Security Alert: ನೀವು ಸೋಷಿಯಲ್ ಮೀಡಿಯಾ ಬಳಸುವಾಗ ಈ ಐದು ಟಿಪ್ಸ್ ಪಾಲಿಸಿ
ನೀವು ಸೋಷಿಯಲ್ ಮೀಡಿಯಾ ಬಳಸುತ್ತಿದ್ದೀರಾ ಹಾಗಿದ್ದರೆ, ಈ ಐದು ಟಿಪ್ಸ್ ತಪ್ಪದೇ ಫಾಲೋ ಮಾಡಿ. ಸೋಷಿಯಲ್ ಮೀಡಿಯಾದಲ್ಲಿ ನೀವು ಹಾಕುವ ಮಾಹಿತಿಗಳನ್ನು ಬಳಸಿಕೊಂಡೇ ಸೈಬರ್ ಕ್ರೈಮ್ ಎಸಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಾರೆ. ಇದರಿಂದಾಗಿ ಸೈಬರ್ ಅಪರಾಧ ಮಾಡುವವರಿಗೆ ಬೇಕಾದ ಎಲ್ಲಾ ರೀತಿಯ ಮಾಹಿತಿಗಳು ಸಿಗಲಿವೆ.
ಸೋಷಿಯಲ್ ಮೀಡಿಯಾದಲ್ಲಿ ನೀವು ಎಷ್ಟು ಅಲರ್ಟ್ ಇದ್ದರೂ ಸಾಲದು. ಸೋಷಿಯಲ್ ಮೀಡಿಯಾದಲ್ಲಿ ಯಾವ ರೀತಿ ಅಲರ್ಟ್ ಇರಬೇಕು ಹಾಗೂ ಯಾವ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಇಲಾಖೆ ಅಲರ್ಟ್ ಕೊಟ್ಟಿದೆ. ಏನಿದು ಅಲರ್ಟ್ ಆ ಐದು ಟಿಪ್ಸ್‌ಗಳೇನು ಎನ್ನುವ ಮಾಹಿತಿ ಇಲ್ಲಿದೆ.

ಸಂಪೂರ್ಣ ಮಾಹಿತಿ ಹಂಚಿಕೊಳ್ಳಬೇಡಿ
ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಸಂಪೂರ್ಣ ಮಾಹಿತಿಯನ್ನು ಶೇರ್ ಮಾಡಬೇಡಿ. ಈ ರೀತಿ ಶೇರ್ ಮಾಡುವುದರಿಂದ ಸೈಬರ್ ಕಳ್ಳರಿಗೆ ಸುಲಭವಾಗಿ ನಿಮ್ಮ ಎಲ್ಲ ವಿವರ ಸಿಗಲಿದ್ದು, ವಂಚನೆ ಎಸಗಲು ಸುಲಭ ಮಾರ್ಗ ನೀವೇ ಹುಡುಕಿಕೊಟ್ಟಂತೆ ಆಗುತ್ತದೆ.
ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಗಳಾದ ಪೂರ್ಣ ಹೆಸರು, ಮನೆಯ ವಿಳಾಸ ಹಾಕಬೇಡಿ. ನಿಮ್ಮ ಮನೆಯ ವಿಳಾಸ ಮತ್ತು ನಿಮ್ಮ ಮಕ್ಕಳ ಶಾಲೆಯ ಹೆಸರನ್ನು ಇಂಟರ್ ನೆಟ್‌ನಲ್ಲಿ ಹಂಚಿಕೊಳ್ಳಬೇಡಿ.

