ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಪಾಗಲ್ ಪ್ರೇಮಿಯನ್ನು ಹುಡುಕಿಕೊಟ್ಟವರಿಗೆ ಪೊಲೀಸರಿಂದ 50 ಸಾವಿರ ಬಹುಮಾನ!

|
Google Oneindia Kannada News

ಬೆಂಗಳೂರು, ಆಗಸ್ಟ್ 03: ಅದೊಂದು ಅಪ್ರಾಪ್ತೆಯ ಪ್ರೇಮಕಾವ್ಯ. ಚಲುವಿನ ಚಿತ್ತಾರವನ್ನು ಸಿನಿಮಾವನ್ನೇ ಮೀರಿಸುವ ಪ್ರೀತಿ. ಅಪ್ರಾಪ್ತೆಯನ್ನು ಕರೆದುಕೊಂಡು ಕಾಲ್ಕಿತ್ತ ಪ್ರೇಮಿ. ಎಂಟು ತಿಂಗಳಾದರು ಪತ್ತೆಯಾಗದ ಪ್ರೇಮಿಗಳು. ಅಪ್ರಾಪ್ತೆಯ ಲವ್ ಕಂ ಕಿಡ್ನಾಪ್ ಕಹಾನಿಯಲ್ಲಿ ಹೇಬಿಯಸ್ ಕಾರ್ಪಸ್ ಟ್ವಿಸ್ಟ್. ಪ್ರೇಮಿಗಳ ಚೆಲ್ಲಾಟ, ಹೆತ್ತವರ ಸಂಕಟ, ಪೊಲೀಸರಿಗೆ ಪೀಕಲಾಟದ ಅಪರೂಪದ ಕಹಾನಿ ಇಲ್ಲಿದೆ.

ಅಪ್ರಾಪ್ತೆಯನ್ನು ಪ್ರೀತಿಸಿ ಕರೆದುಕೊಂಡು ಹೋಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರವವನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ನಗದನ್ನು ನೀಡುವುದಾಗಿ ಶಿವಮೊಗ್ಗ ಪೊಲೀಸರು ಘೋಷಿಸಿದ್ದಾರೆ.

ಲಿಂಗರಾಜು ಅಲಿಯಾಸ್ ವಿರಾಟ್ ಎಂಬಾತ ಅಪ್ರಾಪ್ತೆಯನ್ನು ಪ್ರೀತಿಸಿ ಪುಸಲಾಯಸಿಕೊಂಡು ಕರೆದುಕೊಂಡು ಹೋಗಿ ಎಂಟು ತಿಂಗಳು ಕಳೆದಿವೆ. ಲಿಂಗರಾಜುವಿಗಾಗಿ ಪೊಲೀಸರು ಸತತವಾಗಿ ಹುಡುಕಾಟವನ್ನು ನಡೆಸಿದರು ಆತ ಮಾತ್ರ ಸಿಕ್ಕಿಬೀಳುತ್ತಿಲ್ಲ. ಆಗಿದಾಗ್ಗೆ ಬೇರೆ ಬೇರೆ ಊರು ಬೇರೆ ಬೇರೆ ಫೋನ್ ನಿಂದ ಅಪ್ರಾಪ್ತೆಯ ಪೋಷಕರಿಗೆ ಕರೆಯನ್ನು ಮಾಡಿಸಿ ಅಲ್ಲಿಂದ ಕಾಲ್ಕಿಳುತ್ತಿದ್ದು. ಲಿಂಗರಾಜು ಪತ್ತೆಗಾಗಿ ಶಿವಮೊಗ್ಗದ ಮಹಿಳಾ ಪೊಲೀಸರು ನಗದು ಬಹುಮಾನ ಘೋಷಿಸಿದ್ದಾರೆ.

ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿರುವ ಲಿಂಗರಾಜು ಬೇರೆ ಬೇರೆ ಸ್ಥಳಗಳಿಗೆ ಹೋದಾಗ ದಾರಿಹೋಕರ ಬಳಿಯಲ್ಲಿ ಮೊಬೈಲ್ ಪಡೆದು ಅಪ್ರಾಪ್ತೆಯ ಪೋಷಕರಿಗೆ ಕರೆ ಮಾಡಿಸಿದ್ದಾನೆ. ಆ ಮೊಬೈಲ್ ಜಾಡು ಹಿಡಿದು ಹೋದ ಪೊಲೀಸರಿಗೆ ತರಕಾರಿ ಮಾರುವವರೋ ಅಥವಾ ಇನ್ಯಾರೋ ಸಿಗುತ್ತಾರೆ. ಆದರೆ ಅವರಿಗೂ ಅಪ್ರಾಪ್ತೆಗೂ ಪರಿಚಯವೇ ಇರುವುದಿಲ್ಲ. ಇದರಿಂದ ಹೈರಾಣಾಗಿರುವ ಪೊಲೀಸರು ಆರೋಪಿಯ ಫೋಟೋವನ್ನು ಎಲ್ಲೆಡೆ ಹಂಚಿದ್ದಾರೆ. ವಾಟ್ಸ್‌ಆಪ್ ನಲ್ಲಿ ಫೋಟೋ ಶೇರ್ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ. ಈವರೆಗೂ ಆರೋಪಿ ಮಾತ್ರ ಪತ್ತೆಯಾಗಿಲ್ಲ.

 ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿರುವ ದೂರು

ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿರುವ ದೂರು

ಅಪ್ರಾಪ್ತೆಯು ಖಾಸಗಿ ಶಾಲೆಯಲ್ಲಿ 10ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದಳು. ಈಕೆಯ ತಂಗಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು. 2021ರ ಡಿಸಂಬರ್ ತಿಂಗಳಲ್ಲಿ ಪರೀಕ್ಷೆಯು ನಡೆಯುವ ಸಮಯದಲ್ಲಿ ಶಾಲೆಗೆ ಹೋಗಿದ್ದ ಮಗಳು ಪರೀಕ್ಷೆ ಮುಗಿದರು ಮನೆಗೆ ಬಂದಿರಲಿಲ್ಲ. ಆ ಬಳಿ ಮನೆಗೆ ಬಂದ ವೇಳೆಯಲ್ಲಿ ವಿಚಾರಿಸಿದಾಗ ಪ್ರಶ್ನೆಪತ್ರಿಕೆ ತರಲು ಸೈಬರ್‍‌ಗೆ ಹೋಗಿದ್ದೆ ತಡವಾಯಿತು ಎಂದು ಸಬೂಬನ್ನು ನೀಡಿದ್ದಳು. ಡಿಸಂಬರ್ 27ರ ಸಂಜೆ ಅಪ್ರಾಪ್ತೆ ತಾತನ ಮನೆಗೆ ನಿತ್ಯ ಓದಲು ಹೋಗುವಂತೆ ಹೋಗಿದ್ದಾಳೆ. ಆದರೆ ತಾತನ ಮನೆಗೆ ಹೋಗದೇ ಆಕೆ ಎಲ್ಲಿಯೋ ಹೋಗಿದ್ದಾಳೆ. ಈ ಬಗ್ಗೆ ಅಕ್ಕ ಪಕ್ಕ ಮತ್ತು ಸಂಬಂಧಿಕರ ಮನೆಯಲ್ಲೆಲ್ಲಾ ಹುಡುಕಾಡಿದರು ಅಪ್ರಾಪ್ತೆ ಪತ್ತೆಯಾಗಿರುವುದಿಲ್ಲ. ಲಿಂಗಾರಾಜು ಅಲಿಯಾಸ್ ವಿರಾಟ್ ಎಂಬಾತ ಕರೆದುಕೊಂಡು ಹೋಗಿರಬಹುದು ಕಿಡ್ನಾಪ್ ಮಾಡಿದ್ದಾನೆ ಎಂದು ಶಿವಮೊಗ್ಗ ಪೊಲೀಸ್ ಠಾಣೆಗೆ ಅಪ್ರಾಪ್ತೆಯ ತಂದೆ ದೂರನ್ನು ನೀಡಿರುತ್ತಾರೆ.

