Siddaramaiah: ಕುರಿ ಲೆಕ್ಕ ಹಾಕಲು ಬರದೇ ಇರೋನು 'ದಿ ಮೋಸ್ಟ್ ಪವರ್‌ಫುಲ್ ಲೀಡರ್' ಆಗಿ ಬೆಳೆದಿದ್ದು ಹೇಗೆ?
ಇನ್ನೂ ತಾಯಿಯ ಹೊಟ್ಟೆಯಲ್ಲಿದ್ದ ಮಗು ಹುಟ್ಟಿ ಬೆಳೆದ ನಂತರ ರಾಜನಾಗಿ ಮೆರೆಯುತ್ತಾನೆ ಎಂಬ ಕನಸೊಂದು ಸಿದ್ದರಾಮನಹುಂಡಿಯ ಬೊರಮ್ಮ ಎಂಬುವವರಿಗೆ ಬಿದ್ದಿತ್ತಂತೆ. ತಾಯಿಯ ಹೊಟ್ಟೆಯಲ್ಲಿದ್ದ ಮಗು ಎರಡನೇ ಬಾರಿ ಮುಖ್ಯಮಂತ್ರಿ ಆಗುತ್ತಿರುವ ಸಿದ್ದರಾಮಯ್ಯ ಎಂಬುದೀಗ ಕುತೂಹಲಕರ ಇತಿಹಾಸ. ಹೌದು, ಸಿದ್ದರಾಮಯ್ಯ ಅವರು ಕರ್ನಾಟಕದ ಹೊಸ ಮುಖ್ಯಮಂತ್ರಿಯಾಗಲು ಸಿದ್ಧರಾಗಿದ್ದಾರೆ. 2013 ರಿಂದ 2018ರ ವರೆಗೆ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಸಂಪೂರ್ಣ ಬಹುಮತ ಪಡೆದಿದ್ದರೂ, ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುವುದು ಅಷ್ಟೊಂದು ಸುಲಭದ ಮಾತಾಗಿ ಉಳಿದಿರಲಿಲ್ಲ. ಆದರೂ ಅಂತಿಮವಾಗಿ ರಾಜಿ ಸೂತ್ರವೊಂದಿಗೆ ಅವರನ್ನು ಮತ್ತೆ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ.

ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಡಿ ದೇವರಾಜ್ ಅರಸ್, ರಾಮಕೃಷ್ಣ ಹೆಗಡೆ, ಎಚ್ ಡಿ ಕುಮಾರಸ್ವಾಮಿ, ಮತ್ತು ಬಿ ಎಸ್ ಯಡಿಯೂರಪ್ಪ ಅವರು ಒಂದಕ್ಕಿಂತ ಹೆಚ್ಚು ಬಾರಿ ಮುಖ್ಯಮಂತ್ರಿ ಕುರ್ಚಿಯನ್ನು ಅಲಂಕರಿಸಿದವರ ಪಟ್ಟಿಗೆ ಸಿದ್ದರಾಮಯ್ಯ ಸೇರಿದ್ದಾರೆ.
1947ರ ಆಗಸ್ಟ್‌ನಲ್ಲಿ ಮೈಸೂರು ಬಳಿಯ ಸಿದ್ದರಾಮನಹುಂಡಿಯಲ್ಲಿ ಜನಿಸಿದ ಸಿದ್ದರಾಮಯ್ಯ ಅವರು 4ನೇ ತರಗತಿಯಿಂದ ನೇರವಾಗಿ ಶಾಲಾ ಕಲಿಕೆಯನ್ನು ಆರಂಭಿಸಿದರು. ಅದಕ್ಕೂ ಮುನ್ನ ತಂದೆಯೊಂದಿಗೆ ಕುರಿ ಮೇಯಿಸಲು ಹೋಗುತ್ತಿದ್ದರು. ಅವರು ಶಾಲೆ ಹಾಗೂ ಕಾಲೇಜಿನಲ್ಲಿ ಉತ್ತಮ ಅಂಕ ಗಳಿಸದ ಕಾರಣ ಕಾನೂನು ವ್ಯಾಸಂಗಕ್ಕೆ ಸೇರಿಕೊಂಡರು.

