ಶಿವರಾತ್ರಿಯಂದೇ ಶಿವಲಿಂಗ, ನಂದಿಗೆ ಅವಮಾನ: ನಿಧಿ ಕಳ್ಳರ ವಿರುದ್ಧ ಸಿಡಿದೆದ್ದ ಸಿಂಗಟಾಲೂರು ಗ್ರಾಮಸ್ಥರು, ಬಿಜೆಪಿ ಟೀಕೆ
ಗದಗ: ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರಲ್ಲಿ ಶ್ರೀ ರಾಮೇಶ್ವರ ಹಾಗೂ ನಂದಿ ವಿಗ್ರಹವನ್ನು ಭಗ್ನಗೊಳಿಸಲಾಗಿದ್ದು, ದುಷ್ಕರ್ಮಿಗಳ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಭಾನುವಾರ ಬೆಳಿಗ್ಗೆ ಅರ್ಚಕರು ದೇವಸ್ಥಾನಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯಕ್ಕೆ ಗ್ರಾಮಸ್ಥರು ವ್ಯಾಪಕ ಆಕ್ರೋಶ ಹೊರಹಾಕಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳು ನಿಧಿ ಆಸೆಗಾಗಿ ಈ ರೀತಿ ಕೃತ್ಯ ಎಸಗಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ. ಮಹಾ ಶಿವರಾತ್ರಿಯ ದಿನವಾದ ಫೆಬ್ರವರಿ 16ರ ಭಾನುವಾರ ಈ ಬೆಳವಣಿಗೆ ನಡೆದಿದ್ದು, ಪೂಜೆಗೆಂದು ಅರ್ಚಕರು ದೇವಾಲಯಕ್ಕೆ ಹೋದ ಸಂದರ್ಭದಲ್ಲಿ ಕೃತ್ಯ ಬೆಳಕಿಗೆ ಬಂದಿದೆ. ಮಹಾ ಶಿವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ಸಕಲ ಸಿದ್ಧತೆಯನ್ನು ಸಹ ಮಾಡಿಕೊಳ್ಳಲಾಗಿತ್ತು. ಆದರೆ, ಬೆಳಗ್ಗೆ ಶಿವಲಿಂಗ, ನಂದಿ ವಿಗ್ರಹವನ್ನು ವಿರೂಪಗೊಳಿಸಿರುವುದು ರಾಜ್ಯದಾದ್ಯಂತ ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿದೆ.

ಶ್ರೀರಾಮೇಶ್ವರ ಹಾಗೂ ನಂದಿ ವಿಗ್ರಹವನ್ನು ಭಗ್ನ: ಬಿಜೆಪಿ ಟೀಕೆ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಹ ತೀವ್ರ ಟೀಕೆ ಮಾಡಿದೆ. ಸಾವಿರಾರು ವರ್ಷಗಳ ಹಿಂದೆ ಘಜ್ನಿ, ಘೋರಿ, ಖಿಲ್ಜಿ, ಔರಂಗಜೇಬನಂತಹ ಕ್ರೂರಿಗಳಿದ್ದರು, ಅವರು ಹಿಂದೂಗಳ ಮೇಲೆ ಹಾಗೂ ಹಿಂದೂಗಳ ಆಚರಣೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದರು ಎಂಬುದನ್ನು ಇತಿಹಾಸದಲ್ಲಿ ಓದಿದ್ದೇವೆ. ಇತಿಹಾಸ ಮರುಕಳಿಸುತ್ತದೆ ಎಂಬಂತೆ ಈಗ ಕರ್ನಾಟಕದಲ್ಲಿಯೂ ಸಹ ಆ ಕೆಟ್ಟ ಇತಿಹಾಸ ಮರುಕಳಿಸುತ್ತಿದೆ.
ಕರ್ನಾಟಕದಲ್ಲಿ ಯಾವಾಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂತೋ, ಅಲ್ಲಿಂದ ನಿರಂತರವಾಗಿ ಕರ್ನಾಟಕದ ಹಿಂದೂಗಳ ಮೇಲೆ ಹಾಗೂ ಹಿಂದೂಗಳ ನಂಬಿಕೆ-ಆಚಾರ-ವಿಚಾರದ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಹಿಂದೂಗಳ ಪಾಲಿನ ಪವಿತ್ರ ಹಬ್ಬಗಳನ್ನೇ ಗುರಿಯಾಗಿಸಿಕೊಂಡು, ಮತಾಂಧ ಜಿಹಾದಿಗಳು ವ್ಯವಸ್ಥಿತವಾಗಿ ಸಂಚು ನಡೆಸಿ ಹಿಂದೂಗಳ ಭಾವನೆಗೆ ಧಕ್ಕೆ ತಂದರೂ, ಹಿಂದೂಗಳ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದರೂ, ಆಳುತ್ತಿರುವ ಕಾಂಗ್ರೆಸ್ ಸರ್ಕಾರ ಮಾತ್ರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತಿದೆ. ಗಣೇಶ ವಿಸರ್ಜನೆ ಸಮಯದಲ್ಲಿ ಗಣೇಶನ ಮೂರ್ತಿಯ ಮೇಲೆ ಕಲ್ಲು ತೂರಿದರೂ, ಕಲ್ಲು ತೂರಿದ ಜಿಹಾದಿಗಳನ್ನು ಬಂಧಿಸದ ಹೇಡಿ ಎಂದರೆ ಅದು ಕರ್ನಾಟಕ ಕಾಂಗ್ರೆಸ್ ಸರ್ಕಾರ.
