ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ನಾಳೆ ಜೆಡಿಎಸ್ ಸೇರ್ಪಡೆ

ಶ್ರೀರಂಗಪಟ್ಟಣ, ಮಾರ್ಚ್‌ 02: ಶ್ರೀರಂಗಪಟ್ಟಣದ ಮಾಜಿ ಕಾಂಗ್ರೆಸ್ ಮುಖಂಡ ರವೀಂದ್ರ ಶ್ರೀಕಂಠಯ್ಯ ಅವರು ನಾಳೆ (ಮಾರ್ಚ್‌.03) ಅಧಿಕೃತವಾಗಿ ಜೆಡಿಎಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ.

ನಾಳೆ ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಕುಮಾರಪರ್ವ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೆಗೌಡರ ಸಮ್ಮುಖದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರು ತಮ್ಮ ಬೆಂಬಲಿಗರ ಜೊತೆಗೆ ಜೆಡಿಎಸ್ ಸೇರುತ್ತಿದ್ದಾರೆ.

ಈಗಾಗಲೇ ಅವರನ್ನು ಶ್ರೀರಂಗಪಟ್ಟಣದ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಲಾಗಿದೆ. ನವೆಂಬರ್ ತಿಂಗಳಿನಲ್ಲಿಯೇ ಕುಮಾರಸ್ವಾಮಿ ಅವರು ರವೀಂದ್ರ ಶ್ರೀಕಂಠಯ್ಯ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಆಹ್ವಾನಿಸಿದ್ದರು. ಶ್ರೀಕಂಠಯ್ಯ ಅವರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಆದರೆ ಅಧಿಕೃತವಾಗಿ ಜೆಡಿಎಸ್ ಸೇರ್ಪಡೆ ಆಗಿರಲಿಲ್ಲ.

Shrirangapatna Ravindra Shrikantayya joining JDS tomorrow

ಶ್ರೀರಂಗಪಟ್ಟಣ ಹಾಲಿ ಜೆಡಿಎಸ್ ರೆಬೆಲ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಸೂಚನೆಗೆ ವಿರುದ್ಧವಾಗಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್ ನಿಂದ ಅಮಾನತ್ತುಗೊಂಡಿದ್ದರು. ಅವರಿಗೆ ಟಾಂಗ್ ನೀಡಲೆಂದು ಶ್ರೀರಂಗಪಟ್ಟಣದಲ್ಲಿ ಉತ್ತಮ ಬೆಂಬಲಿಗರನ್ನು ಹೊಂದಿರುವ ರವೀಂದ್ರ ಅವರಿಗೆ ಜೆಡಿಎಸ್ ಮಣೆ ಹಾಕಿದೆ.

Shrirangapatna Ravindra Shrikantayya joining JDS tomorrow

ಎಸ್.ಎಂ.ಕೃಷ್ಣ ಅವರ ಬೆಂಬಲಿಗರಾಗಿದ್ದ ರವೀಂದ್ರ ಶ್ರೀಕಂಠಯ್ಯ ಅವರು ಕೃಷ್ಣ ಅವರು ಕಾಂಗ್ರೆಸ್‌ನಿಂದ ಹೊರ ಬಂದ ಬಳಿಕ ಅವರೂ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿ. ಕಾಂಗ್ರೆಸ್‌ನಿಂದ ದೂರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+