ರಾಹುಲ್ ಜೊತೆ ಹೆಜ್ಜೆ ಹಾಕಿದ ಲೈಂಗಿಕ ಅಲ್ಪಸಂಖ್ಯಾತರು ಹೇಳಿದ್ದೇನು? ವಿಡಿಯೋ
ಚಿತ್ರದುರ್ಗ, ಅ.12: ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ 13ನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ಬೆಳಗ್ಗೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಆರಂಭವಾಗಿದೆ. ಈ ವೇಳೆ ರಾಹುಲ್ ಗಾಂಧಿ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರೊಂದಿಗೆ ಸಂವಹನ ನಡೆಸಿದ್ದಾರೆ.
The transgender community faces discrimination on a daily basis.#BharatJodoYatra is more than just a padyatra, it is a Satyagraha for equal rights and dignity for all. #BharatJodoForJobs pic.twitter.com/aTrAaodzvg
— Bharat Jodo (@bharatjodo) October 12, 2022
ರಾಜ್ಯದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಪಾದಯಾತ್ರೆಯಲ್ಲಿ ಜೊತೆಯಾಗಿದ್ದಾರೆ. ಅವರೊಂದಿಗೆ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದು, ತಮಗೆ ಉದ್ಯೋಗವನ್ನು ಸೃಷ್ಟಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ನಡೆಯುತ್ತಲೇ ತಮ್ಮ ಸಮುದಾಯದ ಸದಸ್ಯರು ಹೇಗೆ ಲೈಂಗಿಕ ವೃತ್ತಿಗೆ ತಳ್ಳಲ್ಪಡುತ್ತಾರೆ ಎಂದು ಯೂತ್ ಕಾಂಗ್ರೆಸ್‌ನ ಸ್ಟೇಟ್ ಜನರಲ್ ಸೆಕ್ರೇಟರಿ ರಿಯಾನಾ ರಾಜೋ ವಿವರಿಸಿದ್ದಾರೆ.

ಮನೆ ಬಿಟ್ಟು ಬರುವ ನಮಗೆ ಉದ್ಯೋಗವಿಲ್ಲ ಎಂದ ರಿಯಾನಾ ರಾಜೋ
ಈ ವೇಳೆ ರಾಹುಲ್ ಗಾಂಧಿ, ಯಾಕೆ ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ವಿರುದ್ಧವಾಗಿದ್ದಾರೆ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಉತ್ತರಿಸುವ ರಿಯಾನಾ ರಾಜೋ, "ಆ ಟ್ರಾನ್ಸ್‌ಜೆಂಡರ್ ಸಮುದಾಯ ಎಂದರೇನು ಎಂದು ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ಟ್ರಾನ್ಸ್‌ಜೆಂಡರ್‌ಗಳು ಸಾಕಷ್ಟು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮನೆ ಬಿಟ್ಟು ಬಂದು ಅಷ್ಟು ಚಿಕ್ಕ ವಯಸ್ಸಿಗೆ ಸಮುದಾಯಕ್ಕೆ ಸೇರುವ ನಮಗೆ ಕೆಲಸವಿಲ್ಲ. ಬದುಕಲು ಬೇರೆ ಆಯ್ಕೆಗಳಿಲ್ಲದೆ ಲೈಂಗಿಕ ಕೆಲಸಕ್ಕೆ ತಳ್ಳಲ್ಪಟ್ಟಿದ್ದಾರೆ. ಸರ್ಕಾರ ನಮಗೆ ಉದ್ಯೋಗಾವಕಾಶಗಳನ್ನು ಒದಗಿಸಿ ಉದ್ಯೋಗ ಸೃಷ್ಟಿಸಬೇಕು. ಇಲ್ಲದಿದ್ದರೆ, ಈ ನೋವು ಮುಂದಿನ ಪೀಳಿಗೆಗೆ ಮುಂದುವರಿಯುತ್ತದೆ" ಎಂದು ತಿಳಿಸಿದ್ದಾರೆ.

