24-30 % ವೇತನ ಹೆಚ್ಚಳ: ಸರ್ಕಾರಿ ನೌಕರರಿಗೆ ಸಿದ್ದು ಉಡುಗೊರೆ?!

Recommended Video

      24-30 % ವೇತನ ಹೆಚ್ಚಳ: ಸರ್ಕಾರಿ ನೌಕರರಿಗೆ ಸಿದ್ದು ಉಡುಗೊರೆ | Oneindia Kannada

      ಬೆಂಗಳೂರು, ಜನವರಿ 27: ಈ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ನೌಕರರಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರಾ?

      ಫೆಬ್ರವರಿ ತಿಂಗಳಿನಿಂದ ಸರ್ಕಾರಿ ನೌಕರರ ವೇತನದಲ್ಲಿ ಶೇ.24-30 ಪ್ರತಿಶತ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಫೆ.15 ರಂದು ಘೋಷಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವೇತನ ಹೆಚ್ಚಳದ ಸಿಹಿ ಸುದ್ದಿಯನ್ನು ಘೋಷಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

      6.2 ಲಕ್ಷ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಹೆಚ್ಚಳ ಮತ್ತು ಪಿಂಚಣಿದಾರರಿಗೂ ಸೌಲಭ್ಯ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅಷ್ಟೇ ಅಲ್ಲದೇ, ಬ್ಯಾಂಕ್ ಗಳಂತೆ ಆಲ್ಟರನೇಟಿವ್ ಶನಿವಾರದಂದು ಸಹ ಸರ್ಕಾರಿ ನೌಕರರಿಗೆ ರಜೆ ಸಿಗುವ ಸಾಧ್ಯತೆ ಇದೆ.

      ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ

      ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿ

      ಸರ್ಕಾರಿ ನೌಕರರ ಸಂಘಟನೆಯ ಬೇಡಿಕೆಯ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ನೇತೃತ್ವದ ಸಮಿತಿಯೊಂದನ್ನು ನೇಮಿಸಿರುವ ಸಿದ್ದರಾಮಯ್ಯ, ವೇತನ ಹೆಚ್ಚಳ ಮತ್ತು ಪಿಂಚಣಿಗೆ ಸಂಬಂಧಸಿದಂತೆ ಶಿಫಾರಸ್ಸು ನೀಡಲು ತಿಳಿಸಿದ್ದು, ಇದಕ್ಕೆ ಜ.31 ರವರೆಗೆ ಕಾಲಾವಕಾಶ ನೀಡೀದ್ದಾರೆ. ಈ ಸಮಿತಿ ಜ.31 ರಂದು ತನ್ನ ವರದಿ ನೀಡಲಿದೆ.

      10,800 ಕೋಟಿ ರೂ. ಹೊರೆ

      10,800 ಕೋಟಿ ರೂ. ಹೊರೆ

      ಸಿದ್ದರಾಮಯ್ಯ, ಶೇ.30-35 ಪ್ರತಿಶತ ವೇತನ ಹೆಚ್ಚಳ ಮಾಡಬಹುದು ಎಂದು ಮೊದಲಿಗೆ ನಿರೀಕ್ಷಿಸಲಾಗಿತ್ತು. ಆದರೆ ಬಲ್ಲ ಮೂಲಗಳು ನೀಡಿದ ಮಾಹಿತಿ ಪ್ರಕಾರ ವೇತನ ಶೇ.24-30 ಪ್ರತಿಶತ ಹೆಚ್ಚಾಗಳಿದೆ. ಇದರಿಂದ ಸರಾರದ ಬೊಕ್ಕಸಕ್ಕೆ 10,800 ಕೋಟಿ ರೂ. ಹೊರೆಯಾಗಲಿದೆ.

      ಸದಾನಂದ ಗೌಡರ ಕಾಲದಲ್ಲಿ ಸಂಬಳ ಹೆಚ್ಚಳ

      ಸದಾನಂದ ಗೌಡರ ಕಾಲದಲ್ಲಿ ಸಂಬಳ ಹೆಚ್ಚಳ

      ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದ ಸಮಯದಲ್ಲಿ, ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರಿ ನೌಕರರ ಸಂಬಳವನ್ನು ಶೇ.22 ಪ್ರತಿಶತ ಹೆಚ್ಚಿಸಿದ್ದರು.

      ಒಂದು ರಜೆಯೂ ಬೋನಸ್!

      ಒಂದು ರಜೆಯೂ ಬೋನಸ್!

      ಇಷ್ಟೇ ಅಲ್ಲ, ಸರ್ಕಾರಿ ನೌಕರರಿಗೆ ಪ್ರತಿ ಆಲ್ಟರ್ನೇಟಿವ್ ಶನಿವಾರ ರಜೆ ನೀಡಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆ. ಈಗಾಗಲೇ ರಾಜ್ಯ ಸರ್ಕಾರಿ ನೌಕರರಿಗೆ ಎರಡನೇ ಶನಿವಾರ ನೀಡಲಾಗುತ್ತಿತ್ತು. ಈ ರಜೆಯನ್ನು ನಾಲ್ಕನೇ ಶನಿವಾರಕ್ಕೂ ಅನ್ವಯಿಸಲಾಗುತ್ತದೆ. ಇದರಿಂದ ಸರ್ಕಾರಿ ನೌಕರರಿಗೆ ಒಂದು ದಿನ ಹೆಚ್ಚುವರ ರಜಾ ಸಿಗಲಿದೆ. ಆದರೆ ಕರ್ತವ್ಯ ನಿರ್ವಹಿಸಬೇಕಾದ ಶನಿವಾರದಂದು, ಹೆಚ್ಚುವರಿ ಗಂಟೆಗಳ ಕಾಲ ದುಡಿಯಬೇಕಾಗುತ್ತದೆ. ರಜೆಯಿಂದಾಗಿ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+