ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ದಂತಭಾಗ್ಯ' ಯೋಜನೆಗೆ ನವೆಂಬರ್‌ನಲ್ಲಿ ಚಾಲನೆ

|
Google Oneindia Kannada News

ಬೆಂಗಳೂರು, ಅ. 9 : 60 ವರ್ಷ ಮೇಲ್ಪಟ್ಟ ಬಡವರಿಗೆ ಉಚಿತವಾಗಿ ಹಲ್ಲಿನ ಸೆಟ್ ವಿತರಣೆ ಮಾಡುವ ಕರ್ನಾಟಕ ಸರ್ಕಾರದ ದಂತಭಾಗ್ಯ ಯೋಜನೆಗೆ ನವೆಂಬರ್ ತಿಂಗಳಿನಲ್ಲಿ ಚಾಲನೆ ದೊರೆಯಲಿದೆ. ಈ ಯೋಜನೆಯನ್ನು ಜಾರಿಗೊಳಿಸಲು 45 ದಂತ ವೈದ್ಯಕೀಯ ಕಾಲೇಜುಗಳೊಂದಿಗೆ ಸರ್ಕಾರ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಯು.ಟಿ.ಖಾದರ್, ಮುಂದಿನ ತಿಂಗಳಿನಿಂದ ದಂತಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಗುವುದು ಅರವತ್ತು ವರ್ಷ ಮೇಲ್ಪಟ್ಟ ಬಡವರಿಗೆ ಉಚಿತವಾಗಿ ಹಲ್ಲಿನ ಸೆಟ್ ವಿತರಣೆ ಮಾಡುವ ಯೋಜನೆ ಇದಾಗಿದ್ದು, ಆರೋಗ್ಯ ಇಲಾಖೆಯ ಯೋಜನೆಯ ಜಾರಿಗಾಗಿ 45 ದಂತವೈದ್ಯಕೀಯ ಕಾಲೇಜುಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು. [ಏನಿದು ದಂತಭಾಗ್ಯ ಯೋಜನೆ]

UT Khader

ಅಂಗನವಾಡಿಗಳ ಕಿರಿಯ ಮಹಿಳಾ ಕಾರ್ಯಕರ್ತೆಯರು ಫಲಾನುಭವಿಗಳನ್ನು ಗುರುತಿಸಲಿದ್ದು, ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ದಂತಭಾಗ್ಯ ಯೋಜನೆಯ ಗುರುತಿನ ಚೀಟಿ ವಿತರರಣೆ ಮಾಡಲಾಗುತ್ತದೆ ಎಂದು ಯು.ಟಿ.ಖಾದರ್ ಹೇಳಿದರು. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದಲ್ಲಿ ವೃದ್ಧರಿಗೆ ಹಲ್ಲಿನ ಸೆಟ್ ಕೊಳ್ಳಲು ಆಗುವುದಿಲ್ಲ, ಅವರಿಗೆ ಈ ಯೋಜನೆ ಸಹಕಾರಿಯಾಗಲಿದೆ ಎಂದು ಖಾದರ್ ತಿಳಿಸಿದರು. [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳಾವವು?]

ಕರ್ನಾಕಟದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವು ತಿಂಗಳುಗಳಲ್ಲೇ ದಂತಭಾಗ್ಯ ಯೋಜನೆಯನ್ನು ಜಾರಿಗೊಳಿಸುವ ಕುರಿತು ಯು.ಟಿ.ಖಾದರ್ ಮಾಹಿತಿ ನೀಡಿದ್ದರು. 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲ್ಲಿನ ಸೆಟ್‌ಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದರು.

English summary
Senior citizens belonging to Below Poverty Line (BPL) families in Karnataka have much reason to cheer, government deciding to distribute free dentures to them from this November. The government is ready to provide dentures to senior citizens said Health and Family Welfare Minister U.T.Khader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X