ಆ ಕಾಲಾವಧಿಯಲ್ಲಿ, ಸಿದ್ದರಾಮಯ್ಯನವರು ರಾಜಕೀಯ, ಸಾಮಾಜಿಕ ಮತ್ತು ಕಾನೂನಾತ್ಮಕ ವಿಚಾರಗಳ ಬಗ್ಗೆ ದೀರ್ಘವಾಗಿ ಅಧ್ಯಯನ ಮಾಡಿದರು. ಅವರು ಲೋಹಿಯಾ ವಿಚಾರವಾದಕ್ಕೆ ಆಕರ್ಷಿತರಾದರು.
ಅವರ ರಾಜಕೀಯ ಜೀವನವು 1978 ರಲ್ಲಿ ತಾಲೂಕು ಬೋರ್ಡ್ ಚುನಾವಣೆಗೆ ಸ್ಪರ್ಧಿಸುವ ಮೂಲಕ ಪ್ರಾರಂಭವಾಯಿತು. ತಂದೆ ಸಿದ್ದರಾಮೇಗೌಡ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತಿದ್ದರಿಂದ ಸಿದ್ದರಾಮಯ್ಯನವರು ರಾಜಕೀಯಕ್ಕೆ ಸೇರಿವುದಕ್ಕೆ ಒಪ್ಪಿರಲಿಲ್ಲ. ರಾಜಕೀಯದಲ್ಲಿ ಜನರನ್ನು ನಂಬಬೇಡ ಎಂದು ಪುತ್ರ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದ್ದರು. ಆದರೆ, ತಾಲೂಕು ಬೋರ್ಡ್ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆದ್ದರು.

1978ರ ವಿಧಾನಸಭೆ ಚುನಾವಣೆಯಲ್ಲಿ ಚರಣ್ ಸಿಂಗ್ ಅವರ ಲೋಕದಳದಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಸೋತಿದ್ದರು. 1983ರಲ್ಲಿ ಸಿದ್ದರಾಮಯ್ಯ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದರು. ಆ ಬಳಿಕ ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿ ನೇಮಕಗೊಂಡರು.
ಚುನಾವಣಾ ರಾಜಕೀಯದಲ್ಲಿ ಸುದೀರ್ಘ ವೃತ್ತಿಜೀವನದಲ್ಲಿ, ಸಿದ್ದರಾಮಯ್ಯ ಅವರು 14 ವಿಧಾನಸಭಾ ಚುನಾವಣೆಗಳಲ್ಲಿ ಒಂಬತ್ತು ಬಾರಿ ಗೆದ್ದಿದ್ದಾರೆ. ಇದರಲ್ಲಿ ಅವರು ಕುರುಬ ಸಮುದಾಯದ ಪ್ರಾಬಲ್ಯವಿರುವ ಕೊಪ್ಪಳ ಕ್ಷೇತ್ರದಿಂದ 1991ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿರುವುದು ಸೇರಿದೆ.

ಆಡಳಿತದಲ್ಲಿ ನಿಪುಣರೆಂದು ಹೆಸರುವಾಸಿಯಾಗಿರುವ ಸಿದ್ದರಾಮಯ್ಯ ಅವರು ರಾಜ್ಯದ ಹಣಕಾಸು ಸಚಿವರಾಗಿ 13 ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ. ಮೊದಲ ಬಾರಿ ರಾಜ್ಯದ ಹಣಕಾಸು ಸಚಿವರಾಗಿ ನೇಮಕಗೊಂಡಾಗ ಕೆಲವರು ಕುಹಕವಾಡಿದ್ದರು. ಕುರಿ ಎಣಿಕೆ ಮಾಡಲು ಬರದೇ ಇರೋನು ಬಜೆಟ್ ಮಂಡಿಸುತ್ತಾನೆಯೇ ಎಂದು ಟೀಕಿಸಿದ್ದರು.
ನಂತರ ಜನತಾ ದಳಕ್ಕೆ ಸೇರ್ಪಡೆಗೊಂಡ ಸಿದ್ದರಾಮಯ್ಯನವರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. 1999 ರಲ್ಲಿ ಜನತಾ ದಳ ವಿಭಜನೆಯಾದ ನಂತರ, ಸಿದ್ದರಾಮಯ್ಯ ಮತ್ತು ದೇವೇಗೌಡರು 2004 ರ ಚುನಾವಣೆಯಲ್ಲಿ 58 ಸ್ಥಾನಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

