ನಿರ್ವಹಣಾ ಮಂಡಳಿ ರಚನೆ, ಸುಪ್ರೀಂ ಪೀಠಗಳಲ್ಲೇ ದ್ವಂದ್ವ!

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಸೆ. 27: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠ ನೀಡಿರುವ ಸೂಚನೆ ದ್ವಂದ್ವಮಯವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಇದು ಕರ್ನಾಟಕಕ್ಕೆ ವರವಾಗಬಹುದು.

ಸುಪ್ರೀಂಕೋರ್ಟಿನಿಂದ ಎರಡು ಬಾರಿ ಮಧ್ಯಂತರ ತೀರ್ಪು ಹಾಗೂ ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಒಮ್ಮೆ ಬಂದಿರುವ ತೀರ್ಪಿನಿಂದ ಕರ್ನಾಟಕಕ್ಕೆ ಮತ್ತೊಮ್ಮೆ ಹಿನ್ನಡೆಯಾಗಿದೆ. [ಸಂವಿಧಾನ ಬಿಕ್ಕಟ್ಟಿನ ಹಾದಿ ಹಿಡಿದ ಕಾವೇರಿ ವಿವಾದ]

ಈಗ ಸೆಪ್ಟೆಂಬರ್ 20 ರಂದು ನೀಡಿದ ಆದೇಶವನ್ನು ಪಾಲಿಸದೆ ಕರ್ನಾಟಕ ಸರ್ಕಾರ ವಿಳಂಬ ನೀತಿ ಅನುಸರಿಸಿದೆ. ಶಾಸಕಾಂಗ vs ನ್ಯಾಯಾಂಗ ಸಮರದಲ್ಲಿ ಏನಾಗುವುದೋ ಕಾದು ನೋಡಬೇಕಿದೆ.[ಕಾವೇರಿ ವಿವಾದ : ಚೆಂಡು ಈಗ ಕೇಂದ್ರ ಸರ್ಕಾರದ ಅಂಗಳಕ್ಕೆ]

ರಾಜ್ಯದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ. ಕುಡಿಯಲು ನೀರು ಇಲ್ಲದಿದ್ದರೂ ತಮಿಳುನಾಡಿನ ಭತ್ತದ ಬೆಳೆಗೆ ನೀರು ಒದಗಿಸಲಾಗುತ್ತಿದೆ ಎಂದು ಕರ್ನಾಟಕದ ಪರ ಫಾಲಿ ನಾರಿಮನ್ ವಾದಿಸಿದರೂ ನ್ಯಾಯಪೀಠಕ್ಕೆ ವಾದ ಸಮ್ಮತವಾಗಲಿಲ್ಲ. [ಇಂಥವರಿಂದ ಕಾವೇರಿ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೆ?]

ಆದರೆ, ಈಗ ಶಾಸಕಾಂಗದ ಬಲ ಇರುವುದರಿಂದ ಮತ್ತೊಮ್ಮೆ ಇದೇ ನಿಟ್ಟಿನಲ್ಲಿ ವಾದ ಮಂಡನೆ ಸಾಧ್ಯವಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೂ ತಡೆ ಕೋರಿ ಅರ್ಜಿ ಸಲ್ಲಿಸಬಹುದಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ(ಸಿಎಂಬಿ)

ಕಾವೇರಿ ನಿರ್ವಹಣಾ ಮಂಡಳಿ(ಸಿಎಂಬಿ)

ಕಾವೇರಿ ನಿರ್ವಹಣಾ ಮಂಡಳಿ(ಸಿಎಂಬಿ) : ಈ ಮಂಡಳಿಯಲ್ಲಿ ನಾಲ್ಕು ರಾಜ್ಯಗಳ ಸದಸ್ಯರು, ಕೃಷಿ ಮತ್ತು ನೀರಾವರಿ ತಜ್ಞರು, ಜಲ ಆಯೋಗದ ಅಧಿಕಾರಿಗಳು ಇರಲಿದ್ದಾರೆ ಎಲ್ಲರನ್ನು ಕೇಂದ್ರ ಸರ್ಕಾರ ನೇಮಿಸಲಿದೆ. ಮಂಡಳಿ ರಚನೆ ಮಾಡಲು ಅಟಾರ್ನಿ ಜನರಲ್ ಅವರ ಸಲಹೆ ಕೇಳುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನಾಲ್ಕು ವಾರಗಳಲ್ಲಿ ಮಂಡಳಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

 ವಿಸ್ತೃತ ನ್ಯಾಯ ಪೀಠ ವಿರೋಧ ವ್ಯಕ್ತಪಡಿಸಿತ್ತು

ವಿಸ್ತೃತ ನ್ಯಾಯ ಪೀಠ ವಿರೋಧ ವ್ಯಕ್ತಪಡಿಸಿತ್ತು

ಈ ಹಿಂದೆ ಇಂಥ ಸಮಿತಿ ರಚನೆಗೆ ಸುಪ್ರೀಂಕೋರ್ಟಿನ ವಿಸ್ತೃತ ನ್ಯಾಯ ಪೀಠ ವಿರೋಧ ವ್ಯಕ್ತಪಡಿಸಿತ್ತು. ಈ ಬಗ್ಗೆ ತಮಿಳುನಾಡು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಮುಂದಾಗಿತ್ತು. ಜತೆಗೆ ಕಾವೇರಿ ನದಿ ಪ್ರಾಧಿಕಾರ ನೀಡಿದ ಅದೇಶ ಪ್ರಶ್ನಿಸಿರುವ ಅರ್ಜಿಯ ಜತೆಗೆ ಮೇಲ್ಕಂಡ ಅರ್ಜಿಯನ್ನು ಸೇರಿಸಲಾಗಿದೆ. ಅಕ್ಟೋಬರ್ ತಿಂಗಳಿನಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.

