Get Updates
Get notified of breaking news, exclusive insights, and must-see stories!

ಶಿಂಷಾ ಉಪವಾಸ 6ನೇ ದಿನಕ್ಕೆ:ಮಾತುಕತೆ ವಿಫಲ, ಮುಂದೇನೋ?

ಚನ್ನಪಟ್ಟಣ, ಜ.25: ಇಗ್ಗಲೂರು ಬಳಿಯ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಪ್ರತಿಭಟಿಸಿ ಸಿದ್ದರಾಮ ಹೆಗ್ಗಡೆ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಶನಿವಾರಕ್ಕೆ 6ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ, ನಿನ್ನೆ ತಾಲೂಕು ಕಂದಾಯಾಧಿಕಾರಿ ಮತ್ತಿತರ ಅಧಿಕಾರಿಗಳು ಸಿದ್ದರಾಮ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದರು.

ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಉಪವಾಸ ನಿಲ್ಲಿಸುವಂತೆ ಕೋರಿದರು. ಆದರೆ ಮಾತುಕತೆ ವಿಫಲವಾಗಿದ್ದು, ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿದ್ದರಾಮ ಹೆಗ್ಗಡೆ, ಗಣರಾಜ್ಯೋತ್ಸವಕ್ಕೆ ಅಡ್ಡಿಪಡಿಸುವುದಿಲ್ಲ. ಆದರೆ ಅಕ್ರಮ ಮರಳುಗಾರಿಕೆಗೆ ತಡೆ ಹಾಕುವವರೆಗೂ ಸತ್ಯಾಗ್ರಹ ನಿಲ್ಲುವಿಸುವುದಿಲ್ಲ ಎಂದಿದ್ದಾರೆ.

ಹಿಂದಿನ ಸುದ್ದಿ: ತಾಲೂಕಿನ ಗಡಿ ಭಾಗದ ಇಗ್ಗಲೂರು ಬಳಿಯ ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ತಡೆಗೆ ತಾಲೂಕು ಕಂದಾಯಾಧಿಕಾರಿಗಳು ಮರಳು ತೆಗೆಯುವ ಕಬ್ಬಿಣದ ಕೊಪ್ಪರಿಕೆಯನ್ನು ಪತ್ತೆ ಮಾಡುವ ಬದಲು, ಮೀನು ಹಿಡಿಯುವ ಬಿದರಿನ ತೆಪ್ಪವನ್ನು ಸುಟ್ಟು ಸಂತೋಷ ಪಡುತ್ತಿದ್ದಾರೆ!

ಹೌದು, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಸಿದ್ದರಾಮ ಹೆಗ್ಗಡೆ ಇಲ್ಲಿನ ತಾಲೂಕು ಪಂಚಾಯಿತಿ ಎದುರು ಉಪವಾಸ ಸತ್ಯಾಗ್ರಹಕ್ಕೆ ಕುಳಿತು ಇಂದಿಗೆ 5 ದಿನಗಳಾಗಿವೆ. ಸತ್ಯಾಗ್ರಹಕ್ಕೆ ಭಂಗ ತರಲೋ ಎಂಬಂತೆ ತಾಲೂಕು ಆಡಳಿತವು ಸತ್ಯಾಗ್ರಹ ಮಾಡುತ್ತಿರುವ ಸಿದ್ದರಾಮಯ್ಯ ಹೆಗ್ಗಡೆ (ಕೆಳಗಿನ ಚಿತ್ರದಲ್ಲಿ ಮಧ್ಯದಲ್ಲಿರುವವರು) ಹಾಗೂ ಅವರಿಗೆ ಬಂಬಲ ನೀಡುತ್ತಿರುವ ರೈತ ಸಂಘ ಹಾಗೂ ಇತರೆ ಜನಪರ ಘಟನೆಗಳ ಮುಖಂಡರ ಕಣ್ಣೊರೆಸುವ ತಂತ್ರ ಮಾಡುತ್ತಿದೆ.

shimsha-river-sand-mining-activist-siddaramaiah-hegde-hunger-strike

ಕಳೆದ 2-3 ವರ್ಷಗಳಿಂದ ಮರಳು ದಂಧೆಕೋರರು ಶಿಂಷಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಮರಳು ಸಾಗಣೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೆಗ್ಗಡೆ ಮರಳು ಗಣಿಗಾರಿಕೆ ನಿಲ್ಲಿಸಿ, ಇಗ್ಗಲೂರು ಡ್ಯಾಂ ಉಳಿಸಿ ಎಂದು ಕಳೆದ ಒಂದೂವರೆ ವರ್ಷದಿಂದಲೂ ಹೋರಾಟ ಮಾಡುತ್ತಾ, ವಿನೂತನ ಚಳುವಳಿ ಮಾಡಿದ್ದಾರೆ.

