ಶಿಕಾರಿಪುರ: ಬಿ.ವೈ. ವಿಜಯೇಂದ್ರ ಸೋಲಿಗಾಗಿ ವಾಮಾಚಾರ; ಕೇಸ್ ದಾಖಲು

ಶಿವಮೊಗ್ಗ, ಮೇ 15: ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರು ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯ ಶಿಕಾರಿಪುರ ಕ್ಷೇತ್ರದಲ್ಲಿ ಗೆಲ್ಲದಂತೆ ವಾಮಾಚಾರ ನಡೆಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಶಿಕಾರಿಪುರ ತಾಲೂಕಿನ ಬಂಡಿಬೈರನಹಳ್ಳಿ ಮಜಿರೆ ಸಿದ್ದಾಪುರ ಗ್ರಾಮದ ಸರ್ವೆ ನಂಬರ್ 36ರಲ್ಲಿರುವ ಬಿ.ಎಸ್. ಯಡಿಯೂರಪ್ಪನವರ ಅಡಿಕೆ ತೋಟದಲ್ಲಿ ಕಾಡು ಪ್ರಾಣಿ ಪುನುಗು ಬೆಕ್ಕು ಕೊಂದು ಕೇರಳ ಮೂಲದ ಮಾಂತ್ರಿಕರಿಂದ ವಾಮಾಚಾರ ನಡೆಸಲಾಗಿದೆ ಎಂದು ತೋಟ ನೋಡಿಕೊಳ್ಳುವ ಎಸ್.ಕೆ. ರಮೇಶ್ ದೂರು ದಾಖಲಿಸಿದ್ದಾರೆ.

Witchcraft For BY Vijayendra

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಶಿಕಾರಿಪುರ ಕ್ಷೇತ್ರದಲ್ಲಿ ಮತದಾನ ನಡೆದ ನಡೆದ ಮೇ 10ರಂದು ಈ ವಾಮಾಚಾರ ನಡೆದಿರುವ ಬಗ್ಗೆ ರಮೇಶ್ ಗಮನಕ್ಕೆ ಬಂದಿದೆ. ಮೇ 12ರಂದು ದೂರು ದಾಖಲಿಸಲಾಗಿದೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿವಮೊಗ್ಗ ಸಂಸದ ಹಾಗೂ ಬಿ.ವೈ. ವಿಜಯೇಂದ್ರ ಸಹೋದರ ಬಿ.ವೈ. ರಾಘವೇಂದ್ರ, "ಮಾಂತ್ರಿಕರು ಪುನುಗು ಬೆಕ್ಕನ್ನು ಹೂತು ಹಾಕಿದ್ದಾರೆ. ಕೊಳ್ಳೇಗಾಲದ ಭಾಗಗಳಲ್ಲಿ ಈ ಬೆಕ್ಕುಗಳು ಪತ್ತೆಯಾಗಿವೆ," ಎಂದಿದ್ದಾರೆ.

Witchcraft For BY Vijayendra

ಅಡಿಕೆ ತೋಟದ ಕಾಂಪೌಂಡ್ ಬಳಿ ವಾಮಾಚಾರ ನಡೆಸಿರುವ ಕಿಡಿಗೇಡಿಗಳು ಕಾಡುಪ್ರಾಣಿ ಹತ್ಯೆಗೈದು ತೋಟದಲ್ಲಿ ಹೂತು ಹಾಕಿದ್ದಾರೆ. ಸ್ಥಳದಲ್ಲಿ ಅರಿಶಿಣ, ಕುಂಕುಮ ಹೂವು ಪತ್ತೆಯಾಗಿದೆ. ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಅವರಿಗೆ ಕೇಡು ಬಯಸಲೆಂದೇ ವಾಮಾಚಾರ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

