Cabinet Reshuffle: ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಅಪ್‌ಡೇಟ್‌: ಈ 15 ಮಂತ್ರಿಗಳಿಗೆ ಕೊಕ್‌?

ಬೆಂಗಳೂರು, ಮಾರ್ಚ್‌ 13: ರಾಜ್ಯ ಕಾಂಗ್ರೆಸ್‌ನಲ್ಲಿ ಈ ತಿಂಗಳ ಬಳಿಕ(ಮಾರ್ಚ್)‌ ಮಹತ್ವದ ಬದಲಾವಣೆಗಳಾಗಲಿದೆ ಎನ್ನುವ ಮಾತು ಕೇಳಿಬಂದಿದೆ. ರಾಜ್ಯದಲ್ಲಿ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬಳಿಕ ಸಿದ್ದರಾಮಯ್ಯ ಸಂಪುಟ ಪುನರಾಚನೆ ಕುರಿತು ಹಲವು ಊಹಾಪೋಗಗಳು ಕೇಳಿ ಬಂದಿತ್ತು. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪಿಗೆ ನೀಡದ ಹಿನ್ನೆಲೆ ಆ ಚರ್ಚೆ ದೆಹಲಿ ವರಿಷ್ಠರು ಬ್ರೇಕ್‌ ಹಾಕಿದ್ರು. ಇದೀಗ ಬಜೆಟ್‌ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‌ನಲ್ಲಿ ಮೇಜರ್‌ ಸರ್ಜರಿಯಾಗಲಿದೆ.

ಮೇ 23, 2025 ಕ್ಕೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಲಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಾಕಷ್ಟು ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ರು. ಇದೀಗ ಬಜೆಟ್‌ ಅಧಿವೇಶನದ ಬಳಿಕ ಸಂಪುಟ ಸರ್ಜರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಹಾಕಿದ್ದಾರೆ ಎಂದು ತಿಳಿದು ಬಂದಿದ್ದು, ಹಲವು ಹಿರಿಯ ನಾಯಕರು ಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದಾರೆ.

Siddaramaiah is likely to give coke to 15 ministers of the cabinet

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ ಹಾಗೂ ಮುಡಾ ಹಗರಣದ ಬಳಿಕ ಹಲವು ಪ್ರಕರಣಗಳು ಸಚಿವರ ವಿರುದ್ಧ ಕೇಳಿ ಬಂದಿದ್ದು, ಈ ಕಾರಣದಿಂದಾಗಿ ಸಚಿವ ಸಂಪುಟದ ಕೆಲ ಸಚಿವರಿಗೆ ಸಂಪುಟದಿಂದ ಕೋಕ್‌ ನೀಡುವ ಕುರಿತು ಹೈಕಮಾಂಡ್‌ ಮುಂದಾಗಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಾಂಗ್ರೆಸ್‌ ವರಿಷ್ಠರು ಕಾಂಗ್ರೆಸ್‌ ಸಚಿವ ಕಾರ್ಯವೈಖರಿಯ ಪಟ್ಟಿಯನ್ನ ಪಡೆದುಕೊಂಡಿದ್ದು, ಬರೋಬ್ಬರಿ 15 ಮಂತ್ರಿಗಳಿಗೆ ಗೇಟ್‌ ಪಾಸ್‌ ಕೊಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ಖಾತೆ ವಹಿಸಿಕೊಂಡ ದಿನದಿಂದ ಯಾರು? ಹೇಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಯಾರು ಕೆಲಸವನ್ನು ಸರಿಯಾಗಿ ನಿಭಾಯಿಸಿಲ್ಲ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲ ಎಂಬಂತೆ ಇರುವ ಸಚಿವರನ್ನು ಸಂಪುಟದಿಂದ ತೆಗೆಯಲು ಹೈಕಮಾಂಡ್‌ ನಿರ್ಧರಿಸಿದೆ ಎನ್ನಲಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಸಾಲು ಸಾಲು ಆರೋಪಗಳಿಂದ ಕಾಂಗ್ರೆಸ್‌ ಹೈಕಮಾಂಡ್‌ ರೋಸಿ ಹೋಗಿದೆ. ರಾಜ್ಯದಲ್ಲಿನ ಹಗರಣಗಳು ವಿಪಕ್ಷಗಳಿಗೆ ಅಸ್ತ್ರವಾಗಿದ್ದು, ಮುಂಬರುವ ಸ್ಥಳೀಯ ಪಟ್ಟದ ಚುನಾವಣೆಯ ಒಳಗೆ ಸಂಪುಟ ಸರ್ಜರಿ ನಡೆಸುವ ಮೂಲಕ ಬಲಿಷ್ಠ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನ ನೀಡುವ ಸಂಪುಟ ರಚನೆಗೆ ಹೈಕಮಾಂಡ್‌ ಮುಂದಾಗಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಬರೋಬ್ಬರಿ 15 ಸಚಿವರಿಗೆ ಸಂಪುಟದಿಂದ ಕಿತ್ತುಹಾಕಲು ನಿರ್ಧರಿಸಿದೆ ಎನ್ನಲಾಗಿದೆ.

