ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು: ಸಿದ್ದರಾಮಯ್ಯ

|
Google Oneindia Kannada News

ಮಂಡ್ಯ, ನವೆಂಬರ್ 30: ಕಾಂಗ್ರೆಸ್ ನವರು ಜೈಲಿಗೆ ಹೋಗಿ ಬಂದಿದ್ದಾರೆ ಅಂತಾರೆ. ದೇಶದ ಗೃಹ ಸಚಿವರಾದ ಅಮಿತ್ ಶಾ ಏನು ಮಾನವ ಮನೆಗೆ ಹೋಗಿದ್ರಾ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಈ ದೇಶದ ಗೃಹ ಸಚಿವರು ಮೂರು ವರ್ಷಕ್ಕೂ ಹೆಚ್ಚು ಕಾಲ ಜೈಲಾಗಿತ್ತು. ಅಂಥವರೇ ಅಧ್ಯಕ್ಷರು ಹಾಗೂ ಗೃಹ ಸಚಿವರಾಗಿದ್ದಾರೆ ಎಂದರು. ನಲಪಾಡ್ ರೌಡಿ ಅಲ್ಲ, ಅವನೇನು ರೌಡಿ ಶೀಟರ್ ಇದ್ದಾನಾ.? ನಲಪಾಡ್ ಮೇಲೆ ಕ್ರಿಮಿನಲ್ ಕೇಸ್ ಇದೆ ಅಷ್ಟೇ. ಅದು ಸಾಬೀತಾಗಿ ಠಾಣೆಯಲ್ಲಿ ಫೋಟೋ ಇದ್ದು ಶಿಕ್ಷೆ ಆದರೆ ಸರಿ. ಮೊಂಡುತನ , ಮಾನ ಮಾರ್ಯಾದೆ ಇಲ್ಲದವು ಭಂಡತನ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ರೌಡಿ ಶೀಟರ್ ಸೈಲೆಂಟ್ ಸುನೀಲ್ ಜೊತೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರಿಗೆ ಸಮಾಜದಲ್ಲಿ ಗಲಭೆ ಎಬ್ಬಿಸಲು ರೌಡಿಗಳು ಬೇಕು. ಅದೇ ಕಾರಣಕ್ಕೆ ರೌಡಿ ಶೀಟರ್ ಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ ಬಿಜೆಪಿಯ ಇಬ್ಬರು ನಾಯಕರು ಸೈಲೆಂಟ್ ಸುನೀಲ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸೈಲೆಂಟ್ ಸುನೀಲ್ ಸರ್ಚ್ ವಾರೆಂಟ್ ನಲ್ಲಿದ್ದಾರೆ. ಇಂಥವರ ಜತೆ ಓಡಾಡಿ ಬಿಜೆಪಿಯವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

Siddaramaiah asked did Union Home Minister Amit Shah go to his father-in-laws place?

ಜನ ಬಿಜೆಪಿಗೆ ಅಧಿಕಾಇರ ಕೊಟ್ಟಿಲ್ಲ, ಬಿಜೆಪಿಯವರು ಅನೈತಿಕವಾಗಿ ಬಂದಿದ್ದಾರೆ. ಬಿಜೆಪಿಯವರಿಗೆ ಅಂಟುರೋಗ. ಅದರಲ್ಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಾಸ್ತಿಯಾಗಿದೆ. ಏನೇ ಹೇಳಿದರೂ ಹಿಂದಿನ ಸರ್ಕಾರದಲ್ಲಿ ಆಗಿಲ್ವಾ ಅಂತಾರೆ ಎಂದು ಕಿಡಿಕಾರಿದರು. ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಇಂಥವರನ್ನ ಸೇರಿಸಿಕೊಳ್ಳುತ್ತಿದ್ದಾರೆ. ರೌಡಿಗಳ ಜೊತೆಗೆ ವೇದಿಕೆ ಹಂಚಿಕೊಂಡಿದ್ದು, ಸರಿನಾ? ಎಂದು ಪ್ರಶ್ನಿಸಿದ್ದಾರೆ.
ಏನಿದು ವಿವಾದ..?

ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಸೈಲೆಂಟ್ ಸುನೀಲ ಜೊತೆಗೆ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್‌, ಬಿಜೆಪಿ ಶಾಸಕ ಉದಯ್‌ ಗರುಡಾಚಾರ್‌, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್‌.ಆರ್‌. ರಮೇಶ್‌ ಹಾಗೂ ಇತರರು ಸೈಲೆಂಟ್‌ ಸುನೀಲ್‌ ಜತೆಗೆ ವೇದಿಕೆ ಹಂಚಿಕೊಂಡಿದ್ದ ಬಗ್ಗೆ ವ್ಯಾಪಕ ಆಕ್ಷೇಪ ಕೇಳಿಬಂದಿದೆ.

Siddaramaiah asked did Union Home Minister Amit Shah go to his father-in-laws place?

ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿರುವ ಸೈಲೆಂಟ್ ಸುನೀಲ ಜೊತೆಗೆ ಬಿಜೆಪಿ ಮುಖಂಡರು ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಸೈಲೆಂಟ್‌ ಸುನೀಲ್‌ನೊಂದಿಗೆ ವೇದಿಕೆ ಹಂಚಿಕೊಂಡ ಬಗ್ಗೆ ಕಾಂಗ್ರೆಸ್‌ ಕಿಡಿಕಾರಿದೆ.

ಇನ್ನೂ ಈ ವಿಚಾರವಾಗಿ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಲ್ಲಿ ಎಷ್ಟು ಜನ ರೌಡಿಶೀಟರ್ ಇದ್ದಾರೆ ಎಂದು ಲೆಕ್ಕ ಹಾಕಲಿ ಎಂದು ತಿರುಗೇಟು ನೀಡಿದ್ದಾರೆ.

English summary
Siddaramaiah asked did Union Home Minister Amit Shah go to his father-in-law's place?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X