ಸರ್ಕಾರ ರಚನೆಗೂ ಮೊದಲೇ ನನ್ನ ಜೊತೆಗೆ ಸಿದ್ದರಾಮಯ್ಯ ಸಂಧಾನ; ಹೊಸ ಬಾಂಬ್ ಸಿಡಿಸಿದ ಜನಾರ್ದನ ರೆಡ್ಡಿ
ಕೊಪ್ಪಳ, ಮೇ 02: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದ್ದು, ರಾಜಕೀಯ ನಾಯಕರಿಂದ ಆರೋಪ, ಪ್ರತ್ಯಾರೋಪ ಹೆಚ್ಚಾಗಿದೆ. ಈ ನಡುವೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನನ್ನ ಜೊತೆಗೆ ಸಂಧಾನ ಮಾಡಿಕೊಂಡಿದ್ರು ಎಂದು ಕೊಪ್ಪಳ ಜಿಲ್ಲೆಯ ಗಂಗಾವತಿ ಶಾಸಕ ಹಾಗೂ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಬುಧವಾರ ಗಂಗಾವತಿಯಲ್ಲಿ ಮಾಧ್ಯಮಗಳ ಜೊತೆಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮನ್ ಫ್ರೆಂಡ್ ಮೂಲಕ ಸಂಧಾನ ಮಾಡಿಕೊಂಡರು. ನನ್ನ ಜೊತೆ ಬುಕ್ ಆಗಿದ್ದು ಸಿದ್ದರಾಮಯ್ಯ. ಕೆಆರ್‌ಪಿಪಿ ಹತ್ತು ಸೀಟ್ ಗೆದ್ರೆ ಸರ್ಕಾರ ರಚನೆಗೆ ಬೇಕಾಗತ್ತೆ ಅಂತ ನನ್ನ ಜೊತೆ ಬುಕ್ ಆಗಿದ್ರು ಎಂದು ಜನಾರ್ದನ ರೆಡ್ಡಿ ಅವರು ಹೇಳಿದ್ದಾರೆ.

ಇಕ್ಬಾಲ್ ಅನ್ಸಾರಿ ತಲೆಯಲ್ಲಿ ಎಚ್.ಆರ್. ಶ್ರೀನಾಥ್ ಮತ್ತು ಮಲ್ಲಿಕಾರ್ಜುನ ನಾಗಪ್ಪ ನನಗೆ ಬುಕ್ ಆಗಿದ್ದಾರೆ ಅಂತ ತಲೆಯಲ್ಲಿ ಇದೆ. ಆದ್ರೆ ನಿಜಕ್ಕೂ ನನ್ನ ಜೊತೆ ಬುಕ್ ಆಗಿದ್ದು ಸಿದ್ದರಾಮಯ್ಯ. ನನ್ನ ಜೊತೆ ಬುಕ್ ಆಗಿರೋದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಗಂಗಾವತಿ ಮತ್ತು ಬಳ್ಳಾರಿಗೆ ಸಿದ್ದರಾಮಯ್ಯ ಅವರು ಪ್ರಚಾರಕ್ಕೆ ಬಂದಿರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಕಾಮನ್ ಫ್ರೆಂಡ್ ಮೂಲಕ ಹಿಂದೆ ಆಗಿರೋದನ್ನ ಮರೆತು ಒಂದಾಗೋಣ ಅಂತ ಡೀಲ್ ಮಾಡಿಕೊಂಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಜೊತೆಗೆ ಡೀಲ್ ಮಾಡಿಕೊಂಡು ಗಂಗಾವರಿ ಹಾಗೂ ಬಳ್ಳಾರಿಗೆ ಪ್ರಚಾರಕ್ಕೆ ಬಂದಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಗಾವತಿಯಲ್ಲಿ ಮಾನ್ಯ ಜನಾರ್ದನ ರೆಡ್ಡಿ ಅಂತ ಕರೆದ್ರು. ಅದು ಖುಷಿಯಾಯಿತು ಅವರು ಸಂಸ್ಕಾರವಂತರು ಎಂದು ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿದ್ದಾರೆ.
ಇಕ್ಬಾಲ್ ಅನ್ಸಾರಿಗೆ ಸಂಸ್ಕಾರ ಅನ್ನೋದೇ ಇಲ್ಲ, ಅವನಿಗೆ ಹುಚ್ಚು ಹಿಡಿದಿದೆ. ಕಳೆದ ಸಮಾವೇಶದಲ್ಲಿ ನನ್ನ ಬಗ್ಗೆ ಮಾತಾಡೋಕೆ ಹೋಗಿ ಇಕ್ಬಾಲ್ ತಮ್ಮ ಪಕ್ಷದವರ ಜೊತೆ ಜಗಳಕ್ಕಿಳಿದು ಬಿಟ್ರು. ಎಚ್.ಆರ್.ಶ್ರೀನಾಥ್ ರನ್ನ ತಡಿಯೋಕೆ ಸ್ವತಃ ಮುಖ್ಯಮಂತ್ರಿಗಳ ಕೈನಲ್ಲೂ ಆಗ್ಲಿಲ್ಲ. ಯಾವತ್ತು ಎಚ್.ಆರ್. ಶ್ರೀನಾಥ್ ಇಷ್ಟೊಂದು ಸ್ಟ್ರಾಂಗ್ ಅಂತ ಗೊತ್ತಿರಲಿಲ್ಲ. ಯಾರ ಕೈನಲ್ಲೂ ಎಚ್.ಆರ್. ಶ್ರೀನಾಥ್ ರನ್ನ ತಡೆಯೋಕೆ ಆಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎದ್ದು ಬಂದು ಮರ್ಯಾದೆ ಉಳಿಸು ಅಂತ ಕೈ ಮುಗಿದ್ರು. ಇಕ್ಬಾಲ್ ಅನ್ಸಾರಿಗೆ ಸಂಸ್ಕಾರ ಇಲ್ಲ ಎಂದು ಶಾಸಕ ಜನಾರ್ದನ ರೆಡ್ಡಿ ಅವರು ಗುಡುಗಿದ್ರು.












Click it and Unblock the Notifications