ಮಾಸ್ಕ್ ಕಡ್ಡಾಯವಾಗಬೇಕೆ? ಬೇಡವೇ? ಸಾಮಾಜಿಕ ಜಾಲತಾಣದಲ್ಲಿ ಏನಂತಾರೆ ಜನ
ಬೆಂಗಳೂರು, ಏಪ್ರಿಲ್ 5: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕ್ರಮೇಣ ಇಳಿಕೆಯಾಗಿದ್ದು ಕೆಲ ರಾಜ್ಯಗಳು ಕೊರೊನಾ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಿವೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಇಳಿಕೆಯಾದ ಬೆನ್ನಲ್ಲೇ ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕೊರೊನಾ ಮಾನದಂಡಗಳನ್ನು ಸಂಪೂರ್ಣ ಸಡಿಲಗೊಳಿಸುವುದಾಗಿ ಆಯಾ ರಾಜ್ಯಗಳ ಸರ್ಕಾರ ಘೋಷಿಸಿವೆ. ಇದರ ನಡುವೆ ಕರ್ನಾಟಕದಲ್ಲೂ ಮಾಸ್ಕ್ ಬೇಕೇ? ಬೇಡವೇ? ಎನ್ನುವ ಬಗ್ಗೆ ಬಿಸಿ ಬಸಿ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಜನರು ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಮಾಸ್ಕ್ ಬೇಕು ಎಂದರೆ ಇನ್ನೂ ಕೆಲವರು ಮಾಸ್ಕ್ ಬೇಡವೇ ಬೇಡ ಎಂದು ಹೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಮಾಸ್ಕ್ ಬೇಕೇ? ಬೇಡವೇ? ಎನ್ನುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಮೈಕ್ರೋ ಬ್ಲಾಗಿಂಗ್ ವೇದಿಕೆ ಕೂ ನಲ್ಲಿ #ಮಾಸ್ಕ್_ಕಡ್ಡಾಯ ಎನ್ನುವ ಹ್ಯಾಶ್ಟ್ಯಾಗ್ ಅಡಿ ನೆಟ್ಟಿಗರು ಮಾಸ್ಕ್ ಬೇಕೇ ಬೇಡವೇ ಎನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕೊರೋನಾ ಇರಲಿ ಬಿಡಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಹೇಳಿದರೆ, ಇನ್ನು ಕೆಲವರು ಅಯ್ಯೋ ಎರಡು ವರ್ಷದಿಂದ ಮಾಸ್ಕ್ ಧರಿಸಿ ಸಾಕಾಗಿದೆ ಎಂದೂ ಹೇಳಿದ್ದಾರೆ.\

'ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮವನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕೊರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ' ಎಂದು ಶಿಕ್ಷಕಿ ಸವಿತಾ 'ಕೂ' ಮಾಡಿದ್ದಾರೆ.
Koo App#ಮಾಸ್ಕ್_ಕಡ್ಡಾಯ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮವನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕೊರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ. #ಸವಿತಾಸಿಂಚನ✍️ #ದಿನದಕೂ - ಸವಿತಾ (@ಗಡಿನಾಡ_ಕನ್ನಡತಿ) 5 Apr 2022
'ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದದು, ಗಾಳಿಯಲ್ಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತ್ತರ ಅನಿಲಗಳಿರಲೂ ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ, ಮಾಸ್ಕ್ ನಿಂದ ರಿಸ್ಕೇ ಆಗುತಿದೆ, ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕನಲ್ಲೆ ಬಹುಕಾಲ ಉಳಿದು, ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ, ಮಾಸ್ಕ ಬದಲು ಅಂತರಪಾಲಿಸಿ, ಕೊರೋನಾ ಓಡಿಸಿ' ಎಂದು ಕವಿಸುತ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.
Koo App#ಮಾಸ್ಕ್_ಕಡ್ಡಾಯ ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದದು,ಗಾಳಿಯಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತ್ತರ ಅನಿಲಗಳಿರಲೂ ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ,ಮಾಸ್ಕ್ ನಿಂದ ರಿಸ್ಕೇಆಗುತಿದೆ,ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕನಲ್ಲೆ ಬಹುಕಾಲ ಉಳಿದು,ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ,ಮಾಸ್ಕ ಬದಲು ಅಂತರಪಾಲಿಸಿ,ಕೊರೋನಾ ಓಡಿಸಿ. ನನ್ನ ಅಭಿಪ್ರಾಯ, ಕವಿಸುತ - ಕವಿಸುತ (@ಕವಿಸುತ) 5 Apr 2022
'ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ವೈಯಕ್ತಕವಾಗಿ ಲಾಭದಾಯಕ' ಎಂದು ಮೈಸೂರಿನ ಬಸವರಾಜು ಹೇಳಿದ್ದಾರೆ.
