ಬಿಜೆಪಿಯ ಟೀಕೆಗೆ ವಚನದ ಮೂಲಕ ಉತ್ತರ ನೀಡಿದ ಸಿದ್ದರಾಮಯ್ಯ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 24: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಇತರೆ ಸಂಪುಟ ಸಹೋದ್ಯೋಗಿಗಳು ಮಾಂಸಾ ಹಾರ ಸೇವಿಸಿದ ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನ ಪ್ರವೇಶ ಮಾಡಿರುವುದರ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಲೇ ಇದೆ. ಈ ಬಗ್ಗೆ ಬಿಜೆಪಿಯ ನಾಯಕರು ನೀಡಿರುವ ಪ್ರತಿಕ್ರಿಯೆಗೆ ಅಣ್ಣ ಬಸವಣ್ಣನವರ ವಚನಗಳ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದಾರೆ.

ಇಸ್ಲಾಂ ಧರ್ಮ, ಹಂದಿ ಮಾಂಸ ಸೇವನೆ : ಮುಸಲ್ಮಾನರೊಬ್ಬರ ಪತ್ರ

ಧರ್ಮಸ್ಥಳ ಮಂಜುನಾಥನ ಸನ್ನಿಧಿ ಭೇಟಿಗೆ ಮುನ್ನ ಮಾಂಸಾಹಾರ ಸೇವನೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಧಾರವಾಡದಲ್ಲಿ ನಿನ್ನೆ ಮಾತನಾಡಿದ ಸಿದ್ದರಾಮಯ್ಯ, 'ದೇವರು ಮಾಂಸ ಆಹಾರ ಸೇವನೆ ಮಾಡಿ ದೇವಸ್ಥಾನಕ್ಕೆ ಬರಬೇಡಿ ಎಂದು ಹೇಳಿಲ್ಲ' ಎಂದರು.

ಬೇಡರ ಕಣ್ಣಪ್ಪ ಕೂಡಾ ಶಿವನಿಗೆ ಜಿಂಕೆ ಮಾಂಸ ನೈವೇದ್ಯ ಮಾಡಿದ್ದ. ಮಾಂಸ ಸೇವನೆ ಮಾಡಿ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ಎಂದರು. ಯಾವ ದೇವರು ಮಾಂಸಾಹಾರ ಸೇವನೆ ಮಾಡಬೇಡಿ ಎಂದು ಹೇಳಿಲ್ಲ ಎಂದರು.

ಮೀನು ತಿಂದು ದೇವಸ್ಥಾನಕ್ಕೆ ಬರಬೇಡ ಎಂದು ದೇವ್ರು ಹೇಳಿಲ್ಲ, ಆದ್ರೆ ಸ್ವಾಮೀ!

ಈ ಘಟನೆಯ ಕುರಿತು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಗಳ ಮೂಲಕ ಉತ್ತರ ನೀಡಿದ್ದಾರೆ. ಉಳ್ಳವರು ಶಿವಾಲಯವ ಮಾಡುವರು ಎಂಬ ವಚನವನ್ನು ಉದಾಹರಿಸಿದ್ದಾರೆ.

ಧರ್ಮಸ್ಥಳ ದೇವಾಲಯದ ಪ್ರತಿಕ್ರಿಯೆ

ಧರ್ಮಸ್ಥಳ ದೇವಾಲಯದ ಪ್ರತಿಕ್ರಿಯೆ

ಈ ಘಟನೆಯ ಕುರಿತು ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಗಳ ಮೂಲಕ ಉತ್ತರ ನೀಡಿದ್ದಾರೆ. ಉಳ್ಳವರು ಶಿವಾಲಯವ ಮಾಡುವರು ಎಂಬ ವಚನವನ್ನು ಉದಾಹರಿಸಿದ್ದಾರೆ. ಮಾಂಸ ಸೇವಿಸಿ ದೇವಸ್ಥಾನ ಪ್ರವೇಶ ಮಾಡಬಾರದು ಎಂಬ ನಿಯಮ ನಮ್ಮಲ್ಲೇನೂ ಇಲ್ಲವೆಂದು ಧರ್ಮಸ್ಥಳ ದೇವಾಲಯದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಗೆ ಉತ್ತರ ನೀಡಿದ ಸಿಎಂ

ಸರಿಯಾಗಿ ಆಡಳಿತ ನಡೆಸಲು ಆಗದ ಬಿಜೆಪಿಯವರು ನನ್ನ ಆಹಾರ ಕ್ರಮದ ಬಗ್ಗೆ ಮಾತನಾಡುತ್ತಿದ್ದಾರೆ. ಬಸವಣ್ಣ ಅವರಿಂದ ಏನು ಪಾಠ ಕಲಿಯಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬಸವಣ್ಣನ ವಚನ ಉದಾಹರಿಸಿದ ಸಿಎಂ

ಬಸವಣ್ಣನ ವಚನ ಉದಾಹರಿಸಿದ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಿಜೆಪಿ ನಿಂದನೆಗೆ ವಚನದ ಮೂಲಕ ಉತ್ತರಿಸಿದ್ದಾರೆ.

ದೇಗುಲಗಳಲ್ಲೇ ಮಟನ್ ಪ್ರಸಾದ ನೀಡಿ

ಪುಳಿಯೋಗರೆ ಪ್ರಸಾದಕ್ಕಿಂತ ದೇಗುಲಗಳಲ್ಲೇ ಮಟನ್ ಪ್ರಸಾದ ಭಾಗ್ಯವನ್ನು ಕರುಣಿಸಿ ಎಂದು ಸಾರ್ವಜನಿಕರು ಸಲಹೆ ನೀಡಿದ್ದಾರೆ.

ದೇಗುಲಕ್ಕೆ ಹೋಗಲು ಬಸವಣ್ಣ ಹೇಳಿಲ್ಲ

ದೇವರ ಮೂರ್ತಿ ಪೂಜೆ, ದೇಗುಲಕ್ಕೆ ಹೋಗುವುದನ್ನು ಅಣ್ಣ ಬಸವಣ್ಣ ಅವರು ಹೇಳಿಲ್ಲ. ಮತ್ತೆ ಸಿಎಂ ಅವರು ಏಕೆ ಹೋದರು ಎಂದು ಪ್ರಶ್ನಿಸಿದ್ದಾರೆ.

ಗೊಂದಲ ಮೂಡಿಸುವುದು ಏಕೆ?

ಜಾತಿಗಳ ನಡುವೆ ಗೊಂದಲ ಹುಟ್ಟು ಹಾಕುವುದು ಸಿಎಂ ಸಿದ್ದರಾಮಯ್ಯ ಅವರ ಉದ್ದೇಶ ಎಂದು ಕೆಲವರು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Chief Minister Siddaramaiah blamed the Opposition Bharatiya Janata Party for a controversy over eating fish and entering Dharmasthala temple.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