2006 ರಲ್ಲಿ, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರನ್ನು ಒಂದುಗೂಡಿಸುವ ಕಾರ್ಯಕರ್ಮ ಹಮ್ಮಿಕೊಂಡರು. ಇದನ್ನು ಅಹಿಂದವೆಂದು ಕರೆಯಲಾಗುತ್ತದೆ.
ಹಳ್ಳಿಗಾಡಿನ, ಹರಿತ ನಾಲಿಗೆ ಹೊಂದಿರುವ ಸಿದ್ದರಾಮಯ್ಯ ಅವರನ್ನು ವಿರೋಧಿಗಳು ಜಾತಿವಾದಿ ಎಂದು ಆರೋಪಿಸುತ್ತಾರೆ. ಆದರೆ, ಅವರು ಬಿಜೆಪಿ-ಆರ್‌ಎಸ್‌ಎಸ್ ಸಿದ್ಧಾಂತವನ್ನು ಬಲವಾಗಿ ವಿರೋಧಿಸುತ್ತಲೇ ಬಂದಿದ್ದಾರೆ.
ಇದು ಸಿದ್ದರಾಮಯ್ಯ ಅವರ ಕೊನೆಯ ರಾಜಕೀಯ ಇನ್ನಿಂಗ್ಸ್. ಅಲ್ಲದೆ, 2023ರ ಚುನಾವಣೆ ತನ್ನ ಕೊನೆಯ ಚುನಾವಣೆ ಎಂದು ಹೇಳಿದ್ದರು. ಇತ್ತೀಚೆಗಷ್ಟೇ ಮೊಮ್ಮಗ ಧವನ್ ಅವರನ್ನು ರಾಜಕೀಯ ವಾರಸುದಾರ ಎಂದು ಪರಿಚಯಿಸಿದ್ದಾರೆ.
ಸಿದ್ದರಾಮಯ್ಯ ರಾಜಕೀಯ ಹಾದಿ
1978: ಭಾರತೀಯ ಲೋಕದಳದ ಅಭ್ಯರ್ಥಿಯಾಗಿ ಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತರು
1983: ಚಾಮುಂಡೇಶ್ವರಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು
1985: ಜನತಾ ಪಕ್ಷದ ಅಭ್ಯರ್ಥಿಯಾಗಿ ಗೆದ್ದು ರೇಷ್ಮೆ, ಸಾರಿಗೆ ಮತ್ತು ಪಶುಸಂಗೋಪನೆ ಸಚಿವರಾದರು.
1989: ಕಾಂಗ್ರೆಸ್‌ನ ಎಂ ರಾಜಶೇಖರ ಮೂರ್ತಿ ವಿರುದ್ಧ ಸೋಲು
1991: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸವರಾಜ ಪಾಟೀಲ್ ಅನ್ವರಿ ವಿರುದ್ಧ ಸೋತರು
1994: ಹಣಕಾಸು ಸಚಿವರಾದರು
1996: ಜೆ ಎಚ್ ಪಟೇಲ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾದರು
1999: ಕಾಂಗ್ರೆಸ್‌ನ ಎ ಗುರುಸ್ವಾಮಿ ವಿರುದ್ಧ ಸೋತರು
2004: ಜೆಡಿಎಸ್‌ನಿಂದ ಗೆದ್ದು ಮತ್ತೆ ಡಿಸಿಎಂ ಆದರು
2006: ಕಾಂಗ್ರೆಸ್ ಸೇರಿ 257 ಮತಗಳಿಂದ ಗೆಲುವು ಸಾಧಿಸಿದರು
2008: ವರುಣಾದಿಂದ ಗೆಲುವು
2013: ವರುಣಾದಿಂದ ಗೆದ್ದು ಸಿಎಂ ಆದರು
2018: ಬಾದಾಮಿಯಿಂದ ಗೆಲುವು, ಚಾಮುಂಡೇಶ್ವರಿಯಲ್ಲಿ ಸೋಲು
2023: ವರುಣಾದಿಂದ ಗೆದ್ದು ಮತ್ತೆ ಸಿಎಂ ಆಗುತ್ತಿದ್ದಾರೆ
-
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
"ಕಾಂಗ್ರೆಸ್ನಿಂದ ದಲಿತ ದ್ರೋಹ: 14,200 ಕೋಟಿ ರೂ ಎಸ್ಸಿಎಸ್ಪಿ/ಟಿಎಸ್ಪಿ ಹಣ ಗ್ಯಾರಂಟಿ ಪಾಲು'' -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ











Click it and Unblock the Notifications