ಊಬ್ಲೋ ವಾಚ್ ಸ್ಪೀಕರ್‌ಗೆ ಹಸ್ತಾಂತರಿಸಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 02 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಜ್ರ ಖಚಿತ ಊಬ್ಲೋ ವಾಚ್ ವಿವಾದ ಅಂತಿಮ ಘಟಕ್ಕೆ ತಲುಪಿದ್ದು, ಸಿದ್ದರಾಮಯ್ಯ ಅವರು ವಾಚ್‌ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಆದರೆ, ಪ್ರತಿಪಕ್ಷಗಳು ವಾಚ್ ಮೂಲದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸುತ್ತಿವೆ. [ಊಬ್ಲೋ ವಾಚ್ ವಾರ್ : ಎಚ್ಡಿಕೆಯಿಂದ ಕಾಗೋಡು ತಿಮ್ಮಪ್ಪ ತನಕ!]

ಬುಧವಾರ ಮಧ್ಯಾಹ್ನ 3.30ಕ್ಕೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವಜ್ರ ಖಚಿತ ಊಬ್ಲೋ ವಾಚ್‌ ಅನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ಹಸ್ತಾಂತರ ಮಾಡಿದರು. ಸ್ಪೀಕರ್ ವಾಚ್‌ ಅನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ನೀಡಲಿದ್ದು, ಇನ್ನು ಮುಂದೆ ಅದು ಸರ್ಕಾರದ ಆಸ್ತಿಯಾಗಲಿದೆ. [ಸಖತ್ ಮಿಂಚುತ್ತಿರುವ ದುಬಾರಿ ಉಬ್ಲೋ ವಾಚುಗಳ ಕಥೆ]

watch

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಗೋಡು ತಿಮ್ಮಪ್ಪ ಅವರಿಗೆ ವಜ್ರ ಖಚಿತ ವಾಚ್ ಮತ್ತು ಅದರ ದಾಖಲೆ ಪತ್ರ ಮತ್ತು ಸ್ಪಷ್ಟನೆಗಳನ್ನು ಹೊಂದಿರುವ ಪತ್ರವನ್ನು ನೀಡಿದರು. ಕಾಗೋಡು ತಿಮ್ಮಪ್ಪ ಅವರು ಸ್ಪಷ್ಟನೆ ಪತ್ರವನ್ನು ಸದನದಲ್ಲಿ ಓದಲು ಆರಂಭಿಸಿದಾಗ ವಿಪಕ್ಷಗಳು ಗಲಾಟೆ ಆರಂಭಿಸಿದ್ದರಿಂದ ಕಲಾಪವನ್ನು ಗುರುವಾರ ಬೆಳಗ್ಗೆ 11ಗಂಟೆಗೆ ಮುಂದೂಡಲಾಯಿತು. ['ಸ್ನೇಹಿತ ಕೊಟ್ಟ ಊಬ್ಲೋ ವಾಚ್ ಅಫಿಡೆವಿಟ್ ಕೊಡಿ']

ಪ್ರತಿಪಕ್ಷಗಳಿಂದ ಧರಣಿ : ಸಿದ್ದರಾಮಯ್ಯ ಅವರು ವಾಚ್‌ ಅನ್ನು ಸ್ಪೀಕರ್‌ಗೆ ಹಸ್ತಾಂತರ ಮಾಡಿದರೂ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದಲ್ಲಿ ಧರಣಿ ಮುಂದುವರೆಸಿದರು. ವಾಚ್ ಎಲ್ಲಿಂದ ಬಂತು?, ವಾಚ್ ಉಡುಗೊರೆಯಾಗಿ ಕೊಟ್ಟ ಗಿರೀಶ್ ಚಂದ್ರ ವರ್ಮಾ ಯಾರು? ಎಂದು ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದವು. [ಸದನದಲ್ಲಿ ವಾಚ್ ವಾರ್ : ಯಾರು, ಏನು ಹೇಳಿದರು?]

Posted by Karnataka Varthe onWednesday, March 2, 2016

ಸಿದ್ದರಾಮಯ್ಯ ಅವರು ವಾಚ್‌ ಅನ್ನು ಸರ್ಕಾರಕ್ಕೆ ಹಸ್ತಾಂತರ ಮಾಡುವ ಮೂಲಕ ಹಲವು ದಿನಗಳ ವಿವಾದಕ್ಕೆ ತೆರೆ ಎಳೆದಿದ್ದಾರೆ. ವಾಚ್ ಮೂಲದ ಬಗ್ಗೆ ತನಿಖೆ ನಡೆಯಲಿದೆಯೇ? ಎಂಬುದನ್ನು ಕಾದು ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah on Wednesday handed over the Hublot watch to speaker of the Legislative Assembly Kagodu Thimmappa.
Please Wait while comments are loading...