ಮೋದಿಗೆ ಸ್ವಾಗತ ಕೋರಿ ಟ್ವಿಟ್ಟರ್ ನಲ್ಲಿ ಕಾಲೆಳೆದ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 4: ಪರಿವರ್ತನಾ ರ‍್ಯಾಲಿಯಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಕಾಲೆಳೆದಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿಯವರನ್ನು ಹೂಡಿಕೆ, ಅನ್ವೇಷಣೆ ಮತ್ತು ಪ್ರಗತಿಪರ ನೀತಿಗಳಲ್ಲಿ ದೇಶದಲ್ಲೇ ನಂಬರ್ 1 ರಾಜ್ಯವಾಗಿರುವ ನಮ್ಮ ಕರ್ನಾಟಕಕ್ಕೆ ಸ್ವಾಗತಿಸುತ್ತೇನೆ. ಅಭಿವೃದ್ಧಿಯ ವಿಶಿಷ್ಟ ಮಾದರಿಯ ಮೂಲಕ, ಪ್ರಮುಖ ಕ್ಷೇತ್ರಗಳಲ್ಲಿ ಹಲವಾರು ರಾಷ್ಟ್ರೀಯ ಪ್ರಥಮಗಳನ್ನು ನಾವು ದಾಖಲಿಸಿದ್ದೇವೆ. ಕರ್ನಾಟಕದ ಯಶಸ್ಸು ಭಾರತವನ್ನು ಹೆಮ್ಮೆಪಡಿಸುತ್ತದೆ ಎಂಬ ವಿಶ್ವಾಸ ತನಗಿದೆ," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲ ಟ್ವೀಟ್ ನಲ್ಲಿ ಮೋದಿಯವರ ಕಾಲೆಳೆದಿದ್ದಾರೆ.
I welcome PM @narendramodi ರವರು to Namma Karnataka - the no. 1 state in investments,innovation & progressive policies.
— Siddaramaiah (@siddaramaiah) February 4, 2018
Through a unique model of development, we have scripted several national firsts across key sectors. I am confident that Karnataka’s success makes India proud.
"ನರೇಂದ್ರ ಮೋದಿಯವರೇ, ನೀವು ದೇಶದ ಸ್ಟಾರ್ಟ್ ಅಪ್ ಮತ್ತು ಅನ್ವೇಷಣೆಗಳ ಹಬ್ ನಮ್ಮ ಬೆಂಗಳೂರಿಗೆ ಭೇಟಿ ನೀಡಲು ಬಿಡುವು ಮಾಡಿಕೊಂಡಿರುವುದು ಸಂತೋಷದ ವಿಷಯ. ನಮ್ಮ ಜನತೆ ಪರವಾಗಿ ಕರ್ನಾಟಕದ ಕುಡಿಯುವ ನೀರಿನ ಬೇಡಿಕೆ ಬಗ್ಗೆ ತಿಳಿದುಕೊಳ್ಳಲು ಸ್ವಲ್ಪ ಬಿಡುವು ಮಾಡಿಕೊಳ್ಳಿ ಮತ್ತು ಮಹಾದಾಯಿ ವಿವಾದ ಬಗೆಹರಿಸಲು ಸಹಾಯ ಮಾಡಿ ಎಂದು ನಾನು ಕೇಳಿಕೊಳ್ಳುತ್ತೇನೆ," ಎಂದು ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಈ ಟ್ವೀಟ್ ನಲ್ಲಿ ಸಿದ್ದರಾಮಯ್ಯ ನಮ್ಮ ಕರ್ನಾಟಕ ಫರ್ಸ್ಟ್ (#NammaKarnatakaFirst) ಹ್ಯಾಷ್ ಟ್ಯಾಗ್ ಬಳಸಿದ್ದು ಇದೀಗ ದೇಶದಲ್ಲೇ ಟ್ರೆಂಡ್ ಆಗಿದೆ.












Click it and Unblock the Notifications