ಬಜೆಟ್‌ ಅಧಿವೇಶನದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಲವು ಮಂತ್ರಿಗಳಿಗೆ ಕೊಕ್‌ ಕೊಡಲಿರುವ ವಿಚಾರ ಕೈ ಪಾಳಯದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಚಿವ ಎದೆ ಬಡಿತ ಜೋರಾಗುವಂತೆ ಮಾಡಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣ, ಅಬಕಾರಿ ಇಲಾಖೆಯಲ್ಲಿನ ಹಗರಣ ವಿಪಕ್ಷಗಳ ಬಾಯಿಗೆ ಆಹಾರವಾಗಿತ್ತು. ಸರ್ಕಾರಕ್ಕೆ ಆಗಿರುವ ಡ್ಯಾಮೇಜ್‌ ಕಂಟ್ರೋಲ್‌ ಗೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದ್ದು, ಸಿದ್ದರಾಮಯ್ಯ ಸಂಪುಟದ ಮಂತ್ರಿಗಳಿಗೆ ಗೇಟ್‌ ಪಾಸ್‌ ಕೊಡಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಕಾಂಗ್ರೆಸ್‌ ಹೈಕಮಾಂಡ್‌ ಸುಮಾರು 15 ಸಚಿವರನ್ನ ಸಂಪುಟದಿಂದ ಕೈ ಬಿಡಲು ನಿರ್ಧರಿಸಿದ್ದು, ಇದರಲ್ಲಿ ಘಟಾನುಘಟಿ ಸಚಿವರೇ ಕೂಡ ಇದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಆಪ್ತರು ಇದ್ದಾರೆ ಎನ್ನಲಾಗಿದೆ. ಆರ್‌. ಬಿ ತಿಮ್ಮಾಪುರ ( ಅಬಕಾರಿ ಸಚಿವ ) ರಹೀಂ ಖಾನ್, ( ಪೌರಾಡಳಿತ ಮತ್ತು ಹಜ್ ), ಮಧು ಬಂಗಾರಪ್ಪ ( ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ), ಶಿವಾನಂದ ಪಾಟೀಲ್ ( ಸಕ್ಕರೆ), ವೆಂಕಟೇಶ್ ಪಿರಿಯಾಪಟ್ಟಣ ( ಪಶುಸಂಗೋಪನೆ ), ಶರಣಪ್ರಕಾಶ್ ಪಾಟೀಲ್ ( ವೈದಕೀಯ ಶಿಕ್ಷಣ), ಡಿ ಸುಧಾಕರ್ ( ಸಾಂಖ್ಯಿಕ ಮತ್ತು ಯೋಜನೆ) ಶರಣ ಬಸಪ್ಪ ದರ್ಶನಾಪುರ ( ಸಣ್ಣ ಕೈಗಾರಿಕೆ, ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆ), ಬೈರತಿ ಸುರೇಶ್‌, ಲಕ್ಷ್ಮೀ ಹೆಬ್ಬಾಳ್ಕರ್‌, ಕೆಎನ್‌ ರಾಜಣ್ಣ,ಕೆಎಚ್‌ ಮುನಿಯಪ್ಪ, ಎಂಸಿ ಸುಧಾಕರ್‌, ಕೆ ವೆಂಕಟೇಶ್‌ ಹಾಗೂ ಬೋಸರಾಜು ಅವರನ್ನ ಕೈ ಬಿಡಲು ಹೈಕಮಾಂಡ್‌ ನಿರ್ಧರಿಸಿದೆ ಎಂದು ಹೇಳಲಾಗಿದೆ.

