• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಹುಲ್ ಗಾಂಧಿ ಸಮಾವೇಶಕ್ಕಾಗಿ ಬೆಳೆದ ಬೆಳೆ ಧ್ವಂಸ?

By Mahesh
|

ಹಾವೇರಿ, ಅ.08: ಕರ್ನಾಟಕದ ರೈತರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಲು ಬರುತ್ತಿರುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಆಗಮನಕ್ಕಾಗಿ ಫಲವತ್ತಾ ಭೂಮಿ ನಾಶವಾಗಿದೆ, ಬೆಳೆದು ನಿಂತ ಬೆಳೆ ಧ್ವಂಸವಾಗಿದೆ. ಕೈ ಬಂದ ಬೆಳೆ ಹಾಳಾಗಿದ್ದಕ್ಕೆ ಕಂಡು ರೈತ ನೀಲಪ್ಪ ಹಿರೇಬಿದರಿ ಕಂಗಾಲಾಗಿದ್ದಾರೆ. ಈ ಬಗ್ಗೆ ಇತಿಹಾಸಕಾರ ರಾಮಚಂದ್ರ ಗುಹಾ ಟ್ವೀಟ್ ಮಾಡಿ ಚರ್ಚೆ ಆರಂಭಿಸಿದ್ದಾರೆ.

ಉತ್ತರ ಕರ್ನಾಟಕದ ರೈತರು ಹಾಗೂ ಮಂಡ್ಯದ ಕಬ್ಬು ಬೆಳೆಗಾರರನ್ನು ಮಾತನಾಡಿಸಲು ದೆಹಲಿಯಿಂದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆ. [ರಾಜ್ಯದಲ್ಲಿ ಇನ್ನು 3 ದಿನ ಮಳೆ]

ಅವರನ್ನು ಸ್ವಾಗತಿಸಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ ನಾಯಕರು ರಾಣೆಬೆನ್ನೂರು ತಾಲೂಕಿನ ಗುಡಗೂರು ಗ್ರಾಮದಲ್ಲಿ ವೇದಿಕೆ ನಿರ್ಮಾಣ, ಪೆಂಡಾಲ್ ಹಾಕುವ ಭರದಲ್ಲಿ ನೀಲಪ್ಪ ಎಂಬ ರೈತರಿಗೆ ಸೇರಿದ್ದ ನಾಲ್ಕು ಎಕರೆಯನ್ನು ಹಾಳುಗೆಡವಿದ್ದಾರೆ.[ಅಕ್ಟೋಬರ್ 9, 10 ರಾಹುಲ್ ರಾಜ್ಯ ಪ್ರವಾಸ, ಕಾರ್ಯಕ್ರಮ]

ಬರದ ಛಾಯೆಯಿಂದ ನರಳುತ್ತಿದ್ದ ರೈತ ನೀಲಪ್ಪ ಅವರಿಗೆ ಆಡಳಿತರೂಢ ಪಕ್ಷದ ನಾಯಕರ ಆಜ್ಞೆ ಮೀರದಂಥ ಪರಿಸ್ಥಿತಿ, ರಾಹುಲ್ ಗಾಂಧಿಗಾಗಿ ಮಾಡಿದ ತ್ಯಾಗಕ್ಕೆ ತಕ್ಕ ಫಲ ಸಿಗುವ ನಿರೀಕ್ಷೆ ಅವರಲಿಲ್ಲ. ನೀಲಪ್ಪ ಅವರಂತೆ, ಸುತ್ತ ಮುತ್ತಲ ಜಮೀನು ಹೊಂದಿದ್ದ ಅನೇಕ ರೈತರು ಈ ರೀತಿಯ ಬಲವಂತದ ತ್ಯಾಗಕ್ಕೆ ಅಣಿಯಾಗಿದ್ದಾರೆ.

ಸ್ಥಳೀಯ ಶಾಸಕರ ಪ್ರತಿಕ್ರಿಯೆ

ಸ್ಥಳೀಯ ಶಾಸಕರ ಪ್ರತಿಕ್ರಿಯೆ

ರಾಹುಲ್ ಸಮಾವೇಶಕ್ಕೂ ಮುನ್ನ ಇಲ್ಲಿನ ರೈತರನ್ನು ಭೇಟಿ ಮಾಡಿ ನಾಲ್ಕು ಸಾಂತ್ವನದ ಮಾತುಗಳನ್ನಾಡಿ ಹೋಗಿರುವ ಸ್ಥಳೀಯ ಶಾಸಕ ಕೆ. ಬಿ ಕೋಳಿವಾಡ ಅವರು ಬೆಳೆನಾಶ ಏನು ಆಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮಂಡ್ಯದ ವಿಸಿ ಫಾರ್ಮ್ ನಲ್ಲಿ ಸಂವಾದ

