ಸಿದ್ದರಾಮಯ್ಯ ಸಂಪರ್ಕಿಸಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ
ಬೆಂಗಳೂರು, ಅಕ್ಟೋಬರ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರ ಜೊತೆ ನಿಕಟ ಸಂಪರ್ಕದಲ್ಲಿರಲು ಅಪ್ಲಿಕೇಶನ್ ಲೋಕಾರ್ಪಣೆ ಮಾಡಿದ್ದಾರೆ. 'ಸಿದ್ದರಾಮಯ್ಯ ಜನ ಸಂಪರ್ಕ ಅಪ್ಲಿಕೇಶನ್' ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ 'ಸಿದ್ದರಾಮಯ್ಯ ಜನ ಸಂಪರ್ಕ' ಅಪ್ಲಿಕೇಶನ್ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ದಿಚನರಿ, ಭಾಷಣ, ಸರ್ಕಾರದ ಕಾರ್ಯಕ್ರಮಗಳ ಮಾಹಿತಿಯನ್ನು ಈ ಅಪ್ಲಿಕೇಶನ್ ಮೂಲಕ ಪಡೆಯಬಹುದಾಗಿದೆ.

ಗೂಗಲ್ ಪ್ಲೇ ಸ್ಟೋರ್ ಮೂಲಕ ಅಪ್ಲಿಕೇಶನ್ ಡೌನ್ ಲೋಡ್ ಮಾಡಲು ಲಿಂಕ್
ಐ ಫೋನ್ ಮೂಲಕ ಡೌನ್ ಲೋಡ್ ಮಾಡಲು ಲಿಂಕ್
ಕ್ರಾಪ್ ಸರ್ವೆ ಅಪ್ಲಿಕೇಶನ್ : ಸಿದ್ದರಾಮಯ್ಯ ಅವರು ಇಂದು ಕ್ರಾಪ್ ಸರ್ವೆ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಅಪ್ಲಿಕೇಶನ್ ಮೂಲಕ ರೈತರು ತಮ್ಮ ಬೆಳೆಯ ಮಾಹಿತಿಗಳನ್ನು ಅವರೇ ಅಪ್ ಲೋಡ್ ಮಾಡಬಹುದು. ಇದು ಭೂಮಿ ತಂತ್ರಾಂಶದ ಜೊತೆ ಜೋಡಣೆಯಾಗಿದ್ದು, ಅಪ್ ಲೋಡ್ ಮಾಡಿದ ಮಾಹಿತಿ ರೈತರ ಆರ್‌ಟಿಸಿ ಅಥವಾ ಪಹಣಿಯಲ್ಲಿ ನಮೂದಾಗಲಿದೆ.












Click it and Unblock the Notifications