"ಈ ಪುನುಗು ಬೆಕ್ಕನ್ನು ಸುಮ್ಮನೆ ಹೂಳುವುದಿಲ್ಲ.‌ ಒಂದು ವಾರ ಅದಕ್ಕೆ ಪೂಜೆ ಮಾಡುತ್ತಾರೆ. ಆಗಲೇ ನಮಗೆ ವಾಮಾಚಾರದ ಪರಿಣಾಮ ಗೋಚರಿಸುತ್ತಿತ್ತು. ಈ ವಾಮಾಚಾರ ಮಾಡಿಸಿದವರಿಗೆ ದೇವರು ಒಳ್ಳೆಯದು ಮಾಡಲಿ. ನಾನು ಅವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ," ಎಂದು ಬಿ.ವೈ. ರಾಘವೇಂದ್ರ ತಿಳಿಸಿದರು.

ಬಳಿಕ ಪುನುಗು ಪ್ರಾಣಿಯನ್ನು ಕಾನೂನು ಪ್ರಕಾರ ಇಲಾಖೆಯವರು ತೆಗೆದುಕೊಂಡು ಹೋಗಿದ್ದಾರೆ. ಹೀಗೆ ಇಷ್ಟೆಲ್ಲಾ ಹೀನ ಕೃತ್ಯಗಳನ್ನು ಮಾಡಿದ್ದಾರೆ. ತನಿಖೆ ಬಳಿಕ ಯಾರು ಎಂಬುದು ತಿಳಿಯಲಿದೆ ಎಂದು ಹೇಳಿದರು.

ಮತಗಳ ಅಂತರ ಕಡಿಮೆ ಆಗಿರಬಹುದು, ಆದರೆ
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕುಟುಂಬ ಯಾವಾಗಲೂ ಬೆಳಕಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದೆ. ಆದರೆ, ಕ್ಷೇತ್ರದಲ್ಲಿ ಇತ್ತೀಚಿಗೆ ಕತ್ತಲಲ್ಲಿ ರಾಜಕಾರಣ ಮಾಡುವ ಕೆಲಸ ನಡೆದಿದೆ. ನಮ್ಮ ಕ್ಷೇತ್ರದ ಕಾರ್ಯಕರ್ತರನ್ನು ಭಯ ಬೀಳಿಸುವ ಕೆಲಸಕ್ಕೆ ಮುಂದಾಗಿದ್ದರು," ಎಂದು ಬಿ.ವೈ. ರಾಘವೇಂದ್ರ ಕಿಡಿಕಾರಿದರು.

"ನಮಗೆ ಮತಗಳ ಅಂತರ ಕಡಿಮೆ ಆಗಿರಬಹುದು. ಆದರೆ, ಗೆದ್ದ ಮೇಲೆ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಕರ್ತವ್ಯ. ಶಾಸಕ ಬಿ.ವೈ. ವಿಜಯೇಂದ್ರ ಕಾರ್ಯಪ್ರವೃತ್ತರಾಗಿದ್ದಾರೆ.‌ ಎಲ್ಲಿ ತಪ್ಪಾಗಿದೆಯೋ ಅಲ್ಲಿ ನಾವು ತಿದ್ದಿಕೊಂಡು ಕೆಲಸ ಮಾಡುತ್ತೇವೆ. ಕೆಳಮಟ್ಟದಲ್ಲಿ ಸ್ವಲ್ಪ ಕೆಲಸಗಳು ಕಡಿಮೆಯಾಗಿದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಒಳ್ಳೆಯ ಆಡಳಿತ ಕೊಡಲು ಪ್ರಯತ್ನಿಸುತ್ತೇವೆ," ಎಂದು ತಿಳಿಸಿದರು.

ಬಿ.ವೈ. ವಿಜಯೇಂದ್ರ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಪಕ್ಷೇತರ ಅಭ್ಯರ್ಥಿ ಎಸ್.ಪಿ. ನಾಗರಾಜಗೌಡ ವಿರುದ್ಧ 11,008 ಮತಗಳ ಅಂತರದಿಂದ ಗೆಲುವು ದಾಖಲಿಸಿ ಶಿಕಾರಿಪುರ ಕ್ಷೇತ್ರದ ನೂತನ ಶಾಸಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+