ಮಂಡ್ಯದ ವಿಸಿ ಫಾರ್ಮ್ ನಲ್ಲಿ ಸಂವಾದ

ಅಕ್ಟೋಬರ್ 9 ರಂದು ಬೆಂಗಳೂರಿಗೆ ಬರುವ ರಾಹುಲ್ ಗಾಂಧಿ ಅವರು ಮಂಡ್ಯದ ವಿಸಿ ಫಾರ್ಮ್ ಗೆ ತೆರಳಲಿದ್ದು, ಮೃತ ರೈತರೊಬ್ಬರ ಮನೆಗೆ ಭೇಟಿ ನೀಡುವ ಕಾರ್ಯಕ್ರಮವಿದೆ. ಕೃಷಿ ವಿಜ್ಞಾನಿ, ಕೃಷಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮವೂ ಆಯೋಜನೆಗೊಂಡಿದೆ,

ಸಾಲದ ಹಿನ್ನಲೆ ರೈತರ ಆತ್ಮಹತ್ಯೆ

ಸಾಲದ ಹಿನ್ನಲೆ ರೈತರ ಆತ್ಮಹತ್ಯೆ

ಅಕ್ಟೋಬರ್ 10ರಂದು ಹಾವೇರಿ, ರಾಣೆಬೆನ್ನೂರಿಗೆ ಆಗಮಿಸಲಿದ್ದಾರೆ. ಏಪ್ರಿಲ್ 2015ರಿಂದ ಇಲ್ಲಿ ತನಕ ರಾಜ್ಯದಲ್ಲಿ ಸುಮಾರು 518 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಡ್ಯದಲ್ಲೇ 58ಕ್ಕೂ ಅಧಿಕ ರೈತರು ಬೆಳೆ ನಷ್ಟ, ಬ್ಯಾಂಕ್ ಸಾಲದ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಮಚಂದ್ರ ಗುಹಾರಿಂದ ಟ್ವೀಟ್

ಇತಿಹಾಸ ತಜ್ಞ ರಾಮಚಂದ್ರ ಗುಹಾರಿಂದ ಟ್ವೀಟ್

ಕಾಂಗ್ರೆಸ್ ಶಾಸಕರಿಂದ ಪ್ರತಿಕ್ರಿಯೆ

ಕಾಂಗ್ರೆಸ್ ಶಾಸಕರಿಂದ ಪ್ರತಿಕ್ರಿಯೆ ಹೀಗಿದೆ ಎಂದು ಗುಹಾರ ಟ್ವೀಟ್ ಗೆ ಪ್ರತಿಕ್ರಿಯೆ.

ಮಾಧ್ಯಮಗಳ ವರದಿಗಳತ್ತ ಗಮನ ಹರಿಸಿ

ಮಾಧ್ಯಮಗಳ ವರದಿಗಳತ್ತ ಗಮನ ಹರಿಸಿ, ಶಾಸಕರೇ ಹೇಳಿದ್ದಾರೆ ಯಾವ ಜಮೀನಿನ ಬೆಳೆಯೂ ನಾಶವಾಗಿಲ್ಲ ಎಂದು ಮತ್ತೊಂದು ಟ್ವೀಟ್

ಬೆಳೆ ಹಾನಿಯಾಗಿಲ್ಲ ರೈತರಿಂದ ಪ್ರತಿಕ್ರಿಯೆ

ಬೆಳೆ ಹಾನಿಯಾಗಿಲ್ಲ ರೈತರಿಂದ ಪ್ರತಿಕ್ರಿಯೆ

ರೈತರಾದ ಏಕನಾಥ ಭಾನವಳ್ಳಿ, ಈರಣ್ಣ ಬಡಿಗೇರ ಮತ್ತು ವೆಂಕಟೇಶ ವಡರಹಳ್ಳಿ ಅವರು, ಬೆಳೆ ಹಾನಿ ಸುದ್ದಿಯನ್ನು ಅಲ್ಲಗೆಳೆದಿದ್ದು, ಹದಿನೈದು ದಿನಗಳ ಹಿಂದೆಯೇ ನಾವು ಮೆಕ್ಕೆಜೋಳವನ್ನು ಕಟಾವು ಮಾಡಿದ್ದೇವೆ. ಶಾಸಕ ಕೋಳಿವಾಡ ಅವರು ಕಟಾವು ಮಾಡಿದ ಹೊಲಗಳನ್ನು ಆಯ್ಕೆ ಮಾಡಲು ಹೇಳಿದ್ದರು. ಅದರಂತೆ ನಮ್ಮ್ ಜಮೀನು ನೀಡಲಾಗಿದೆ. ನಾವು ಯಾವುದೇ ಒತ್ತಡಕ್ಕೆ ಮಣಿಯದೇ ನಮ್ಮ ಹೊಲದಲ್ಲಿ ವೇದಿಕೆ ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka is getting ready for the much awaited rally of Rahul Gandhi who is scheduled to go for a nine-km padayatra in the state on Saturday, Oct 10. Ahead of his scheduled rally, Rahul Gandhi landed in a controversy. Crops, which scattered on an area roughly the size of three football fields, have been cleared before harvest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more