ನನ್ನ ನಡಿಗೆ ಶೈಲಿ, ನಡವಳಿಕೆ ಬದಲಾಯಿಸಲು ಒತ್ತಡ ಹೇರಲಾಯಿತು
ಮತ್ತೊಬ್ಬ ಮಹಿಳೆ, "ನನ್ನ ಸಿನಿಯರ್‌ಗಳು ನೀಡುತ್ತಿದ್ದ ಲೈಂಗಿಕ ಕಿರುಕುಳದ ಬಗ್ಗೆ ನಾನು ಮುಖ್ಯೋಪಾದ್ಯಯರ ಬಳಿ ದೂರು ನೀಡಿದಾಗ ನನ್ನನ್ನು 10 ನೇ ತರಗತಿಯಲ್ಲಿ ನನ್ನ ಶಾಲೆಯಿಂದ ಹೊರಹಾಕಲಾಯಿತು. ನನ್ನ ನಡಿಗೆಯ ಶೈಲಿ ಮತ್ತು ನಡವಳಿಕೆಯನ್ನು ಬದಲಾಯಿಸಲು ಒತ್ತಡ ಹಾಕಲಾಯಿತು. ಹುಡುಗನಂತೆ ಇರಲು ಒತ್ತಡ ಹಾಕಿದರು. ನಂತರ ನನ್ನನ್ನು ಶಾಲೆಯಿಂದ ತೆಗೆದುಹಾಕಲಾಯಿತು. ಜೀವನಕ್ಕಾಗಿ, ನಾನು ಭಿಕ್ಷೆ ಬೇಡಬೇಕಾಯಿತು ಅಥವಾ ಲೈಂಗಿಕ ಕೆಲಸವನ್ನು ಆರಿಸಿಕೊಳ್ಳಬೇಕಾಯಿತು" ಎಂದು ತಮ್ಮ ಅಟಳಲು ತೋಡಿಕೊಂಡಿದ್ದಾರೆ.

ಲಿಂಗ, ಲಿಂಗತ್ವದ ಹೆಸರಲ್ಲಿ ಬಿಜೆಪಿ ದೇಶವನ್ನು ಒಡೆಯುತ್ತಿದೆ!
ನಮಗೂ ಉದ್ಯೋಗ ಬೇಕು. ಜನ ನಮಗೆ ಹತ್ತು, ಇಪ್ಪತ್ತು, ನೂರು ರೂಪಾಯಿ ಕೊಡುತ್ತಾರೆ. ಆದರೆ, ನಮಗೆ ನಮ್ಮದೆ ಉದ್ಯೋಗ ಬೇಕು. ನಮ್ಮ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಕೆಲಸ ನೀಡಲಿ. ಚಾಲಕರು, ಕಂಡಕ್ಟರ್ ಕೆಲಸಗಳು ಕೊಡಲಿ. ರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ನೀತಿಗಳು ಬದಲಾಗಬೇಕು ಎಂದಿದ್ದಾರೆ.
ಲಿಂಗದ ಹೆಸರಲ್ಲಿ, ಲಿಂಗತ್ವದ ಹೆಸರಲ್ಲಿ ಬಿಜೆಪಿ ದೇಶವನ್ನು ಒಡೆದು ಆಳುತ್ತಿದೆ. ಇದರ ವಿರುದ್ಧ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ನಮ್ಮ ನಡಿಗೆಯನ್ನು ಹಾಕುತ್ತಿದ್ದೇವೆ ಎಂದು ಲೈಂಗಿಕ ಅಲ್ಪಸಂಖ್ಯಾತ ಸಮುದಾಯುದ ಸದಸ್ಯರು ಹೇಳಿದ್ದಾರೆ.

ಸಮಾಜದ ಎಲ್ಲ ವರ್ಗದವರಲ್ಲಿ ಸಮಾನತೆ ತರುವ ಅಗತ್ಯವಿದೆ; ರಾಹುಲ್
ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಸದಸ್ಯರು ಭಾರತ್‌ಜೋಡೋ ಯಾತ್ರೆಯಲ್ಲಿ ಭಾಗವಹಿಸಿ, ಮೀಸಲಾತಿ, ಉದ್ಯೋಗ, ವೈದ್ಯಕೀಯ ಅನಾರೋಗ್ಯ, ಆಶ್ರಯ, ಸಾಲ ಯೋಜನೆಗಳು, IPC 377 ಗಾಗಿ ಟ್ರಾನ್ಸ್‌ಜೆಂಡರ್ ಸಮುದಾಯದ ಬಗ್ಗೆ ವಿಶೇಷವಾಗಿ ರಾಹುಲ್ ಗಾಂಧಿ ಜೊತೆಗೆ ಚರ್ಚಿಸಿದ್ದಾರೆ.
ಭಾರತದಲ್ಲಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನಲ್ಲಿ ಜಿಎಸ್‌ಎಸ್ ಆಗಿ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದ ಮೊದಲ ಟ್ರಾನ್ಸ್‌ಜೆಂಡರ್ ರಿಯಾನಾ ರಾಜೋ ರಾಹುಲ್ ಗಾಂಧಿಗೆ ಜ್ಞಾಪಕ ಪತ್ರವನ್ನು ನೀಡಿದ್ದಾರೆ. ಈ ವೇಳೆ ಸಮಾಜದ ಎಲ್ಲ ವರ್ಗದವರಲ್ಲಿ ಸಮಾನತೆ ತರುವ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications