ಮ್ಯಾಟ್ ಬೆಲೆ "ಚೌಕಾಸಿ ವ್ಯಾಪಾರ": ಗರಂ ಆದ ಮಾಲೀಕ ಮಾಡಿದ್ದೇನು

ವ್ಯಾಪಾರ ಮತ್ತು ಚೌಕಾಸಿ ಎರಡಕ್ಕೂ ಒಂದಕ್ಕೊಂದು ಸಂಬಂಧವಿದೆ. ಭಾರತದಲ್ಲಂತೂ ಚೌಕಾಸಿ ಇಲ್ಲದೆ ವ್ಯಾಪಾರ ನಡೆಯುವುದು ತೀರ ವಿರಳ ಎಂದರೆ ವಿರಳ. ಇತ್ತೀಚಿನ ವರ್ಷಗಳಲ್ಲಿ ಮಾಲ್‌ ಸಂಸ್ಕೃತಿಯನ್ನು ಹೊರತುಪಡಿಸಿದರೆ, ಮಾರುಕಟ್ಟೆ ಹಾಗೂ ವ್ಯಾಪಾರಗಳು ಬಹುತೇಕ ಚೌಕಾಸಿಯಿಂದಲೇ ನಡೆಯುತ್ತವೆ. ಆದರೆ, ಗ್ರಾಹಕರು ಕಡಿಮೆ ಬೆಲೆಗೆ ಕೇಳಿದರು ಎಂದು ಅಂಗಡಿಯವನ್ನು ಚಾಕು ಎತ್ತಿಕೊಂಡಿರುವುದನ್ನು ಎಲ್ಲಿಯಾದರೂ ಕೇಳಿದ್ದೀರಾ, ಪ್ರಾಣಕ್ಕೆ ಕುತ್ತಾದ ಚೌಕಾಸಿ ಘಟನೆಯ ವಿವಿವರ ಇಲ್ಲಿದೆ.

ಮೈಸೂರು ಜಿಲ್ಲೆಯ ಹುಣಸೂರಿನ ಬೈಪಾಸ್‌ ರಸ್ತೆಯ ಅಂಗಡಿಯೊಂದರಲ್ಲಿ ಗ್ರಾಹಕನಿಗೆ ಅಂಗಡಿಯ ಮಾಲೀಕ ಚೌಕಾಸಿ ಮಾಡಿದ್ದ ಕಾರಣಕ್ಕೆ ಕತ್ತರಿಯಿಂದ ಗ್ರಾಹಕನಿಗೆ ಇರಿದಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂರು ಜನರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ. ಚೌಕಾಸಿ ಇಲ್ಲದೆ ಬಹುತೇಕ ಭಾಗಗಳಲ್ಲಿ ವ್ಯಾಪಾರಗಳೇ ನಡೆಯುವುದಿಲ್ಲ. ಮಾರುಕಟ್ಟೆಗಳಲ್ಲಿ, ಸಣ್ಣಪುಟ್ಟ ವ್ಯಾಪಾರಗಳಲ್ಲಿ ಅಂಗಡಿಯ ಮಾಲೀಕ ಕೇಳಿದ ದುಡ್ಡನ್ನು ಕೊಟ್ಟು ಬರುವುದು ತೀರ ವಿವರಳ ಎಂದರೆ ವಿರಳ. ಅಂಗಡಿಯ ಮಾಲೀಕರು ಸಹ ಒಂದು ಹಂತದ ಚೌಕಾಸಿಯನ್ನು ಒಪ್ಪಿಕೊಂಡೇ ವ್ಯಾಪಾರ ಮಾಡುತ್ತಾರೆ. ಲಾಭ ಸಿಗುವುದಿಲ್ಲ. ಇಷ್ಟರ ಮೇಲೆ ಕಡಿಮೆ ಅಂದ್ರೆ ಆಗಲ್ಲ ಎಂದು ಹೇಳುತ್ತಾರೆ. ಆದರೆ, ಚೌಕಾಸಿ ಮಾಡಿದರು ಎಂದು ಹಲ್ಲೆ ಮಾಡುವುದು ಎಲ್ಲಿಯಾದರೂ ಕೇಳಿದ್ದೀರಾ. ಹೌದು ಅಂತಹ ಒಂದು ಘಟನೆ ಮೈಸೂರಿನಲ್ಲಿ ನಡೆದಿದೆ.

shop owner attacked a customer with scissors who asked for a mat at a low price

ಘಟನೆಯ ಹಿನ್ನೆಲೆ ಏನು?