Take a Poll

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬಂದಿದ್ದು, ಈಗಾಗಲೇ ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ನಿಗಮದ ಹಗರಣದಿಂದ ಸರ್ಕಾರ ತೀವ್ರ ಮುಜುಗರವನ್ನ ಅನುಭವಿಸಿತ್ತು. ಅಲ್ಲದೇ ಅಬಕಾರಿ ಸಚಿವ ಆರ್. ಬಿ ತಿಮ್ಮಾಪೂರ ವಿರುದ್ಧವೂ ಆರೋಪ ಕೇಳಿ ಬಂದಿದೆ. ಇನ್ನೂ ಡಿ. ಸುಧಾಕರ್ ಅವರು ತಮ್ಮ ಇಲಾಖೆಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾಗಿ, ಅವರಿಗೆ ಕೊಕ್ ಸಿಗಬಹುದೆಂದು ಹೇಳಲಾಗುತ್ತಿದೆ.

ಇನ್ನೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಗ್ಗೆಯೂ ಕೆಲವು ಶಾಸಕರಲ್ಲಿ ಅಸಮಾಧಾನ ಇದೆ. . ಮಧು ಬಂಗಾರಪ್ಪ ಅವರ ಕೆಲಸ ತೃಪ್ತಿಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದ ಮಾತ್ರವೇ ಪ್ರಸಿದ್ಧಿ ಪಡೆಯುತ್ತಿರುವ ಇವರು ಪ್ರಾಥಮಿಕ ಶಿಕ್ಷಣ ಸಚಿವರಾಗಿ ಇವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ ಎಂಬ ಆಪಾದನೆಗಳೂ ಇವೆ, ಅವರೂ ಬಹಿರಂಗವಾಗಿ ಇದನ್ನು ಒಪ್ಪಿಕೊಂಡಿದ್ದಾರೆ.ಈಡಿಗ ಸಮುದಾಯದ ಮಧು ಬಂಗಾರಪ್ಪ ಅವರ ಬದಲಾಗಿ ಮತ್ತೊಬ್ಬ ಈಡಿಗ ಸಮುದಾಯಕ ನಾಯಕರಿಗೆ ಸಚಿವ ಸ್ಥಾನ ಕೊಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಕೊಕ್ ಸಾಧ್ಯತೆ ಲಿಸ್ಟ್‌ ನಲ್ಲಿ ಇರುವ ಮಂತ್ರಿಗಳು ಇವರು?

ಬೈರತಿ ಸುರೇಶ್‌

ಲಕ್ಷ್ಮೀ ಹೆಬ್ಬಾಳ್ಕರ್‌

ಕೆಎನ್‌ ರಾಜಣ್ಣ

ಕೆಎಚ್‌ ಮುನಿಯಪ್ಪ

ಎಂಸಿ ಸುಧಾಕರ್‌

ಬೋಸರಾಜು

ಆರ್‌. ಬಿ ತಿಮ್ಮಾಪುರ

ರಹೀಂ ಖಾನ್

ಮಧು ಬಂಗಾರಪ್ಪ

ಶಿವಾನಂದ ಪಾಟೀಲ್

ವೆಂಕಟೇಶ್ ಪಿರಿಯಾಪಟ್ಟಣ

ಶರಣಪ್ರಕಾಶ್ ಪಾಟೀಲ್

ಡಿ ಸುಧಾಕರ್

ಶರಣ ಬಸಪ್ಪ ದರ್ಶನಾಪುರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+