ಉಕ್ರೇನ್: ನವೀನ್ ಸಾವಿಗೆ ಸರ್ಕಾರದ ವೈಫಲ್ಯ ಕಾರಣ ಎಂದ ಸಿದ್ದರಾಮಯ್ಯಗೆ ನೀತಿಪಾಠ
ಬೆಂಗಳೂರು, ಮಾರ್ಚ್ 1: ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ರಷ್ಯಾ ನಡೆಸಿದ ದಾಳಿಯಲ್ಲಿ ಕರ್ನಾಟಕದ ಹಾವೇರಿ ಮೂಲದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ನಾಲ್ಕು ವರ್ಷಗಳಿಂದ ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ವಾಸವಾಗಿದ್ದ ನವೀನ್, ಮಂಗಳವಾರ ಬೆಳಗ್ಗೆ ತಿಂಡಿ ತರಲು ಹೊರಗೆ ಹೋಗಿದ್ದ ವೇಳೆ ರಷ್ಯಾ ನಡೆಸಿದ ಶೆಲ್ ದಾಳಿಯಲ್ಲಿ ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ನವೀನ್ ಸಾವಿನ ಸಂಬಂಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಅನ್ನು ಮಾಡಿದ್ದರು. ವಿದ್ಯಾರ್ಥಿಯ ಸಾವಿಗೆ ಕೇಂದ್ರ ಸರಕಾರದ ನಿರ್ಲ್ಯಕ್ಷವೇ ಕಾರಣ ಎಂದು ಸಿದ್ದರಾಮಯ್ಯ ದೂರಿದ್ದರು.
"ಉಕ್ರೇನ್‌ನಲ್ಲಿ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಸಾವಿಗೆ ಯುದ್ದದಾಹಿ ರಷ್ಯಾ ಸೇನೆ ಎಷ್ಟು ಹೊಣೆಯೋ, ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು ಸಕಾಲದಲ್ಲಿ ನೆರವಾಗದೆ ನಿರ್ಲಕ್ಷಿಸಿದ @PMOIndia ಮತ್ತು @BJP4India ಸರ್ಕಾರವೂ ಅಷ್ಟೇ ಹೊಣೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.
ಸಿದ್ದರಾಮಯ್ಯನವರ ಈ ಪೋಸ್ಟಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ಸಮಯದಲ್ಲೂ ರಾಜಕೀಯ ಮಾಡುತ್ತಿದ್ದೀರಾ ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ. 'ರಾಜಕೀಯ ಬಿಟ್ಟು ಮನುಷ್ಯನಂತೆ ವರ್ತಿಸಿ' ಎನ್ನುವ ಬುದ್ದಿಮಾತುಗಳೂ ಬಂದಿದೆ. ಸಿದ್ದರಾಮಯ್ಯನವರ ಟ್ವೀಟಿಗೆ ಬಂದ ಕೆಲವೊಂದು ರಿಪ್ಲೈ ಹೀಗಿದೆ:

ರಾಜಕೀಯ ಬಿಟ್ಟು ಮನುಷ್ಯನಂತೆ ವರ್ತಿಸಿ ಎನ್ನುವ ಸಲಹೆ
"ಡಿಯರ್ ಸಿದ್ದು ಸರ್, ವಿದ್ಯಾರ್ಥಿಯ ಸಾವಿಗೆ ನನ್ನ ಸಾಂತ್ವನ. ದಯವಿಟ್ಟು ಇದರಲ್ಲೂ ರಾಜಕೀಯ ಮಾಡಬೇಡಿ. ಅಲ್ಲಿ ನಡೀತಿರೋದು ಯುದ್ಧ ಸರ್, ಹಾಗೋ ಹೀಗೋ GOI ಅಲ್ಲಿಂದ ನಮ್ಮ ಜನರನ್ನು ರಕ್ಷಿಸಿ ತರುವ ಕೆಲಸ ಮಾಡ್ತಾಯಿದೆ. ಯುದ್ಧಗ್ರಸ್ತ ಪ್ರದೇಶಗಳಿಂದ ವಿಮಾನ ಸಂಚಾರವೇನು ಸುಲಭವಲ್ಲ. ಹೆಚ್ಚು ಕಮ್ಮಿ ಆದ್ರೆ ಇಡೀ ವಿಮಾನವೇ ತೊಂದರೆಗೀಡಾಗುತ್ತೆ". "ಅದೇ ಕಾಂಗ್ರೆಸ್ ಪಕ್ಷದ ಆಡಳಿತ ಆಗಿದ್ದರೆ ಒಬ್ಬನೇ ಒಬ್ಬ ವ್ಯಕ್ತಿಯನ್ನ ರಕ್ಷಣೆ ಮಾಡುತ್ತಿರಲಿಲ್ಲ. ರಾಜಕೀಯ ಬಿಟ್ಟು ಮನುಷ್ಯನಂತೆ ವರ್ತಿಸಿ"ಎನ್ನುವ ಸಲಹೆಗಳು ಬಂದಿವೆ.

