Diwali Brothers: ಸಿದ್ದರಾಮಯ್ಯ ಡಿಕೆ ಶಿವಕುಮಾರ್ ದಿವಾಳಿ ಬ್ರದರ್ಸ್ ಎಂದು ಬಿಜೆಪಿ ಟ್ವೀಟ್
ಬೆಂಗಳೂರು ಏಪ್ರಿಲ್ 6: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಗೊಳಿಸಿದ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ದಿವಾಳಿ ಬ್ರದರ್ಸ್ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಕರ್ನಾಟಕಕ್ಕೆ ಕೊಟ್ಟ ದಿವಾಳಿ ಗ್ಯಾರಂಟಿಗಳಿವು ಎಂದು ಬಿಜೆಪಿ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಟೀಕಿಸಿದೆ. ಇದಿನ್ನೂ ಟ್ರೇಲರ್. ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಮತ್ತಷ್ಟು ಲೂಟಿಗಿಳಿದು ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಖಚಿತ ನಿಶ್ಚಿತ ಖಂಡಿತ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ. ಹಾಗಾದರೆ ಬಿಜೆಪಿ ಮಾಡಿದ ಟ್ವೀಟ್‌ನಲ್ಲಿ ಏನಿದೆ ನೋಡೋಣ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಕರ್ನಾಟಕಕ್ಕೆ ಕೊಟ್ಟ ದಿವಾಳಿ ಗ್ಯಾರಂಟಿಗಳು:
*ಕಾವೇರಿ ದಿವಾಳಿ
*ರೈತರ ದಿವಾಳಿ
*ಆರ್ಥಿಕತೆ ದಿವಾಳಿ
*ಕನ್ನಡಿಗರ ತೆರಿಗೆ ದಿವಾಳಿ
*ಎಸ್ ಸಿ/ ಎಸ್.ಟಿ ಫಂಡ್ ದಿವಾಳಿ
*ಕಾನೂನು ಸುವ್ಯವಸ್ಥೆ ದಿವಾಳಿ
ಇದಿನ್ನೂ ಟ್ರೇಲರ್. ಲೋಕಸಭಾ ಚುನಾವಣೆಯ ಬಳಿಕ ಕಾಂಗ್ರೆಸ್ ಮತ್ತಷ್ಟು ಲೂಟಿಗಿಳಿದು ಕರ್ನಾಟಕವನ್ನು ಸಂಪೂರ್ಣ ದಿವಾಳಿ ಮಾಡುವುದು ಖಚಿತ ನಿಶ್ಚಿತ ಖಂಡಿತ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಗ್ಯಾರಂಟಿಗಳು:-
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ (ಏಪ್ರಿಲ್ 5) ಪ್ರಣಾಳಿಕೆ ಬಿಡುಗಡೆ ಮಾಡಿತು. ಮತದಾರರನ್ನು ಸೆಳೆಯಲು 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಬಾರಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಈ 25 ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.
ಕಾಂಗ್ರೆಸ್ ಯುವ ನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ್ರಮಿಕ್ ನ್ಯಾಯ, ಹಿಸ್ಸೆದಾರಿ ನ್ಯಾಯ ಹೀಗೆ 5 ವಲಯಗಳಲ್ಲಿ 25 ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಿದೆ. ಯುವ ನ್ಯಾಯದಲ್ಲಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಸ್ಟೇಫಂಡ್ ನೀಡುವ ಭರವಸೆಯನ್ನು ನೀಡಿದೆ. ಜೊತೆಗೆ ಕಿಸಾನ್ ನ್ಯಾಯದಲ್ಲಿ ರೈತರಿಗೆ ಸಾಲ ಮನ್ನ, ಬೆಳೆ ಸಾಲ ನೀಡುವುದು. ಮಾತ್ರವಲ್ಲದೆ ಜಾತಿಗಣತಿ ಮಾಡುವ ಗ್ಯಾರಂಟಿ ಕೂಡ ನೀಡಿದೆ.
ದೆಹಲಿಯಲ್ಲಿ ಶುಕ್ರವಾರ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿತು. ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಈ ವೇಳೆ ಭಾಗಿಯಾಗಿದ್ದರು. ಪ್ರಣಾಳಿಕೆಯಲ್ಲಿ ಸುಮಾರು 30 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿದೆ. 25 ಲಕ್ಷ ರೂ.ವರೆಗಿನ ನಗದು ರಹಿತ ವಿಮೆ ಯೋಜನೆಯನ್ನು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ಅಳವಡಿಸಿಕೊಳ್ಳಲಾಗುವುದು. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಪ್ರತಿ ವರ್ಷ ಎಂಎಸ್‌ಪಿ ಘೋಷಿಸುವ ಕಾನೂನು ಖಾತರಿ ನೀಡುವುದಾಗಿ ಘೋಷಿಸಿದೆ.












Click it and Unblock the Notifications