ಶಿವಮೊಗ್ಗ ಗಲಭೆ ಕುರಿತು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೊಳ್ಳ ಬೇಕು: ಮಹೇಶ್ ಟೆಂಗಿನಕಾಯಿ

ಹುಬ್ಬಳ್ಳಿ, ಅಕ್ಟೋಬರ್‌ 02: ಶಿವಮೊಗ್ಗ ಗಲಭೆ ಪ್ರಕರಣ ನೋಡಿದರೆ ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗಲಭೆಕೋರರಿಗೆ ಜೈಲಿನ ಹಕ್ಕಿ ಹೊರಗಡೆ ಬಂದ ಹಾಗೇ ಆಗಿದೆ ಎಂದು ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.

ಈ ಕುರಿತು ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು , ಭಾರತೀಯ ಜನತಾ ಪಕ್ಷದ ಸರ್ಕಾರ ಇದ್ದಾಗ ನಾವು ಏನು ಬ್ಯಾನ್ ಮಾಡಿದ್ದವು ಆ ಸಂಘಟನೆಗಳು ಇಂದು ಬೇರೆ ಬೇರೆ ಮುಖವಾಡ ಹಾಕಿಕೊಂಡು ಈ ರೀತಿಯಲ್ಲಿ ದಾಂಧಲೆ ಮಾಡತಾ ಇವೆ. ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೊಳ್ಳ ಬೇಕು. ಭಯೋತ್ಪಾದನಾ ಸಂಘಟನೆಗಳಿಗೆ ಈಗ ಯಾವುದೇ ಲಗಾಮು ಇಲ್ಲ ಆದ್ದರಿಂದ ಸರ್ಕಾರ ಸಹ ಪುಷ್ಟೀಕರಣ ರಾಜಕಾರಣ ಮಾಡತಾ ಇದೆ ಎಂದರು.

shivamogga-eid-milad-clash

ಕಾಂಗ್ರೆಸ್ ಸರ್ಕಾರದಲ್ಲಿ ಲಿಂಗಾಯತರನ್ನ, ಲಿಂಗಾಯತ ಅಧಿಕಾರಿಗಳಿಗಳನ್ನ ಕಡೆಗಣಿಸಲಾಗುತಿದೆ ಎಂಬ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ಸತ್ಯವಾಗಿದೆ ಎಂದ ಅವರು ಲಿಂಗಾಯತರಿಗೆ ಹಾಗೂ ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯ ಆಗತಾ ಇದೆ ಈ ಹಿಂದೆ ಸಹ ಸಿದ್ದರಾಮಯ್ಯಾನವರು ತಮ್ಮ ಸರಕಾರಲ್ಲಿ ಜೀಲೇಬಿ ಪೈಲ್ ಮುಟ್ಟಬೇಡಿ ಅಂತಾ ಹೇಳಿದ್ದರು. ಆದ್ದರಿಂದ ಸರ್ಕಾರದಲ್ಲಿ ಎಲ್ಲವೋ ಸರಿ ಇಲ್ಲ ಅಂತಾ ಎಲ್ಲರಿಗೂ ಗೊತ್ತು ಎಂದು ವಾಗ್ದಾಳಿ ನಡೆಸಿದರು.

ಸರ್ಕಾರದಲ್ಲಿ ಮೂರು ಉಪ ಮುಖ್ಯಮಂತ್ರಿಗಳು ಇರಬೇಕು ಅಂತಾ ಅವರ ಪಕ್ಷದವರೇ ಒತ್ತಾಯ ಮಾಡತಾ ಇದ್ದಾರೆ ಇನ್ನು ಬೇರೆಯವರು ಹೋಗಲಿ ಅವರ ಪಕ್ಷದ ಹಿರಿಯರು ಹಾಗೂ ಸಚಿವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು ಇನ್ನು ಸರ್ಕಾರದಲ್ಲಿ ಯಾವ ರೀತಿ ಅಧಿಕಾರಿಗಳಿಗೆ ಅನ್ಯಾಯ ಆಗಿದೆ ಪಟ್ಟಿ ಸಹ ಬಿಡುಗಡೆ ಮಾಡುತ್ತೇನೆ ಎಂದಿದ್ದಾರೆ ಎಂದ ಅವರು ವೀರಶೈವ ಮಹಾಸಭಾ ಜಗದೀಶ್ ಶೆಟ್ಟರ್ ಅವರನ್ನು ಉಪ ಮುಖ್ಯಮಂತ್ರಿ ಮಾಡಬೇಕು ಅಂತಾ ಕಾಂಗ್ರೆಸ್ ನಾಯಕರಿಗೆ ಪತ್ರ ಬರೆದ ಕುರಿತು ಸಹ ಪ್ರತಿಕ್ರಿಯೆ ಕೊಟ್ಟ ಅವರು ವಿಧಾನ ಪರಿಷತ್ ಸದಸ್ಯರನ್ನ ಮಾಡಿದ್ದೇ ದೊಡ್ಡದು ಇನ್ನೇನು ಅವರನ್ನು ಮಾಡಲ್ಲ ಎಂದರು.