 ಬೇರೊಂದು ಹುಡುಗಿ ಹೆಸರಿನಲ್ಲಿ ಅವನು, ಇನ್ನೊಂದು ಹೆಸರಿನಲ್ಲಿ ಈಕೆ

ಬೇರೊಂದು ಹುಡುಗಿ ಹೆಸರಿನಲ್ಲಿ ಅವನು, ಇನ್ನೊಂದು ಹೆಸರಿನಲ್ಲಿ ಈಕೆ

ಲಿಂಗರಾಜು ಮತ್ತು ಅಪ್ರಾಪ್ತೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ವಿಚಾರ ತಂದೆಗೆ ತಿಳಿದು ಅಪ್ರಾಪ್ತೆಗೆ ಬುದ್ದಿ ಹೇಳಿದ್ದರು. ಆ ನಂತರ ಲಿಂಗರಾಜು ಹುಡುಗಿಯೊಬ್ಬಳ ಹೆಸರಿನಲ್ಲಿ ಚಾಟಿಂಗ್ ಮುಂದುವೆಸಿದ್ದನು. ಈಕೆಯು ಬೇರೊಂದು ಹುಡುಗಿಯ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಚಾಟಿಂಗ್ ನಡೆಸಿದ್ದರು. ಇದರಿಂದಾಗಿ ಯಾವುದೋ ಗೆಳತಿ ಎಂದು ಪೋಷಕರು ಸುಮ್ಮನಾಗಿದ್ದರು. ಅಸಲಿಗೆ ಪ್ರೇಮಿಗಳು ಪರಾರಿಯಾದ ಬಳಿಕವೇ ಚಾಟಿಂಗ್ ರಹಸ್ಯ ರಿವೀಲ್ ಆಗಿದೆ.

 ಸ್ವಂತ ಮೊಬೈಲ್, ಎಟಿಎಂ ಬಳಸದ ಭೂಪ

ಸ್ವಂತ ಮೊಬೈಲ್, ಎಟಿಎಂ ಬಳಸದ ಭೂಪ

ಜಯನಗರ ಮಹಳಾ ಪೊಲೀಸರು ಕಳೆದ ಎಂಟು ತಿಂಗಳಿಂದ ಸತತವಾಗಿ ಹುಡುಕಾಟವನ್ನು ನಡೆಸುತ್ತಿದ್ದರು ಆರೋಪಿ ಮತ್ತು ಅಪ್ರಾಪ್ತೆ ಪತ್ತೆಯಾಗಿಲ್ಲ. ಆರೋಪಿ ಮನೆಯನ್ನು ಬಿಟ್ಟು ತೆರಳುವ ವೇಳೆ 6 ಲಕ್ಷ ನಗದನ್ನು ತೆಗೆದುಕೊಂಡು ಹೋಗಿರುವ ಕಾರಣ ಹಣಕಾಸಿನ ಸಮಸ್ಯೆಯಾಗಿಲ್ಲ. ಆರೋಪಿ ಮತ್ತು ಅಪ್ರಾಪ್ತೆ ಮೊಬೈಲ್ ಬಳಕೆಯನ್ನು ಮಾಡದಿರುವುದು ಪೊಲೀಸರು ಆರೋಪಿಯನ್ನು ಹಿಡಿಯಲು ಕಷ್ಟವಾಗುತ್ತಿದೆ. ಇನ್ನು ನಗದು ಹಣ ಇರುವ ಕಾರಣ ಎಟಿಎಂ ಅನ್ನು ಲಿಂಗರಾಜು ಅಲಿಯಾಸ್ ವಿರಾಟ್ ಬಳಸಿಲ್ಲ.