ಚಳವಳಿ ನಡೆಸುವ ಸಂದರ್ಭದಲ್ಲಿ ಅನೇಕ ಭರವಸೆ ನೀಡಿದ ತಾಲೂಕು ಮತ್ತು ಜಿಲ್ಲಾಡಳಿತ ಮರಳು ಮಾಫಿಯಾದ ಜತೆ ಕೈ ಜೋಡಿಸಿದೆ ಎಂದು ಸಿಟ್ಟಿಗೆದ್ದ ಹೆಗ್ಗಡೆ ಅವರು ಕಳೆದ 5 ದಿನದಿಂದ ಇಲ್ಲಿನ ತಾಲೂಕು ಕಚೇರಿ ಮುಂದೆ ಗಾಂಧಿ ಮಾರ್ಗದಲ್ಲಿ ಹಗಲು ರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದನ್ನು ಹತ್ತಿಕ್ಕುವ ನಿಟ್ಟಿನಲ್ಲಿ ತಾಲೂಕು ಆಡಳಿತ ಬಿದಿರಿನ ತೆಪ್ಪವನ್ನು ಸುಟ್ಟು ನಾಟಕವಾಡುತ್ತಿದೆ ಎನ್ನುವ ಕೂಗು ಸ್ಥಳೀಯರಿಂದ ಕೇಳಿ ಬರುತ್ತಿದೆ.

ಶಿಂಷಾ ನದಿ ಪಾತ್ರದ ಅಕ್ರಮ ಮರಳು ದಂಧೆಗೆ ಚನ್ನಪಟ್ಟಣ ತಾಲೂಕು ಆಡಳಿತದ್ದೇ ಕುಮ್ಮಕ್ಕಿದೆ ಎನ್ನುವ ಟೀಕೆ ವ್ಯಾಪಕವಾಗಿದ್ದು,. ಈಚೆಗೆ ನಡೆದ ಜಂಟಿ ಕಾರ್ಯಾಚರಣೆ ಸಂದರ್ಭದಲ್ಲೂ ಮದ್ದೂರು ಅಧಿಕಾರಿಗಳ ತಂಡಕ್ಕೆ ಚನ್ನಪಟ್ಟಣ ತಾಲೂಕು ಆಡಳಿತ ಸಾಥ್ ನೀಡಿರಲಿಲ್ಲ ಎನ್ನುವ ದೂರು ಸ್ವತಃ ಮದ್ದೂರು ತಾಲೂಕು ಆಡಳಿತದ ಆರೋಪವಾಗಿತ್ತು.

ಶಿಂಷಾ ನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ, ಪರಿಸರವಾದಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಡಿಎಸ್ ವಿಶ್ವನಾಥ್ ಗುರುವಾರ ಖುದ್ದು ಸ್ಥಳ ಪರಿಶೀಲನೆ ನಡೆಸಿ ಅಧೀನ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು. ಜಿಲ್ಲಾಧಿಕಾರಿ ಗರಂ ಆಗಿದ್ದರಿಂದ ಕೊಂಚ ಬೆಚ್ಚಿದ್ದ ಚನ್ನಪಟ್ಟಣದ ಅಧಿಕಾರಿಗಳು ಅಕ್ರಮ ಮರಳುಗಾರಿಕೆ ಅಡ್ಡೆಗಳ ವಿರುದ್ಧ ನಡೆಸಿದ ಕಾಟಾಚಾರದ ಕಾರ್ಯಾಚರಣೆ ನಡೆಸಿದ್ದಾರೆ ಎನ್ನುವ ಮಾತುಗಳು ವ್ಯಾಪಕವಾಗಿವೆ.

ಮೇಲಧಿಕಾರಿ ಆದೇಶ ಪಾಲಿಸಬೇಕೆನ್ನುವ ಕಾರಣಕ್ಕೆ ತಂಡದಲ್ಲಿದ್ದ ಬಹುತೇಕ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ನದಿ ಪಾತ್ರದಲ್ಲಿ ಅಡ್ಡಾಡಿದರು. ಮರಳು ಹೇರಿಕೊಂಡು ದಡ ಮುಟ್ಟಲು ಬಳಸುತ್ತಿದ್ದ ಹಾಗೂ ಮೀನು ಹಿಡಿಯಲು ಅಲ್ಲೇ ಹಾಕಿದ್ದ ಬಿದಿರು ಬಂಬಿನ ನಾಲ್ಕೈದು ತೆಪ್ಪಗಳನ್ನಷ್ಟೇ ಸುಟ್ಟು ಹಾಕಲಾಯಿತು ಎನ್ನುವುದು ಪ್ರತ್ಯಕ್ಷದರ್ಶಿಗಳ ಆರೋಪವಾಗಿದೆ.