ಇನ್ನೂ ಶಿವಮೊಗ್ಗ ಗಲಭೆ ಕುರಿತು ಈಶ್ವರಪ್ಪ ಮಾತನಾಡಿ, ಮೊನ್ನೆ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮಾಡಲಾಯ್ತು. ಮಕ್ಕಳು, ಮಹಿಳೆಯರು ಎಲ್ಲರೂ ಸೇರಿ 1 ಲಕ್ಷಕ್ಕೂ ಅಧಿಕ ಜನ ಸೇರಿ ಹಬ್ಬ ಮಾಡಿದರು, ಯಾವುದೇ ಒಂದು ಗಲಾಟೆಯಾಗಲಿಲ್ಲ. ಲಕ್ಷಾಂತರ ಜನ ಸೇರಿ ಹಲವು ಕಾರ್ಯಕ್ರಮ ಮಾಡಿದ್ರೂ ಒಂದು ಗಲಾಟೆಯಾಗಲ್ಲ. ಆದರೆ, ನಿನ್ನೆ ಮುಸಲ್ಮಾನರ ಮೆರವಣಿಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು ಎಂದು ಹೇಳಿದರು.

ಮೆರವಣಿಗೆ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ತಲ್ವಾರ್ ಹಿಡ್ಕೊಂಡು ಹೋಗ್ತಾರೆ. ಯಾರಿಗೆ ಎಚ್ಚರ ಅದು.. ಹಿಂದು ಸಮಾಜಕ್ಕಾ.? ಶಿವಮೊಗ್ಗ ನಗರದಲ್ಲಿ ದೊಡ್ಡ ದೊಡ್ಡ ತಲ್ವಾರ್ ನೇತು ಹಾಕಿದ್ದಾರೆ. ಕೋಲಾರದಲ್ಲೂ ಹಾಕಿದ್ರು. ಅಲ್ಲಿನ ಸಂಸದರ ಎಚ್ಚರಿಕೆ ಬಳಿಕ ತೆಗೆದರು.ಅದು ಗೋತ್ತಿದ್ರೂ ಇಲ್ಲಿ ದೊಡ್ಡ ಖಡ್ಗ ಹಾಕೋಕೆ ಯಾಕೇ ಬಿಟ್ಟರು? ಎಂದು ಪ್ರಶ್ನಿಸಿದ್ದಾರೆ.

ಪೊಲೀಸನವರು ಸರ್ಕಾರಕ್ಕೆ ಹೆದರಿ ಹೋಗಿದ್ದಾರೆ. ತಲ್ವಾರ್ ಗೆ ತಲ್ವಾರ್ ಹಿಡಿದು, ಉತ್ತರ ಕೊಡೋಕೆ ಹಿಂದೂ ಸಮಾಜಕ್ಕೆ ಬರುತ್ತೇ. ಇದನ್ನ ಸಿಎಂ, ಗೃಹ ಮಂತ್ರಿ ಹಾಗೂ ಮುಸ್ಲಿಂರಿಗೆ ಎಚ್ಚರಿಕೆ ಕೋಡುತ್ತೇನೆ. ತಲ್ವಾರ್ ಹಿಡಿದು ಟ್ರಾಕ್ಟರ್ ಅಲ್ಲಿ ಹೋದ್ರೇ ಅರೆಸ್ಟ್ ಮಾಡಲ್ಲ ಅವರು. ಇವರು ಪೊಲೀಸ್ ಆಗೋಕೆ ಅನ್ ಫಿಟ್ ಅಗಿದ್ದಾರೆ. ಕಾಂಗ್ರೆಸ್ ಸರ್ಕಾರ ಮುಸ್ಲಿಂ ರ ಗುಲಾಮರ ರೀತಿ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಖಡ್ಗ ಹಾಕಿ ಯಾರಿಗೆ ಸ್ಫೂರ್ತಿ ಕೊಡ್ತಾರೆ, ಅವರೆಲ್ಲಾ ದೇಶ ದ್ರೋಹಿಗಳು. ಮುಸ್ಲಿಂ ಸಮಾಜ ಹಬ್ಬವನ್ನು ಮಾಡಿಲ್ಲ, ಹಿಂದೂ ಸಮಾಜಕ್ಕೆ ಎಚ್ಚರಿಕೆ ರೀತಿ ಮಾಡಿದ್ದಾರೆ. ಇದೆಲ್ಲಾ ಸರ್ಕಾರಕ್ಕೆ ಗೊತ್ತಿಲ್ವಾ ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+