'#ಮಾಸ್ಕ್_ಕಡ್ಡಾಯ ಮಾಡುವುದು ಒಳ್ಳೆಯದು. ಕಾರಣ ಕೇವಲ ಕೊರೊನಾ ಒಂದೇ ಅಲ್ಲ. ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲೆಲ್ಲಿಯೂ ಬರಿ ಧೂಳು ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಕೊರೊನಾ ಯಾವಗ ಸೃಷ್ಟಿ ಆಗುತ್ತದೆಯೇ ಗೊತ್ತಾಗುವುದಿಲ್ಲ. ಹಾಗಾಗಿ ಮಾಸ್ಕ್ ಕಡ್ಡಾಯ ಆದರೆ ಸೂಕ್ತ' ಎಂದು ರೇಖಾ ವಿ ಸಿಂಗ್ 'ಕೂ'ನಲ್ಲಿ ಬರೆದಿದ್ದಾರೆ.
'ನಮ್ಮ ಅರೋಗ್ಯ ನಮ್ಮ ಕೈ ಯಲ್ಲಿ ಅನ್ನೋ ಹಾಗೆ ಮಾಸ್ಕ ಬಳಸೋದು ಬಿಡೋದು ಅವರ ಅವರ ವಿಚಾರ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಬಳಸೋದು ಉತ್ತಮ. ಆ ಅಲೆ ಬಂತು ಈಗ ಈ ಅಲೆ ಬಂತು ಅಂತ ಭಯದಲ್ಲಿ ಇರೋದಕ್ಕಿಂತ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಇರೋದು ಉತ್ತಮ' ಎನ್ನುವುದು ಮಧು ಅವರ ಅಭಿಪ್ರಾಯವಾಗಿದೆ.
'ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕೊರೊನ ಪ್ರಕರಣಗಳಿವೆ. ನಿಮ್ಮ ಪ್ರಕಾರ "ಮಾಸ್ಕ್" ಇನ್ನೂ ಅಗತ್ಯವಿದೆಯೇ? ಎಂಬ ಮಂಜುನಾಥ್ ಪಾಪಣ್ಣ ಅವರ ಪೋಲ್ ಗೆ ಮಾಸ್ಕ್ ಅಗತ್ಯವಿದೆ ಎಂದೇ ಬಹುತೇಕರು ವೋಟ್ ಮಾಡಿದ್ದಾರೆ.
Koo App#ಮಾಸ್ಕ್_ಕಡ್ಡಾಯ ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕೊರೊನ ಪ್ರಕರಣಗಳಿವೆ! ಇದೆ ಸಮಯದಲ್ಲಿ ಕೆಲವು ದೇಶಗಳಲ್ಲಿ ವಿವಿಧ ಬಗೆಯ ಹೊಸ ರೂಪಾಂತರಗಳು ಬರುತ್ತಿವೆ,ಇನ್ನೂ ಸ್ವಲ್ಪ ಸಮಯ ಮಾಸ್ಕ್ ಧರಿಸಿದರೆ ಕಳೆದುಕೊಳ್ಳುವುದೇನೂ ಇಲ್ಲ, ಸರ್ಕಾರಗಳು ಸಹ ಲಸಿಕೆ ಮತ್ತು ಸುರಕ್ಷತಾ ಕ್ರಮದ ಬಗ್ಗೆ ಅಸಡ್ಡೆ ಮಾಡದಿರಲಿ! ಒಮ್ಮೆ ”ಎರಡನೇ ಅಲೆ” ಯೋಚಿಸಿಕೊಳ್ಳಿ. ನಿಮ್ಮ ಪ್ರಕಾರ ”ಮಾಸ್ಕ್” ಇನ್ನೂ ಅಗತ್ಯವಿದೆಯೇ? . - Manjunath Papanna (@Manjunath_Papanna) 5 Apr 2022
Recommended Video













Click it and Unblock the Notifications