ಕಂಪ್ಯೂಟರ್‌ನಿಂದ ಲಾಗ್ ಆಫ್ ಮಾಡಿ
ನೀವು ಕಂಪ್ಯೂಟರ್‌ನಿಂದ ಸೋಷಿಯಲ್ ಮೀಡಿಯಾ ಬಳಸುತ್ತಿದ್ದಾರೆ, ಯಾವಾಗಲೂ ನಿಮ್ಮ ಕಂಪ್ಯೂಟರ್ ನಿಂದ ನಿಮ್ಮ ಸೋಷಿಯಲ್ ಖಾತೆಗಳನ್ನು ಲಾಗ್ ಆಫ್ ಮಾಡಿ. ಇದರಿಂದ ಬೇರೆ ಯಾರಾದರೂ ನಿಮ್ಮ ಸೋಷಿಯಲ್ ಮೀಡಿಯಾ ಬಳಸುವುದನ್ನು ತಪ್ಪಿಸಬಹುದು. ಕಚೇರಿ ಅಥವಾ ಹೊಸ ಜಾಗದಲ್ಲಿ ಸಾಧ್ಯವಾದಷ್ಟೂ ಕಂಪ್ಯೂಟರ್‌ಗಳಲ್ಲಿ ಲಾಗಿನ್ ಆಗುವುದನ್ನು ತಪ್ಪಿಸಿ.
ಪಾಸ್‌ವರ್ಡ್ ಶೇರ್ ಮಾಡಬೇಡಿ
ನಿಮ್ಮ ಪಾಸ್‌ವರ್ಡ್ ಎನ್ನುವುದು ನೀವು ದಿನ ನಿತ್ಯವೂ ಬಳಸುವ ಟೂತ್ ಬ್ರಷ್ ನಂತೆ ಇದನ್ನು ಯಾವುದೇ ಕಾರಣಕ್ಕೂ ಯಾರೊಂದಿಗೂ ಹಂಚಿಕೊಳ್ಳಬೇಡಿ. ಸರಳ ಪಾಸ್‌ವರ್ಡ್ ಬದಲಿಗೆ ಅಂದಾಜಿಸಲು ಸಾಧ್ಯವಿಲ್ಲದ ಪಾಸ್‌ವರ್ಡ್‌ಗಳನ್ನು ಸೆಟ್ ಮಾಡಿ ಇರಿಸಿ.
ಅಪರಿಚತರೊಂದಿಗೆ ಮಾಹಿತಿ ಹಂಚಿಕೊಳ್ಳಬೇಡಿ
ಅಪರಿಚಿತರೊಂದಿಗೆ ಯಾವುದೇ ಕಾರಣಕ್ಕೂ ನಿಮ್ಮ ಸಂಪೂರ್ಣ ಅಥವಾ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ. ನೀವು ಯಾರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದೀರಿ ಎನ್ನುವುದು ನಿಮಗೆ ತಿಳಿಯದೆ ಇರುವುದರಿಂದ ಇದು ಅಪಾಯಕಾರಿಯೇ ಸರಿ.
ಕೆಲವೊಮ್ಮೆ ನಿಮಗೆ ಮೆಸೇಜ್ ಕಳುಹಿಸುತ್ತಿರುವವರು ಫೇಕ್ ಅಕೌಂಟ್‌ನಿಂದಲೂ ಮೆಸೇಜ್ ಮಾಡುತ್ತಿರುವ ಸಾಧ್ಯತೆ ಇದೆ. ಹೀಗಾಗಿ, ಯಾರೊಂದಿಗಾದರೂ ಮಾಹಿತಿ ಹಂಚಿಕೊಳ್ಳುವಾಗ ಹತ್ತು ಬಾರಿ ಯೋಚನೆ ಮಾಡಿ. ಅವಶ್ಯವಿದೆ ಎನಿಸುವಷ್ಟು ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಿ.
ವಯಸ್ಸಿನ ಮಿತಿ ಅರಿವಿರಲಿ
ನಿಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿಮ್ಮ ಮನೆಯಲ್ಲಿ ಮಕ್ಕಳು ಸಹ ಬಳಸುತ್ತಿದ್ದಾರಾ, ಅವರು ನಿಮ್ಮ ಪೋನ್ ನಲ್ಲಿ ಯಾವ ಖಾತೆ ಬಳಸುತ್ತಿದ್ದಾರೆ ಎನ್ನುವ ಬಗ್ಗೆ ಎಚ್ಚರಿಕೆ ವಹಿಸಿ. ಸೋಷಿಯಲ್ ಮೀಡಿಯಾದಲ್ಲಿ ವಯಸ್ಸಿನ ಮಿತಿಯನ್ನು ಆಯ್ಕೆ ಮಾಡಿಕೊಳ್ಳಿ. ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳು ನಿಮ್ಮ ಖಾತೆಯಿಂದ ಯಾವುದಾದರೂ ಮೆಸೇಜ್ ಕಳುಹಿಸಿದರೂ ಅದರಿಂದಲೂ ನಿಮಗೆ ಸಮಸ್ಯೆ ಆಗುವ ಸಾಧ್ಯತೆ ಇದೆ.












Click it and Unblock the Notifications