ಜನರ ಕಷ್ಟಗಳ ನಿವಾರಣೆಗೆ ಸಹಕಾರವಿದೆ, ಹಣದ ಲೂಟಿಗಲ್ಲ: ಸಿದ್ದರಾಮಯ್ಯ

ಬೆಂಗಳೂರುಮ ಜುಲೈ 21: ಕೊರೊನಾ ನಿಯಂತ್ರಣಕ್ಕೆ ನನ್ನ ಸಹಕಾರ ಕೇಳಿದ್ದೀರಿ, ಜನರ ಕಷ್ಟಗಳ ನಿವಾರಣೆಗೆ ನಿಮ್ಮ ಪ್ರಯತ್ನಗಳಿಗೆ ನನ್ನ ಸಹಕಾರವಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜನರ ಕಷ್ಟಗಳನ್ನು ದೂರಮಾಡಲು ಎಲ್ಲಾ ಸಹಕಾರವನ್ನು ನಿಮಗೆ ನೀಡುತ್ತೇನೆ ಆದರೆ ಜನ ಸೇವೆ ಹೆಸರಿನಲ್ಲಿ ತೆರಿಗೆ ಹಣದ ಲೂಟಿಗೆ ಖಂಡಿತ ಸಹಕಾರವಿಲ್ಲ, ನಾವು ಜನರ ಪರ ನಿಮ್ಮ ಪರ ಅಲ್ಲ ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.

ಕರ್ನಾಟಕದ ಲಾಕ್‌ಡೌನ್ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಫೇಸ್‌ಬುಕ್, ಟ್ವಿಟ್ಟರ್ ಲೈವ್ ಬಂದಿದ್ದರು. ಆ ವೇಳೆ ವಿರೋಧ ಪಕ್ಷದ ನಾಯಕರು ಟೀಕೆಗಳನ್ನು ಬಿಟ್ಟು, ಸಲಹೆಗಳನ್ನು ನೀಡಬೇಕು.

ಏನೇ ಅನುಮಾನಗಳಿದ್ದರೂ ಸರ್ಕಾರದ ಬಳಿ ಪ್ರಶ್ನಿಸಿ, ಅದನ್ನು ಬಿಟ್ಟು ಹೊರಗಡೆ ಅನಗತ್ಯ ಹೇಳಿಕೆಗಳನ್ನು ನೀಡುವುದರಿಂದ ಜನರಿಗೆ ಗೊಂದಲ ಉಂಟಾಗುತ್ತದೆ ಎಂದು ಯಡಿಯೂರಪ್ಪ ಹೇಳಿದ್ದರು. ಇದಕ್ಕೆ ಸಿದ್ದರಾಮಯ್ಯ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಚಿಕಿತ್ಸೆ ಸಂಬಂಧಿಸಿದ ವರದಿ ಕೊಡ್ತೀನಿ ಅಂದಿದ್ದೇ ಆಶ್ಚರ್ಯ

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದನ್ನು ಕೇಳಿ ಅಚ್ಚರಿಯಾಯಿತು. ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ. ಇನ್ನು ಯಾವ ರೀತಿ ಮಾಹಿತಿ ಕೇಳಲಿ ಎಂದಿದ್ದಾರೆ.

ಯಾವ ಇಲಾಖೆ ಮೂಲಕ ಸಲಕರಣೆ ಖರೀದಿ ಮಾಡಲಾಗಿದೆ

ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳನ್ನು ಯಾವ ಯಾವ ಇಲಾಖೆಗಳ ಮೂಲಕ ಖರೀದಿ ಮಾಡಲಾಗಿದೆ? ಅವುಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗಿದೆ? ಮಾಡಿರುವ ವೆಚ್ಚ ಎಷ್ಟು? ಇದಕ್ಕೆ ಟೆಂಡರ್ ಕರೆಯಲಾಗಿದೆಯೇ? ಕೊಟೇಷನ್ ಪಡೆಯಲಾಗಿದೆಯೇ?

ಕನಿಷ್ಠ ಪತ್ರಗಳನ್ನು ಬರೆದಿದ್ದೇನೆ

ಸಿಎಂ ಅವರೇ, ಕೊರೊನಾ ಸೋಂಕಿಗೆ ಸಂಬಂಧಿಸಿದ ಮಾಹಿತಿ‌ಕೋರಿ ನಿಮಗೆ‌ ಮತ್ತು ಅಧಿಕಾರಿಗಳಿಗೆ ಕನಿಷ್ಠ ಹತ್ತು ಪತ್ರ ಬರೆದಿದ್ದೇನೆ. ಅವುಗಳು ಮಾಧ್ಯಮಗಳಲ್ಲಿ‌ ಪ್ರಕಟ-ಪ್ರಸಾರವಾಗಿವೆ. ಹೀಗಿದ್ದರೂ ನಿಮ್ಮ‌ ಗಮನಕ್ಕೆ ಯಾಕೆ ಬಂದಿಲ್ಲ‌‌ ಎನ್ನುವುದನ್ನು ನೀವೇ ವಿಚಾರಿಸಬೇಕು.

ನಾವು ಜನರ ಪರ, ನಿಮ್ಮ ಪರ ಅಲ್ಲ

ನಾವು ಜನರ ಪರ, ನಿಮ್ಮ ಪರ ಅಲ್ಲ

ಯಡಿಯೂರಪ್ಪ ಅವರೇ,‌ಕೊರೊನಾ ನಿಯಂತ್ರಣಕ್ಕೆ ನನ್ನ ಸಹಕಾರ ಕೇಳಿದ್ದೀರಿ. ಜನರ ಕಷ್ಟ:ದು:ಖಗಳ ನಿವಾರಣೆಯ ನಿಮ್ಮ ಪ್ರಯತ್ನಗಳಿಗೆ ನನ್ನ ಸಹಕಾರ ಸದಾ ಇದೆ. ಆದರೆ ಜನಸೇವೆಯ ಹೆಸರಲ್ಲಿ ತೆರಿಗೆ ಹಣದ ಲೂಟಿಗೆ ಖಂಡಿತ ಸಹಕಾರ ಇಲ್ಲ.ನಾವು ಜನರ ಪರ,. ನಿಮ್ಮ ಪರ‌ ಅಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+