ನಿಮಗೆ ಹಾಗೂ ನಿಮ್ಮ @RahulGandhi ಗೆ ಜವಾಬ್ದಾರಿ ಇಲ್ವಾ
"ನಿಮಗೆ ಹಾಗೂ ನಿಮ್ಮ @RahulGandhi ಗೆ ಜವಾಬ್ದಾರಿ ಇಲ್ವಾ. ವಿರೋಧ ಪಕ್ಷದ ಕೆಲಸ ಬರೀ ವಿರೋಧಿಸುವುದು ಅಷ್ಟೇನಾ. ದೇಶದ ವಿಷಯ ಬಂದರೂ ರಾಜಕೀಯ ಮಾಡುವ ಮಹಾನ್ ನಾಯಕ. ಮೊದಲು ಮಾನವನಾಗಿ". "ಅಯ್ಯಾ ಸಿದ್ದರಾಮಯ್ಯ ಪಾದಯಾತ್ರೆನ ಬಿಟ್ಟು ಫ್ಲೈಟ್ ಅಲ್ಲಿ ಉಕ್ರೇನ್ ಗೆ ಹೋಗಿ students ನಾ ಏಕೆ ನೀವು ರಿಸೀವ್ ಮಾಡ್ಕೊಂಡು ಬರಬಾರದು? ಹೀಗೆ ಮಾಡ್ಬಿಟ್ರೆ god promise ನನ್ನ 1 ವೋಟು ನಿಮ್ಮೋರಿಗೆ ಹಾಕಿ ಬಿಡ್ತೀನಿ ನೋಡಿ" ಎನ್ನುವ ರಿಪ್ಲೈ ಬಂದಿದೆ.

ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ನಿಮ್ಮ ನೀಚ ಬುದ್ಧಿ
"ನಿಜ ಖಾನ್ ಗ್ರೇಸ್ ಇದ್ದಿದ್ದರೆ ಇಷ್ಟೊತ್ತಿಗೆ ಪಾಪ ಪುಟಿನ್ ಗೆ ಹೇಳಿ ಯುದ್ಧವನ್ನೇ ನಿಲ್ಲಿಸಬಹುದಿತ್ತು. ಮತ್ತು ಇಡೀ ವಿಶ್ವವೇ ಪಪ್ಪುವನ್ನು ಕೊಂಡಾಡುತಿತ್ತು. ಪಪ್ಪು ವಿಶ್ವ ಮಾನವನಾಗುತಿದ್ದ. ಆದ್ರೆ ಮೋದಿಯವರಿಗೆ ಬುದ್ಧಿಯೇ ಇಲ್ಲಾ ಅದಕ್ಕೆ ಅವ್ರಿಗೆ ಇದು ಹೊಳೆಯಲೇ ಇಲ್ಲಾ. ಆಲೂಗಡ್ಡೆ ಇಂದ ಚಿನ್ನ ತೆಗೆಯುವಷ್ಟು ಬುದ್ದಿವಂತಿಕೆ ಅವರಿಗಿಲ್ಲ". "ಇಂತಹ ವಿಷಯದಲ್ಲೂ ರಾಜಕೀಯ ಮಾಡುವ ನಿಮ್ಮ ನೀಚ ಬುದ್ಧಿಯ ಅನಾವರಣ ಮಾಡಬೇಡಿ. ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಟ್ವೀಟ್ ಮಾಡಿ" ಎನ್ನುವ ಪ್ರತಿಕ್ರಿಯೆ ಬಂದಿದೆ.

ಎಲ್ಲದಕ್ಕೂ ಬಿಜೆಪಿ, ಆರ್‌ಎಸ್‌ಎಸ್ ಹೊಣೆ ಮಾಡುವುದು
"ಸಾವು ಎಲ್ಲೇ ಆಗಲಿ, ಯಾರದ್ದೇ ಆಗಿರಲಿ. ನೀವು ಹೊಲಸು ರಾಜಕೀಯ ಮಾಡುವುದು ಮಾತ್ರ ನಿಲ್ಲಿಸುವುದಿಲ್ಲ. ಎಲ್ಲದಕ್ಕೂ ಬಿಜೆಪಿ, ಆರ್‌ಎಸ್‌ಎಸ್ ಹೊಣೆ ಮಾಡುವುದು. ಅದಕ್ಕೆ ನಿಮ್ಮನ್ನು ಚಾಮುಂಡೇಶ್ವರಿಯಿಂದ ಕಳುಹಿಸಿ, ಬಾದಾಮಿಯಿಂದಲೂ ಕಳಿಸಲು ವೇದಿಕೆ ಸಿದ್ದಪಡಿಸುತ್ತಿದ್ದಾರೆ" ಎನ್ನುವ ಖಾರವಾದ ಪ್ರತಿಕ್ರಿಯೆಯೂ ಸಿದ್ದರಾಮಯ್ಯನವರ ಟ್ವೀಟಿಗೆ ಬಂದಿದೆ.












Click it and Unblock the Notifications