• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೋನಿಯಾ ಗಾಂಧಿ ಭೇಟಿ ಮಾಡಿ ಕೆಎಚ್ ಮುನಿಯಪ್ಪ ಮಾಡಿದ ಮನವಿ ಏನು?

|
   ಸೋನಿಯಾ ಗಾಂಧಿ ಭೇಟಿ ಹಿಂದೆ ಕೆಎಚ್ ಮುನಿಯಪ್ಪ ಉದ್ದೇಶ ಏನು? | K H Muniyappa

   ನವದೆಹಲಿ, ಆಗಸ್ಟ್ 31: ಲೋಕಸಭಾ ಚುನಾವಣೆಯಲ್ಲಿ 'ಸೋಲಿಲ್ಲದ ಸರದಾರ' ಪಟ್ಟಕ್ಕೆ ಬ್ರೇಕ್ ಬಿದ್ದ ನಂತರ, ಸ್ವಪಕ್ಷೀಯರ ವಿರುದ್ದವೇ ಕೋಲಾರದ ಮಾಜಿ ಸಂಸದ, ಹಿರಿಯ ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ ಕಿಡಿಕಾರುತ್ತಿರುವುದು ಗೊತ್ತಿರುವ ವಿಚಾರ.

   ನಿಷ್ಟಾವಂತ ಕಾಂಗ್ರೆಸ್ಸಿಗ ಎಂದೇ ಹೆಸರಾಗಿರುವ ಕೆ ಎಚ್ ಮುನಿಯಪ್ಪ, ಶುಕ್ರವಾರ (ಆ 30) ನವದೆಹಲಿಯಲ್ಲಿ ಎಐಸಿಸಿ ಹಂಗಾಗಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿ, ಮನವಿ ಸಲ್ಲಿಸಿ ಬಂದಿದ್ದಾರೆ.

   ರಮೇಶ್ ಕುಮಾರ್‌ಗೆ ನಾಚಿಕೆ ಇಲ್ಲ: ಮಾಜಿ ಸಂಸದ ಮುನಿಯಪ್ಪ

   ಮೂಲಗಳ ಪ್ರಕಾರ, " ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಬೇರೆಯವರನ್ನು ನೇಮಿಸುವ ಇಂಗಿತವನ್ನು ಹೈಕಮಾಂಡ್ ಹೊಂದಿದ್ದರೆ, ಆ ಹುದ್ದೆಗೆ ನನ್ನನ್ನು ಪರಿಗಣಿಸಬೇಕೆಂದು" ಕೆ ಎಚ್ ಮುನಿಯಪ್ಪ, ಸೋನಿಯಾ ಗಾಂಧಿಯವರ ಬಳಿ ಮನವಿ ಮಾಡಿದ್ದಾರೆ.

   ಸೋನಿಯಾ ಗಾಂಧಿಯವರನ್ನು ಭೇಟಿಯಾದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುನಿಯಪ್ಪ, " ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ. ಹಾಗಂತ, ಅಧ್ಯಕ್ಷರನ್ನು ಬದಲಾವಣೆ ಮಾಡಿ ಎಂದು ಒತ್ತಾಯುಸುತ್ತಿಲ್ಲ" ಎನ್ನುವ ಹೇಳಿಕೆಯನ್ನು ನೀಡಿದ್ದಾರೆ.

   ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ದೊಡ್ಡ ಮಟ್ಟದ ಬಿರುಕು ಕೋಲಾರ ಕಾಂಗ್ರೆಸ್‌ನಲ್ಲಿ ಮೂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎದುರು ಸೋತಿದ್ದ ಕೆ.ಎಚ್.ಮುನಿಯಪ್ಪ, ಕೋಲಾರದ ಕಾಂಗ್ರೆಸ್ ಮುಖಂಡರು, ಶಾಸಕರ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು.

   ಸಿದ್ದರಾಮಯ್ಯನ ಅನ್ನಭಾಗ್ಯದ ಅಕ್ಕಿ ತಿಂದು ಮೋದಿಗೆ ವೋಟ್ ಹಾಕ್ತಾರೆ!

   " ಮಾಜಿ ಸ್ಪೀಕರ್ ರಮೇಶ್ ಕುಮಾರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ನಜೀರ್ ಅಹ್ಮದ್, ಎಸ್‌.ಎನ್.ನಾರಾಯಣಸ್ವಾಮಿಗೆ ನಾಚಿಕೆ ಅನ್ನೋದು ಇಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವರುಗಳೇ ಕಾರಣ. ಇವರನ್ನೆಲ್ಲಾ ಪಕ್ಷದಿಂದ ಉಚ್ಚಾಟಿಸಬೇಕು" ಎಂದು ಕೆ ಎಚ್ ಮುನಿಯಪ್ಪ ಆಗ್ರಹಿಸಿದ್ದರು.

   English summary
   Senior Congress Leader KH Muniyappa Met AICC Interim President Sonia Gandhi, Requested to Consider His Name For KPCC President Post.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X