ಕಳೆದ ನಾಲ್ಕು ದಿನಗಳಿಂದ ಸಿದ್ದರಾಮ ಹೆಗ್ಗಡೆ ಮರಳು ಗಣಿಗಾರಿಕೆಗೆ ನಿಷೇಧಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಅವರ ಆರೋಗ್ಯದ ಬಗ್ಗೆ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ. ಧರಣಿ ನಿರತರ ಹೆಗ್ಗಡೆ ಆರೋಗ್ಯ ತಪಾಸಣೆಯನ್ನು ಸರ್ಕಾರಿ ವೈದ್ಯರಿಂದ ನಡೆಸುವ ಕನಿಷ್ಠ ಕಾಳಜಿಯನ್ನೂ ಅಧಿಕಾರಿಗಳು ತೋರಿಲ್ಲ. ಅವರ ಸಮಸ್ಯೆ, ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಯೂ ಇಲ್ಲ.

ಮರಳು ಮಾಫಿಯಾದಿಂದ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನುವ ಮಾಹಿತಿಯನ್ನು ಸಿದ್ದರಾಮ ಹೆಗ್ಗಡೆ ಹೊರಗೆಡವಿದ ನಂತರವೂ ಅವರಿಗೆ ಸೂಕ್ತ ರಕ್ಷಣೆಯನ್ನೂ ಒದಗಿಸಿಲ್ಲ. ಅವರ ಪ್ರಾಣ ಹಾನಿಯಾದರೆ ಹೊಣೆ ಯಾರೆನ್ನುವುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.

ಶಿಂಷಾ ನದಿ ಪಾತ್ರದಲ್ಲಿ ಮರಳುಗಾರಿಕೆ ನಿಷೇಧಕ್ಕೆ ಆಗ್ರಹಿಸಿ ಚನ್ನಪಟ್ಟಣದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ನಿರಶನ 5ನೇ ದಿನವು ಮುಂದುವರೆದಿದೆ.

ತಾಲೂಕಿನಲ್ಲಿ ಕಳೆದ 14 ವರ್ಷದಿಂದ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಸಿಬಿಐ, ಲೋಕಾಯುಕ್ತ ಇಲ್ಲವೇ ಉನ್ನತ ಸಂಸ್ಥೆಯಿಂದ ತನಿಖೆ ನಡೆಸುವವರೆಗೆ ಹೋರಾಟ ಅಂತ್ಯಗೊಳಿಸುವುದಿಲ್ಲ ಎಂದು ಮುಷ್ಕರನಿರತ ಹೆಗ್ಗಡೆ ಪಟ್ಟು ಹಿಡಿದಿದ್ದಾರೆ.

ಆಗ್ರಹ: ಅಕ್ರಮ ಮರಳುಗಾರಿಕೆಯಿಂದ ಈ ಭಾಗದ ಜನ ಜೀವನ ಬಲಿಯಾಗಿದೆ. ಬೆರಳೆಣಿಕೆ ಮಂದಿಯನ್ನು ಶ್ರೀಮಂತರನ್ನಾಗಿಸಲು ಲಕ್ಷಾಂತರ ಜನರ ಹಿತವನ್ನು ಬಲಿ ತೆಗೆದುಕೊಳ್ಳುವುದು ನಿಲ್ಲಬೇಕು. ಮರಳು ಮಾಫಿಯಾವನ್ನು ಮಟ್ಟ ಹಾಕಲು ಜಿಲ್ಲಾಡಳಿತ ಸ್ಪಷ್ಟ ನೀತಿ ರೂಪಿಸಬೇಕು ರಾಜ್ಯ ರೈತ ಸಂಘದ ಮುಖಂಡ ಸಿ.ಪುಟ್ಟಸ್ವಾಮಿ ಆಗ್ರಹಿಸಿದ್ದಾರೆ.

ಈ ತಾಲೂಕಿನ ಪರಿಸರದ ಬಗ್ಗೆ ಪ್ರತಿಯೊಬ್ಬರು ಆಲೋಚಿಸಬೇಕಿದೆ. ಮರಳು ಗಣಿಗಾರಿಕೆಯಿಂದ ತಾಲೂಕಿಗೆ ಈಗಾಗಲೇ ಗಂಡಾಂತರ ಎದುರಾಗಿದೆ. ಮತ್ತಷ್ಟು ಅನಾಹುತ ಸಂಭವಿಸದಿರಲು ಸಿದ್ದರಾಮ ಹೆಗ್ಗಡೆ ನಡೆಸುತ್ತಿರುವ ಹೋರಾಟಕ್ಕೆ ವಿಷಾಯಾಧರಿತ ಬೆಂಬಲ ನೀಡಲಾಗಿದೆ ಇದಕ್ಕೆ ತಾಲೂಕಿನ ಪ್ರಜ್ಞಾವಂತರು ಬೆಂಬಲ ನೀಡಬೇಕಿದೆ ಎಂದರು..
ರೈತ ಸಂಘದ ವಿಭಾಗೀಯ ಅಧ್ಯಕ್ಷ ಎಂ. ರಾಮು, ಮುಖಂಡರಾದ ಗೌಡಗೆರೆ ದೊಡ್ಡಣ್ಣ, ನಾಗೇಶ್ ಮುಂತಾದವರು ಕೂಡ ಬೆಂಬಲ ಸೂಚಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+