• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕರಿಗೆ ಬಿಜೆಪಿ ಆಮಿಷ: ಆಧಾರ ಇದೆ ಎಂದ ಸಿದ್ದರಾಮಯ್ಯ

|

ಬೆಂಗಳೂರು, ಜನವರಿ 1: ಬಿಜೆಪಿ ಕುದುರೆ ವ್ಯಾಪಾರ ಮಾಡುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ 25-30 ಕೋಟಿ ರೂ. ಆಮಿಷ ಒಡ್ಡಿತ್ತು ಎಂಬ ತಮ್ಮ ಆರೋಪವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.

ಅಲ್ಲದೆ, ಬಿಜೆಪಿ ವಿರುದ್ಧದ ತಮ್ಮ ಆರೋಪಕ್ಕೆ ಆಧಾರಗಳಿವೆ ಎಂದೂ ಹೇಳಿದ್ದಾರೆ.

11 ತಿಂಗಳಲ್ಲೇ ಓಡಿಹೋದವರು ನೀವು: ಡಿವಿಎಸ್‌ಗೆ ಸಿದ್ದರಾಮಯ್ಯ ಟಾಂಗ್

ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯು ಆಮಿಷ ಒಡ್ಡಿದ ವಿಚಾರದಲ್ಲಿ ಬಿಜೆಪಿ ವಿರುದ್ಧ ತಾವು ಬ್ಲೇಮ್ ಗೇಮ್ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಶಾಸಕರಿಗೆ ಕೋಟ್ಯಂತರ ಹಣದ ಆಮೀಷ ಒಡ್ಡುತ್ತಿದೆ ಬಿಜೆಪಿ: ಸಿದ್ದರಾಮಯ್ಯ

ತಮ್ಮ ಆರೋಪಕ್ಕೆ ಅವರು ಬಿ.ಸಿ. ಪಾಟೀಲ್ ಅವರಿಗೆ ಬಿಜೆಪಿ ನೀಡಿದ್ದ ಆಫರ್ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಮಯ ಬಂದ ಬಳಿಕ ಇನ್ನೂ ಕೆಲವು ಶಾಸಕರಿಂದ ಈ ವಿಚಾರವನ್ನು ಬಹಿರಂಗಪಡಿಸುವುದಾಗಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬಿಜೆಪಿಯಿಂದ ಶಾಸಕರಿಗೆ ಆಮಿಷ ವಿಚಾರದಲ್ಲಿ ನಾನು ಬಿಜೆಪಿ ಮೇಲೆ ಬ್ಲೇಮ್ ಗೇಮ್ ಮಾಡುತ್ತಿಲ್ಲ. ಆಧಾರ ಇಟ್ಟುಕೊಂಡೇ ಹೇಳಿದ್ದೀನಿ. ಶಾಸಕ ಬಿ.ಸಿ.ಪಾಟೀಲ್ ಗೆ ಅವರು ಆಫರ್ ಕೊಟ್ಟಿರಲಿಲ್ವ? ಸಮಯ ಬರಲಿ, ಇನ್ನೂ ಕೆಲವರಿಂದ ಈ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಬಿಜೆಪಿಯು ಕುದುರೆ ವ್ಯಾಪಾರಕ್ಕೆ ಇಳಿದಿದೆ. ಶಾಸಕರಿಗೆ 20-30 ಕೋಟಿ ನೀಡುವುದಾಗಿ ಆಮಿಷ ಒಡ್ಡಲಾಗುತ್ತಿದೆ. ಈ ಹಣ ಎಲ್ಲಿಂದ ಬರುತ್ತಿದೆ ಇದು ಭ್ರಷ್ಟಾಚಾರದ ಹಣವಲ್ಲವೆ ಎಂದು ಅವರು ಪ್ರಶ್ನೆ ಮಾಡಿದ್ದರು.

ಮುನಿಸು ಬದಿಗಿಟ್ಟು ಮಾಜಿ ಗೃಹ ಸಚಿವ-ಹಾಲಿ ಗೃಹ ಸಚಿವ ಭೇಟಿ

104 ಶಾಸಕರನ್ನಿಟ್ಟುಕೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವದಲ್ಲಿ ಬಹುಮತ ಇದ್ದರಷ್ಟೆ ಸರ್ಕಾರ ರಚಿಸಲು ಸಾಧ್ಯ ಅದರ ಅರಿವು ಆ ಪಕ್ಷಕ್ಕೆ ಇರಬೇಕು. ಬಿಜೆಪಿ ಯಾವ ಕಾರಣಕ್ಕೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಯಾವ ಶಾಸಕರೂ ಬಿಜೆಪಿಯ ಆಮಿಷಕ್ಕೆ ಬಲಿ ಆಗುವುದಿಲ್ಲ ಎಂದಿದ್ದರು.

English summary
Former Siddaramaiah defended his earlier allegation on BJP for making horse trading to form government in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X