ನಿನ್ನೆ ನಡೆದ ಶಿವರಾತ್ರಿ ದಿನದಂದೂ ಸಹ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮುಂದುವರೆದಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ತುಂಗಭದ್ರಾ ನದಿ ದಡದಲ್ಲಿರುವ ಪುರಾತನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿ ದೇವರ ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಶಿವರಾತ್ರಿಯಂದು ವಿಶೇಷ ಪೂಜೆಗೆ ಪಾತ್ರವಾಗಬೇಕಿದ್ದ ದೇವರ ಮೂರ್ತಿಗಳು ಭಗ್ನಗೊಂಡು ಅಕ್ಷರಶಃ ಧರಾಶಾಯಿಯಾಗಿವೆ.
ಕಲಬುರಗಿ ನಗರದ ಬಹಮನಿ ಕೋಟೆಯ ಆವರಣದಲ್ಲಿರುವ ಸ್ವಯಂಭು ಸೋಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪೂಜೆ ಸಲ್ಲಿಸಲು ಹಿಂದೂಗಳು ಅನುಮತಿ ಪಡೆಯಬೇಕಂತೆ. ಪೂಜೆ ಸಲ್ಲಿಸಲು ಭಕ್ತಿಯಿಂದ ಹೂವು-ಹಣ್ಣು-ಕಾಯಿ-ಕರ್ಪೂರ ತೆಗೆದುಕೊಂಡು ಹೋಗಿದ್ದ ಭಕ್ತರನ್ನು ಅಮಾನುಷವಾಗಿ ಬಂಧಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಗೃಹ ಸಚಿವ ಜಿ. ಪರಮೇಶ್ವರ್ ಅವರೇ, ಕಾಕತಾಳೀಯವೋ ಅಥವಾ ವಿಪರ್ಯಾಸವೋ ನೀವು ಮೂರು ಜನರೂ ಸಹ ಹಿಂದೂ ದೇವರ ಹೆಸರನ್ನು ಇಟ್ಟುಕೊಂಡವರು. ಅದರಲ್ಲೂ ಶಿವಕುಮಾರ್ ಮತ್ತು ಪರಮೇಶ್ವರ್ ಅವರು ಸಾಕ್ಷಾತ್ ಮಹಾಶಿವನ ಹೆಸರಿಟ್ಟುಕೊಂಡವರು. ಆದರೂ ಸಹ ಮಹಾಶಿವರಾತ್ರಿಯಂದು ಶಿವಭಕ್ತರಿಗೆ ಪೂಜೆ ಸಲ್ಲಿಸಲು ಅವಕಾಶ ಸಿಗುವುದಿಲ್ಲ.
ಹಿಂದೂಗಳ ಭಾವನೆಗೆ, ನಂಬಿಕೆಗೆ, ಆಚಾರ-ವಿಚಾರಗಳಿಗೆ, ಹಿಂದೂ ದೇವಾಲಯಗಳಿಗೆ, ಹಿಂದೂ ದೇವರ ಮೂರ್ತಿಗಳಿಗೆ ಅದಿನ್ನೆಷ್ಟು ಅಪಚಾರವೆಸಗುತ್ತೀರಿ.. ನಿಜಕ್ಕೂ ನೀವು ಒಬ್ಬ ಹಿಂದೂವಾಗಿದ್ದರೆ, ಶಿವರಾತ್ರಿಯಂದು ಹಿಂದೂಗಳ ದೇವರ ಮೂರ್ತಿಗೆ ಧಕ್ಕೆ ಉಂಟು ಮಾಡಿದ ಮತಾಂಧರ ವಿರುದ್ಧ ಕ್ರಮ ಕೈಗೊಂಡು, ನೀವೊಬ್ಬ ಹಿಂದೂ ಎಂದು ಸಾಬೀತು ಮಾಡಿ ಎಂದು ಕರ್ನಾಟಕ ಬಿಜೆಪಿ ಹೇಳಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications