Siddaramaiah: ಕರ್ನಾಟಕಕ್ಕೆ ಹೊಸ ಸಿಎಂ? ಸಿದ್ದರಾಮಯ್ಯ ರಾಜೀನಾಮೆ ಗ್ಯಾರಂಟಿ?
ಸಿದ್ದರಾಮಯ್ಯ ಅವರ ರಾಜಕೀಯ ಇತಿಹಾಸದಲ್ಲೇ ಈ ದಿನ ಎಂದೆಂದಿಗೂ ಮರೆಯಲು ಆಗದ & ಮರೆಯಾಗದ ದಿನ. ಯಾಕಂದ್ರೆ, 'ಕ್ಲೀನ್ ಹ್ಯಾಂಡ್' ಅಂತಾ ಬಿರುದು ಪಡೆದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ಆಘಾತ ಎದುರಾಗಿದೆ. 'ಮುಡಾ' ಕೇಸ್‌ನಲ್ಲಿ ಇದೀಗ ಸಿಎಂ ಸಿದ್ದರಾಮಯ್ಯಗೆ ಶಾಕ್ ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಕ್ರಮಕ್ಕೆ ಕರ್ನಾಟಕ ಹೈಕೋರ್ಟ್ ಸಮ್ಮತಿ ಸೂಚಿಸಿದೆ. ಹಾಗಾದ್ರೆ, ಕರ್ನಾಟಕಕ್ಕೆ ಹೊಸ ಸಿಎಂ? ಸಿದ್ದರಾಮಯ್ಯ ರಾಜೀನಾಮೆ ಗ್ಯಾರಂಟಿ?
ಹೌದು, ಸಿಎಂ ಸಿದ್ದರಾಮಯ್ಯ ಅವರಿಗೆ ಇಂದು ದೊಡ್ಡ ಕಂಟಕ ಎದುರಾಗಿದೆ. ತಮ್ಮ ಗತ್ತು ಹಾಗೂ ನೇರ ನುಡಿಯಿಂದ ಹೆಸರು ಪಡೆದಿದ್ದ ಮತ್ತು ಯಾವುದೇ ಭ್ರಷ್ಟಾಚಾರ ಆರೋಪವನ್ನ ತಲೆ ಮೇಲೆ ಹೊತ್ತುಕೊಳ್ಳದೆ ರಾಜಕೀಯ ವಿರೋಧಿಗಳನ್ನ ಕಾಡುತ್ತಿದ್ದವರಿಗೆ ಶಾಕ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷವನ್ನು ಕರ್ನಾಟಕದಲ್ಲಿ ಎರಡು ಬಾರಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖವಾದ ಪಾತ್ರ ವಹಿಸಿದ್ದ ಕೀರ್ತಿ ಕೂಡ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಆದರೆ ಇದೀಗ ಆಗಿದ್ದೇ ಬೇರೆ, ಸಿಎಂ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರಾ?

ಕರ್ನಾಟಕದ ಹೊಸ ಸಿಎಂ ಯಾರು?
ಮೈಸೂರಿನ 'ಮುಡಾ' ಸೈಟ್ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೂಡ ತಪ್ಪು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಆದರೆ ಇದೇ ನಿರ್ಧಾರದ ವಿರುದ್ಧ ರೊಚ್ಚೆಗೆದ್ದ ಕಾಂಗ್ರೆಸ್ ನಾಯಕರು, ಹೈಕೋರ್ಟ್‌ನ ಮೆಟ್ಟಿಲು ಏರಿದ್ದರು. ಹೀಗೆ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಆಘಾತ ಸಿಕ್ಕಿದೆ. ಹಾಗಿದ್ರೆ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಆಗ್ತಾರಾ? ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೆಳಗೆ ಇಳಿಯುವುದು ಗ್ಯಾರಂಟಿ?
ಮುಂದಿನ ಸಿಎಂ ಯಾರಾಗಬಹುದು?
ಒಟ್ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಒಂದಲ್ಲ ಒಂದು ಗೊಂದಲ ಮೂಡುತ್ತಲೇ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕರ್ನಾಟಕ ರಾಜಕೀಯದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ? ಅನ್ನೋದನ್ನ ಕಾದು ನೋಡಬೇಕಿದೆ. ಈಗ ಅಕಸ್ಮಾತ್ ಸಿದ್ದರಾಮಯ್ಯ ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದರೆ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರ ಹೆಸರು ಮುಂಚೂಣಿಗೆ ಬರುತ್ತಿದೆ. ಹೀಗಾಗಿ ಯಾರಿಗೆ ಅಧಿಕಾರ ಸಿಗುತ್ತೆ? ಅನ್ನೋದನ್ನ ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದೆ.












Click it and Unblock the Notifications