ನಂದೀಶ್‌ ಎನ್ನುವವರು ಗೂಡ್ಸ್‌ ಗಾಡಿಗೆ ಮ್ಯಾಟ್‌ ಖರೀದಿ ಮಾಡುವುದಕ್ಕೆಂದು ಇಲ್ಲಿನ ಕುಶಾಲ ನಗರದಿಂದ ಹುಣಸೂರಿನಲ್ಲಿರುವ ಮುರುಗೇಶ್‌ ಎನ್ನುವವರ ಅಂಗಡಿಗೆ ಬಂದಿದ್ದಾರೆ. ಅಂಗಡಿಯಲ್ಲಿ ವಿವಿಧ ಮಾದರಿಯ ಮ್ಯಾಟ್‌ ತೋರಿಸುವಂತೆ ಕೇಳಿದ್ದಾರೆ. ಈ ವೇಳೆ ಮ್ಯಾಟ್‌ಗಳನ್ನು ಮುರುಗೇಶ್‌ ತೋರಿಸಿದ್ದಾರೆ. ಮ್ಯಾಟ್‌ ವೊಂದು ಇಷ್ಟವಾದ ಮೇಲೆ ಆ ಮ್ಯಾಟ್‌ ಅನ್ನು ಕಡಿಮೆ ಬೆಲೆಗೆ ನೀಡುವಂತೆ ನಂದೀಶ್‌ ಚೌಕಾಸಿಗೆ ಮುಂದಾಗಿದ್ದಾರೆ. 2,300 ರೂಪಾಯಿಯ ಬೆಲೆಯ ಮ್ಯಾಟ್‌ ಅನ್ನು 300 ರೂಪಾಯಿ ಕಡಿಮೆ ಮಾಡಿಕೊಂಡು 2000 ರೌಂಡ್‌ ಮಾಡಿಕೊಂಡಿ ಎಂದು ನಂದೀಶ್‌ ಕೇಳಿದ್ದಾನೆ. ಈ ಚೌಕಾಸಿ ವಿಷಯ ಮಾತಿನ ಚಕಮಕಿಗೆ ತಿರುಗಿದೆ. ಆದರೆ, ಮ್ಯಾಟ್‌ ಅನ್ನು ಕಡಿಮೆ ಬೆಲೆಗೆ ನೀಡುವುದಕ್ಕೆ ಅಂಗಡಿಯ ಮಾಲೀಕ ಒಪ್ಪಿಲ್ಲ.

ಕೊನೆಗೆ ಅಲ್ಲಿಂದ ನಂದೀಶ್‌ ಹೊರಗೆ ಹೋಗಲು ಮುಂದಾಗಿದ್ದಾನೆ. ಆದರೆ, ನಂದೀಶನ ಮಾತಿನಿಂದ ಕೋಪಗೊಂಡಿರುವ ಮುರುಗೇಶ ಕುಳಿತ ಜಾಗದಿಂದಲೇ ನಂದೀಶನ ಮೇಲೆ ಕತ್ತರಿ ಎಸೆದಿದ್ದಾನೆ. ಅಲ್ಲದೇ ಗ್ರಾಹಕರನ್ನು ಹಿಂಬಾಲಿಸಿ ಮುರುಗೇಶ ಹಾಗೂ ಆತನ ಗೆಳೆಯರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಲ್ಲಿನ ಹುಣಸೂರು ಪೊಲೀಸ್‌ ಠಾಣೆಯಲ್ಲಿ ಮೂವರು ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಸ್ಪರ ಬೈಗುಳ ವಿನಿಮಯ?

ಗಲಾಟೆ ನಡೆದ ಸಂದರ್ಭದಲ್ಲಿ ಇಬ್ಬರು ಪರಸ್ಪರ ಬೈದಾಡಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ, ಈ ಗಲಾಟೆ ವಿಕೋಪಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಹಲ್ಲೆಯಲ್ಲಿ ಗಾಯೊಗೊಂಡಿರುವ ನಂದೀಶ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಘಟನೆ ಈ ಹಂತಕ್ಕೆ ಯಾವ ಕಾರಣಕ್ಕೆ ಹೋಗಿದೆ ಎನ್ನುವುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+