 ಕೋವಿಡ್ ಸಂಮಯದಲ್ಲಿ ಶಿವಮೊಗ್ಗದಲ್ಲಿ ಲವ್ ಕಹಾನಿ

ಕೋವಿಡ್ ಸಂಮಯದಲ್ಲಿ ಶಿವಮೊಗ್ಗದಲ್ಲಿ ಲವ್ ಕಹಾನಿ

ಲಿಂಗರಾಜು ಅಲಿಯಾಸ್ ವಿರಾಟ್ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಹುಟ್ಟಿ ಬೆಳೆದಿದ್ದ. ಕೋವಿಡ್ ಸಮಯದಲ್ಲಿ ಬೆಂಗಳೂರನ್ನು ತೊರದು ತಾಯಿ ಮತ್ತು ಸಹೋದರನ ಜೊತೆ ಶಿವಮೊಗ್ಗಕ್ಕೆ ಹೋಗಿದ್ದ. ಬಾಡಿಗೆ ಮನೆಯನ್ನು ಪಡೆದು ವಾಸಿಸುತ್ತಿದ್ದ. ಮನೆಯ ಮಾಲೀಕರ ಮಗಳನ್ನೇ ಪ್ರೀತಿಸುತ್ತಿದ್ದ ಈ ವಿಚಾರ ತಿಳಿದು ಅಪ್ರಾಪ್ತೆಯ ತಂದೆ ಲಿಂಗರಾಜುವಿನ ಮನೆಯನ್ನು ಖಾಲಿ ಮಾಡಿಸಿದ್ದರು. ಬೆಂಗಳೂರಿನ ಸುಬ್ರಮಣ್ಯನಗರದಲ್ಲಿ ಕಾರು ಮತ್ತು ಬೈಕ್ ಸೇಲಿಂಗ್ ಕೆಲಸ ಮಾಡುತ್ತಿದ್ದ. ಈ ಸಮಯದಲ್ಲೇ ಕಾರು ಮಾರಿದ್ದ 6 ಲಕ್ಷ ಹಣವನ್ನಿಟ್ಟುಕೊಂಡಿದ್ದ. ಸಂಬಂಧಿಕರ ಮಗುವಿನ ನಾಮಕರಣದ ನೆಪದಲ್ಲಿ ಶಿವಮೊಗ್ಗಕ್ಕೆ ತೆರಳಿ ಗೌಪ್ಯವಾಗಿ ಡಿ.27,2021ರಂದು ಅಪ್ರಾಪ್ತೆಯನ್ನು ಭೇಟಿಯಾಗಿದ್ದ. ಅಪ್ರಾಪ್ತೆಯ ತಂದೆಗೂ ಈ ವಿಚಾರ ತಿಳಿ ಮಗಳಿಗೆ ಬುದ್ಧಿ ಹೇಳಿದ್ದರು. ಈ ವೇಳೆ ಮನೆಯಿಂದ ಹೊರ ಹೋದ ಅಪ್ರಾಪ್ತೆ ಕೆಲಸಗಾರೊಬ್ಬರಬಳಿ ಮೊಬೈಲ್ ಪಡೆದು ಲಿಂಗರಾಜುವಿಗೆ ಕರೆಯನ್ನು ಮಾಡಿದ್ದಳು. ಲಿಂಗರಾಜು ಅಪ್ರಾಪ್ತೆಯನ್ನು ಕರೆದುಕೊಂಡು ಹೋಗಿದ್ದ. ಈ ವೇಳೆ ಹೊಸಕೋಟೆ, ಅತ್ತಿಬೆಲೆ ಸೇರಿದಂತೆ ವಿವಿದೆಡೆಯಿಂದ ತಾನು ಚನ್ನಾಗದಿದ್ದೇನೆ ಎಂದೆಲ್ಲಾ ಕರೆಯನ್ನು ಮಾಡಿದ್ದರು. ಆದರೆ ಪೊಲೀಸರಿಗೆ ಮಾತ್ರ ಸಿಗುತ್ತಿಲ್ಲ.

 ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟ ನ್ಯಾಯಾಲಯ

ಪೊಲೀಸರಿಗೆ ಖಡಕ್ ಎಚ್ಚರಿಕೆ ಕೊಟ್ಟ ನ್ಯಾಯಾಲಯ

ಅಪ್ರಾಪ್ತೆಯನ್ನು ಹುಡುಕಿಕೊಡುವಂತೆ ಅಪ್ರಾಪ್ತೆಯ ಪೋಷಕರು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅನ್ನು ಹಾಕಿಕೊಂಡಿದ್ದಾರೆ. ನ್ಯಾಯಲಯವು ಪೊಲೀಸರಿಗೆ ಅಪ್ರಾಪ್ತೆಯನ್ನು ಹುಡುಕುವಂತೆ ತಾಕೀತು ಮಾಡಿದೆ. ಆದರೆ ಅಪ್ರಾಪ್ತೆ ಪತ್ತೆಯಾಗದ ಹಿನ್ನೆಲೆಯಲ್ಲಿ ನ್ಯಾಯಾಲಯವೂ ಪೊಲೀಸರಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ. ಇದರಿಂದಾಗಿ ಪೊಲೀಸರು ಶತಾಯಗತಾಯ ಅಪ್ರಾಪ್ತೆ ಮತ್ತು ಆರೋಪಿ ಲಿಂಗರಾಜುವಿನ ಪತ್ತಗೆ ಇನ್ನಿಲ್ಲದ ಕಸರತ್ತನ್ನು ನಡೆಸುತ್ತಿದ್ದಾರೆ.

 ಹುಡುಗಿಗೆ 18 ವರುಷ ತುಂಬಿದ ಮೇಲೂ ಸಿಕ್ಕರೂ ಸಮಸ್ಯೆ

ಹುಡುಗಿಗೆ 18 ವರುಷ ತುಂಬಿದ ಮೇಲೂ ಸಿಕ್ಕರೂ ಸಮಸ್ಯೆ

ಲಿಂಗರಾಜು ಅಲಿಯಾಸ್ ವಿರಾಟ್ ಅಪ್ರಾಪ್ತೆಯನ್ನು ಪ್ರೀತಿಸಿ ಕರೆದುಕೊಂಡು ಹೋದ ಮೇಲೆ ಮೂರಕ್ಕೂ ಹೆಚ್ಚು ಸಲ ತಾಯಿ ಮತ್ತು ಅಣ್ಣನಿಗೆ ಕರೆಯನ್ನು ಮಾಡಿದ್ದಾನೆ. ಈ ಮಾಹಿತಿಯನ್ನು ಶಿವಮೊಗ್ಗ ಪೊಲೀಸರಿಗೆ ತಿಳಿಸಿರಲಿಲ್ಲ. ಇದಕ್ಕಾಗಿ ಶಿವಮೊಗ್ಗ ಪೊಲೀಸರು ತಾಯಿ ಮತ್ತು ಅಣ್ಣನ ಮೇಲೂ ಪೋಕ್ಸೋ ಪ್ರಕರಣವನ್ನು ದಾಖಲಿಸಿ ಬಂಧಿಸಲಾಗಿತ್ತು. ಇವರಿಬ್ಬರೂ ಒಂದೂವರೆ ತಿಂಗಳ ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದಾರೆ. ಇನ್ನು ಲಿಂಗರಾಜುವನ್ನು ಪ್ರೀತಿಯಿಂದ ದೂರ ಮಾಡುವ ಸಲುವಾಗಿ ಪೋಷಕರು ರಿಹ್ಯಾಬಿಲೇಷನ್ ಸೆಂಟರ್‍‌ಗೆ ದಾಖಲು ಮಾಡಿದ್ದರು. ಈ ವೇಳೆ ಕೌನ್ಸಿಲಿಂಗ್ ಮಾಡಿದ್ದ ವೈದ್ಯರ ಬಳಿ ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದೇನೆ. ಆಕೆಯನ್ನು ಕರೆದುಕೊಂಡು ಹೋಗುತ್ತೇನೆ. ಆಕೆಗೆ 18 ವರುಷ ತುಂಬುವ ತನಕ ವಾಪಸ್ ಬರುವುದಿಲ್ಲ ಎಂದಿದ್ದನಂತೆ. "ಈತ ಹೇಳಿದಂತೆ ಅಪ್ರಾಪ್ತೆ 18 ವರುಷ ತುಂಬುವವರೆಗೂ ಸಿಗದೇ ಆ ನಂತರ ಪೊಲೀಸರಿಗೆ ಸಿಕ್ಕಿದರೂ ಈ ಕೇಸ್‌ನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಅಸಲಿಗೆ ಪೋಕ್ಸೋ ಮತ್ತು ಕಿಡ್ನಾಪ್ ಕೇಸ್‌ನಲ್ಲಿ ಲಿಂಗರಾಜು ಬಂಧನವಾಗುವುದು ಖಚಿತ" ಎನ್ನುತ್ತಾರೆ ಹಿರಿ ನ್ಯಾಯವಾದಿ ಜಿ ಆರ್ ಮೋಹನ್ ರವರು.

