ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಅಭಿಮಾನಿಗಳ ಕಂಬನಿ... Shamanuru Shivashankarappa
ಕನ್ನಡ ನಾಡಿನಲ್ಲಿ ಸಾಲು ಸಾಲು ಆಘಾತಕಾರಿ ಸುದ್ದಿಗಳು ಸಿಗುತ್ತಿದ್ದು, 2025 ವರ್ಷ ಪೂರ್ತಿ ಈ ರೀತಿಯೇ ಸಾಲು ಸಾಲು ಗಣ್ಯರ ಸಾವಿನ ಆಘಾತಕಾರಿ ಸುದ್ದಿ ಅಭಿಮಾನಿಗಳಿಗೆ ನೋವು ನೀಡಿದೆ. ಅದರಲ್ಲೂ ಕನ್ನಡ ಸಿನಿಮಾ ರಂಗದ ಸಾಕಷ್ಟು ನಟ & ನಟಿಯರ ಅಗಲಿಕೆ ಅಭಿಮಾನಿಗಳನ್ನು ನೋವಿನಲ್ಲಿ ಮುಳುಗುವಂತೆ ಮಾಡಿದೆ. ಇದರ ಜೊತೆಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಕೂಡ ಇಹಲೋಕ ತ್ಯಜಿಸಿದ್ದರು. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಸಿಕ್ಕಿದ್ದು, ಅಭಿಮಾನಿ ಬಳಗ ಕಣ್ಣೀರು ಹಾಕುತ್ತಿದೆ. ಹೌದು ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಇನ್ನಿಲ್ಲ, ಅಭಿಮಾನಿಗಳ ಕಂಬನಿ...
ಲಿಂಗಾಯತ ನಾಯಕರಲ್ಲೇ ಮುಂಚೂಣಿ ಹೋರಾಟಗಾರ ಹಾಗೂ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯ ಮತ್ತು ವಿರಶೈವ ಸಮುದಾಯವನ್ನು ಒಗ್ಗೂಡಿಸಲು ಶ್ರಮ ವಹಿಸಿದ್ದ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಅವರ ಬೆಂಬಲಿಗರಿಗೆ ಹಾಗೂ ಅಭಿಮಾನಿಗಳಿಗೆ ನೋವು & ಆಘಾತ ತಂದಿದೆ. ಕಾಂಗ್ರೆಸ್ ಪಕ್ಷವೇ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಅಖಾಡವಾಗಿದ್ದರೂ, ಪ್ರತಿಯೊಂದು ಪಕ್ಷದಲ್ಲೂ ಸ್ನೇಹಿತರನ್ನು ಹೊಂದಿದ್ದರು. ಆದರೆ ಇಂದು ದಿಢೀರ್ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಸುದ್ದಿ ಭಾರಿ ದೊಡ್ಡ ನೋವು ಹಾಗೂ ದುಖಃವನ್ನು ಅಭಿಮಾನಿಗಳಿಗೆ ತರಿಸಿದೆ.

ಶಾಮನೂರು ಶಿವಶಂಕರಪ್ಪ ಅವರು 94ನೇ ವಯಸ್ಸಿನಲ್ಲಿ...
ಅಲ್ಲದೆ ಸಿಎಂ ಸ್ಥಾನದ ಅಭ್ಯರ್ಥಿ ಎನ್ನುವಷ್ಟು ಹಲವು ಬಾರಿ ತಮ್ಮ ಪ್ರಭಾವ ಸೃಷ್ಟಿಸಿಕೊಂಡಿದ್ದರು. ಕಾಂಗ್ರೆಸ್ ಹೈಕಮಾಂಡ್ ಕೂಡ ಶಾಮನೂರು ಶಿವಶಂಕರಪ್ಪ ಅವರ ಪಕ್ಷ ನಿಷ್ಠೆಗೆ ಗೌರವ ಕೊಟ್ಟಿತ್ತು. ಮಧ್ಯ ಕರ್ನಾಟಕ ಭಾಗದಲ್ಲಿ ಶಾಮನೂರು ಶಿವಶಂಕರಪ್ಪ ಅವರ ರಾಜಕೀಯ ಹಿಡಿತ ಬಿಗಿಯಾಗಿ ಇತ್ತು. ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಮರೆಯಲಾಗದ ಸಾಧನೆ ಮಾಡಿದ್ದ ಶಾಮನೂರು ಶಿವಶಂಕರಪ್ಪ ಅವರು ತಮ್ಮ 94ನೇ ವಯಸ್ಸಿನಲ್ಲಿ ಈಗ ಅಸುನೀಗಿದ್ದಾರೆ...
ಸಿಎಂ ಸಿದ್ದರಾಮಯ್ಯ & ಮಾಜಿ ಸಿಎಂ ಯಡಿಯೂರಪ್ಪ...
ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು & ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಸೇರಿದಂತೆ ಮಾಜಿ ಸಿಎಂ ಯಡಿಯೂರಪ್ಪ ಅವರು ಹಾಗೂ ಇಡೀ ಕರ್ನಾಟಕ ರಾಜಕೀಯದ ಹಿರಿಯ & ಕಿರಿಯ ನಾಯಕರು ಪಕ್ಷ ಮರೆತು ಸಂತಾಪ ಸೂಚಿಸಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರು, ಶ್ರೀ ಶಾಮನೂರು ಶಿವಶಂಕರಪ್ಪನವರ ನಿಧನ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ನಿಧನದ ಹಿನ್ನೆಲೆಯಲ್ಲಿ ನಾಡು ಒಬ್ಬ ಹಿರಿಯ ರಾಜಕಾರಣಿಯನ್ನು ಕಳೆದುಕೊಂಡಿದೆ & ವೀರಶೈವ ಲಿಂಗಾಯತ ಸಮಾಜದ ಹಿರಿಯ ನಾಯಕರ ಯುಗಾಂತ್ಯವಾಗಿದೆ ಎಂದು ಮಾಜಿ ಸಿಎಂ ಬಿಎಸ್‌ವೈ ಸಂತಾಪ ಸೂಚಿಸಿದ್ದಾರೆ.












Click it and Unblock the Notifications