ರಾಹುಲ್ ಭೇಟಿ ವೇಳೆ ಚಕ್ಕರ್ ಹೊಡೆದ ಸಚಿವರಿಗೆ ನೋಟಿಸ್

ಬೆಂಗಳೂರು, ಅಕ್ಟೋಬರ್ 12 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಎರಡು ದಿನದ ಕರ್ನಾಟಕ ಭೇಟಿ ಮುಕ್ತಾಯಗೊಂಡಿದೆ. ರಾಹುಲ್ ಭೇಟಿಯ ವೇಳೆ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದ 15 ಸಚಿವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ಅಕ್ಟೋಬರ್ 9 ಮತ್ತು 10ರಂದು ರಾಹುಲ್ ಗಾಂಧಿ ಮಂಡ್ಯ ಮತ್ತು ಹಾವೇರಿಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರು ರಾಹುಲ್ ಗಾಂಧಿ ಜೊತೆಗಿದ್ದರು. ಹಲವು ಸಚಿವರು ರಾಹುಲ್ ಗಾಂಧಿ ಅವರ ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. [ರಾಹುಲ್ ಹಾವೇರಿ ಭೇಟಿ ಚಿತ್ರಗಳು]

rahul gandhi

ಆದರೆ, 15 ಸಚಿವರು ರಾಹುಲ್ ಭೇಟಿಯ ಎರಡು ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಕಾಣೆಯಾಗಿದ್ದರು. ಇವರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಎರಡು ದಿನದ ಕಾರ್ಯಕ್ರಮಗಳ ವಿವರ ನೀಡುವಂತೆ ಡಾ.ಜಿ.ಪರಮೇಶ್ವರ ಅವರು ಸೂಚನೆ ನೀಡಿದ್ದಾರೆ. [ರಾಹುಲ್ ಮಂಡ್ಯ ಭೇಟಿ ಚಿತ್ರಗಳು]

ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಸೂಚನೆಯಂತೆ ಪರಮೇಶ್ವರ ಅವರು ಈ ನೋಟಿಸ್ ನೀಡಿದ್ದಾರೆ. ರಾಹುಲ್ ಭೇಟಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಎಲ್ಲಾ ಸಚಿವರಿಗೆ ಸೂಚನೆ ನೀಡಲಾಗಿತ್ತು. ಆದರೂ ಏಕೆ ಪಾಲ್ಗೊಂಡಿಲ್ಲ? ಎಂದು ವಿವರಣೆ ಕೇಳಲಾಗಿದೆ.

ಯಾರು ಚಕ್ಕರ್ ಹೊಡೆದಿದ್ದರು : ಪಕ್ಷದ ನಾಯಕರು ನೀಡಿರುವ ಮಾಹಿತಿಯಂತೆ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ, ಸಣ್ಣ ಕೈಗಾರಿಕಾ ಸಚಿವ ಸತೀಶ್ ಜಾರಕಿಹೊಳಿ, ಜವಳಿ ಸಚಿವ ಬಾಬೂರಾವ್ ಚಿಂಚನಸೂರ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಆರೋಗ್ಯ ಸಚಿವ ಯು.ಟಿ. ಖಾದರ್, ಗೃಹ ಸಚಿವ ಕೆ.ಜೆ.ಜಾರ್ಜ್, ಅರಣ್ಯ ಸಚಿವ ರಮಾನಾಥ ರೈ ಮುಂತಾದವರು ರಾಹುಲ್ ಭೇಟಿಯ ವೇಳೆ ಯಾವುದೇ ಕಾರ್ಯಕ್ರಗಳಲ್ಲಿ ಪಾಲ್ಗೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+