Recommended Video

Rohit Sharma ಅವರು ಈ ರೀತಿ ಮೈದಾನದಿಂದ ಆಚೆ ನಡೆದಿದ್ದೇಕೆ | *Cricket | Oneindia Kannada
 ಆರೋಪಿಯ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಆರೋಪಿಯ ಸುಳಿವು ಸಿಕ್ಕರೆ ಪೊಲೀಸರಿಗೆ ಮಾಹಿತಿ ನೀಡಿ

ಲಿಂಗರಾಜ್ ಕೆಲವರ ಬಳಿಯಲ್ಲಿ ತಾನೂ ಅಪ್ರಾಪ್ತೆಯನ್ನು ಗರಾಜ್ ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎ‍ಣ್ಣೆಗೆಂಪು ಮೈಬಣ್ಣ, ಕಪ್ಪಕಣ್ಣು ಚಿಗುರುಗಡ್ಡ, ಚಿಗುರು ಮೀಸೆಯಿದ್ದು ಕನ್ನಡ ಮತ್ತು ತೆಲಗು ಮಾತನಾಡುತ್ತಾನೆ ಎಂದು ಪೊಲೀಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಪ್ರಾಪ್ತೆಯನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ದೂರು ದಾಖಲಾಗಿರುವುದರಿಂದ ಆರೋಪಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದು ಆರೋಪಿ ಮತ್ತು ಅಪ್ರಾಪ್ತೆ ಮಾಹಿತಿ ತಿಳಿದು ಬಂದರೆ. ಪೊಲೀಸ್ ನಿರೀಕ್ಷಕರು ಮಹಿಳಾ ಪೊಲೀಸ್ ಠಾಣೆ ಶಿವಮೊಗ್ಗ ಫೋನ್ ನಂ 9480803349 ಮತ್ತು 9449584739 ಹಾಗೂ ಪೊಲೀಸ್ ನಿಯಂತ್ರಣ ಕೊಠಡಿ ಫೋನ್ ನಂ 9480803300 ಗೆ ತಿಳಿಸಲು ಕೋರಿದ್ದಾರೆ.

English summary
10th Std Girl Eloped with Her Boy Friend 8 Months Ago. Now Shivamogga police have announced a reward of Rs 50,000 to those who provide information of the Accused Lingaraju who escaped with the minor Girl. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X