ದ್ವಿಸದಸ್ಯ ಪೀಠದ ಆದೇಶ ಏಕೆ?

ದ್ವಿಸದಸ್ಯ ಪೀಠದ ಆದೇಶ ಏಕೆ?

ದ್ವಿಸದಸ್ಯ ಪೀಠದ ಆದೇಶ ಏಕೆ?: ವಿಸ್ತೃತ ಪೀಠ ನೀಡಿರುವ ನಿರ್ದೇಶನವನ್ನು ಮೀರಿ ದ್ವಿಸದಸ್ಯ ಪೀಠ ನೀಡಿರುವ ಆದೇಶವನ್ನು ಪಾಲಿಸುವುದು ಹೇಗೆ ಎಂಬ ದ್ವಂದ್ವ ಎದುರಾಗಿದೆ. ಈ ದ್ವಂದ್ವದ ಬಗ್ಗೆ ಕರ್ನಾಟಕ ಅಥವಾ ತಮಿಳುನಾಡು ವಕೀಲರು ನ್ಯಾಯಪೀಠಕ್ಕೆ ಮಂಗಳವಾರದಂದು ವಿಚಾರಣೆ ಸಂದರ್ಭದಲ್ಲಿ ಸೂಚಿಸಬೇಕಾಗಿದೆ.

ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ

ಕೇಂದ್ರ ಸರ್ಕಾರದ ಪಾತ್ರ ಮಹತ್ವದ್ದಾಗಿದೆ

ಕೇಂದ್ರ ಸರ್ಕಾರದ ಪಾತ್ರ: ಸುಪ್ರೀಂಕೋರ್ಟಿನಲ್ಲಿ ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ಈ ವಿಷಯವನ್ನು ಪ್ರಾಸ್ತಪಿಸಲು ಉಭಯ ರಾಜ್ಯಗಳು ವಿಫಲವಾದರೂ ಕೇಂದ್ರ ಸರ್ಕಾರ ಕೋರ್ಟಿಗೆ ವಿಷಯ ತಿಳಿಸಬಹುದಾಗಿದೆ. ನಿರ್ವಹಣಾ ಮಂಡಳಿ ರಚನೆ ಬಗ್ಗೆ ಇರುವ ಗೊಂದಲ ಬಗೆಹರಿಸಿಕೊಂಡ ನಂತರವಷ್ಟೇ ಮಂಡಳಿ ರಚನೆಗೆ ಮುಂದಾಗಬಹುದಾಗಿದೆ. ಇಲ್ಲದಿದ್ದರೆ ಮತ್ತೊಮ್ಮೆ ಸುಪ್ರೀಂಕೋರ್ಟಿನ ತೀರ್ಪಿನ ಬಗ್ಗೆ ಗೊಂದಲ ಉಂಟಾಗಲಿದೆ.

ನಿರ್ವಹಣಾ ಮಂಡಳಿಯಾದರೆ ಏನು ಪರಿಣಾಮ

ನಿರ್ವಹಣಾ ಮಂಡಳಿಯಾದರೆ ಏನು ಪರಿಣಾಮ

ಒಮ್ಮೆ ಈ ಮಂಡಳಿ ರಚನೆಯಾದರೆ ಕಾವೇರಿ ಮೇಲುಸ್ತುವಾರಿ ಸಮಿತಿ ಬೆಲೆ ಕಳೆದುಕೊಳ್ಳಲಿದೆ. ಕಾವೇರಿ ನೀರು ಇರುವ ಕೆಆರ್ ಎಸ್, ಹೇಮಾವತಿ, ಕಬಿನಿ, ಹಾರಂಗಿ ಅಣೆಕಟ್ಟಿನ ಮೇಲೆ ಕರ್ನಾಟಕ ಸರ್ಕಾರ ನಿಯಂತ್ರಣ ಕಳೆದುಕೊಳ್ಳಲಿದೆ. ತಮಿಳುನಾಡಿಗೆ ಯಾವಾಗ ನೀರು ಬಿಡಬೇಕು? ಎಷ್ಟು ನೀರು ಬಿಡಬೇಕು ಎಂಬುದನ್ನು ಮಂಡಳಿ ನಿರ್ಧರಿಸಲಿದೆ.

ಐತೀರ್ಪಿನ ಅಂತಿಮ ಆದೇಶ ಮುಖ್ಯ

ಐತೀರ್ಪಿನ ಅಂತಿಮ ಆದೇಶ ಮುಖ್ಯ

ಈ ಹಿಂದೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ವಿಚಾರಣೆಗೆ ಬಂದಾಗ ತಮಿಳುನಾಡು ಪ್ರತಿ ದಿನ 20,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ, ಪ್ರತಿನಿತ್ಯ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಪ್ರತಿ ದಿನ(10 ದಿನದ ಮಟ್ಟಿಗೆ) 3,000ಕ್ಯೂಸೆಕ್ಸ್ ನೀರು ಬಿಡುವಂತೆ ಆದೇಶಿಸಲಾಗಿದೆ. ನಂತರ 6,000ಕ್ಯೂಸೆಕ್ಸ್ ಗೆ ಪ್ರಮಾಣ ಏರಿಕೆಯಾಗಿದೆ. ಆದರೆ, ಕರ್ನಾಟಕದ ಪಾಲಿಗೆ ಐತೀರ್ಪಿನ ಅಂತಿಮ ಆದೇಶ (ಬಹುಶಃ ಅಕ್ಟೋಬರ್ 18ರಂದು) ಮುಖ್ಯವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The order of the Supreme Court which directed the setting up of the Cauvery Management Board (CMB) is unlikely to be implemented immediately as it is in conflict with an earlier decision of a larger Bench.
Please Wait while comments are loading...