್ತರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾರೆ ಆದರೆ ಈದ್ ಮಿಲಾದ್ ಹಬ್ಬಕ್ಕೂ ಕೂಡ ಪೊಲೀಸ್ ಇಲಾಖೆಯಿಂದ ಸಾಕಷ್ಟು ನಿಯಮಗಳು ಇದ್ದರೂ ಸಹ ಮಾರಕಸ್ತ್ರಗಳನ್ನು ಪ್ರದರ್ಶಿಸಿ ಬೆದರಿಕೆ ಹುಟ್ಟು ಹಾಕುವಂತಹ ಕೃತಿಗಳು ನಡೆಯುತ್ತಿವೆ.

ಇದಕ್ಕೆ ಮುಖ್ಯ ಕಾರಣ 2047ಕ್ಕೆ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುವ ನಿಟ್ಟಿನಲ್ಲಿ ಮುಸಲ್ಮಾನರು ಕೈಗೊಂಡಿರುವಂತಹ ಗಜ್ವಾ ಹೈ ಹಿಂದ್ ಎಂಬ ಹೋರಾಟ ಎಂದು ಆದೋಲ ಸಿದ್ದಲಿಂಗ ಸ್ವಾಮೀಜಿ ಗಂಬೀರ ಆರೋಪ‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+