ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ಬಾಂಬ್ ಸ್ಟೋಟಕ್ಕೆ ಎಸ್‌ಡಿಪಿಐ ಲಿಂಕ್: ಪ್ರಮೋದ್ ಮುತಾಲಿಕ್

|
Google Oneindia Kannada News

ರಾಮನಗರ, ನವೆಂಬರ್ 23: ಮಂಗಳೂರು ಬಾಂಬ್ ಸ್ಟೋಟಕ್ಕೆ ತಮಿಳುನಾಡಿನ ಎಸ್‌ಡಿಪಿಐ ಲಿಂಕ್ ಸಿಗುತ್ತಿದೆ. ರಾಜ್ಯ ಸರ್ಕಾರ ಜಾಗೃತವಾಗಬೇಕು. ಘಟನೆ ಆದ ಬಳಿಕ ತನಿಖೆ ಮಾಡಿ ಪ್ರಯೋಜನ ಇಲ್ಲ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಮನಗರದಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿ ಇಸ್ಲಾಮಿಕ್ ಗೂಂಡಾ ಶಕ್ತಿ ಬೆಳೆಯುತ್ತಿದೆ. ಇದು ಪೊಲೀಸರಿಗೂ ಗೊತ್ತು. ಆದರೆ, ಈ ಬಗ್ಗೆ ನಿರ್ಲಕ್ಷ್ಯ ಮಾಡ್ತಾ ಇದ್ದಾರೆ. ಘಟನೆ ಆದಾಗ ಮಾತ್ರ ಕಾರ್ಯಾಚರಣೆ ಮಾಡ್ತಾರೆ. ಶಂಕಿತ ಉಗ್ರ ಶಾರೀಕ್ ಈ ಹಿಂದೆ ಬಂಧನವಾಗಿದ್ದ ವ್ಯಕ್ತಿ, ತನ ಬಿಡುಗಡೆ ಮಾಡದಿದ್ದರೆ ಈ ಬಾಂಬ್ ಸ್ಪೋಟ ಆಗ್ತಿರಲಿಲ್ಲ.

ಸರ್ಕಾರ ಕೇವಲ ಚುನಾವಣೆ, ಅಧಿಕಾರ ಅಂತ ಕೂರಬಾರದು, ವಿರೋಧ ಪಕ್ಷ ಕೂಡಾ ಟೀಕೆ ಮಾಡಿ ಕೂರಬಾರದು, ಮತಕೊಸ್ಕರ ಭಯೋತ್ಪಾದಕತೆಗೆ ಸಪೋರ್ಟ್ ಮಾಡ್ತಿದ್ದಾರೆ. ವಿರೋಧ ಪಕ್ಷದವರು ನಿಮ್ಮ ನೀಚ ಬುದ್ದಿ ಬಿಡಿ, ಇಂತಹ ಘಟನೆಗಳನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳದ ಗಡಿ, ತಮಿಳುನಾಡು ಗಡಿ ಭಾಗದಲ್ಲಿ ಎಚ್ಚರಿಕೆ ವಹಿಸಿ. ಸೂಕ್ಷ್ಮ ಪ್ರದೇಶಗಳಲ್ಲಿ ಎನ್ಐಎ ಬ್ರಾಂಚ್ ಸ್ಥಾಪನೆ ಮಾಡಬೇಕು.ದೇಶ ರಾಜ್ಯದ ರಕ್ಷಣೆ ಬಗ್ಗೆ ಚಿಂತನೆ ಮಾಡಿ ಎಂದು ಹೇಳಿದರು.

SDPI of Tamil Nadu getting link to Mangalore bomb blast case says Pramod Muthalik

ಈ ಬಾರಿ 25 ಹಿಂದೂವಾದಿಗಳು ಕಣಕ್ಕೆ ಇಳಿಯುತ್ತಿದ್ದೇವೆ‌

ಮುಂದಿನ ವಿಧಾನಸಭೆ ಚುನಾವಣೆ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೇನೆ ಎಂದು ಪ್ರಮೋದ್ ಮುತಾಲಿಕ್ ಪುನರುಚ್ಚಾರ ಮಾಡಿದರು. ಹಿಂದೂಗಳ ಹಿತದೃಷ್ಟಿಯಿಂದ ಸ್ಪರ್ಧೆ ಮಾಡ್ತಾ ಇದ್ದೇನೆ. ಬಿಜೆಪಿಯಿಂದ ಒಬ್ಬೇ ಒಬ್ಬ ಹಿಂದೂ ಕಾರ್ಯಕರ್ತರ ರೌಡಿ ಶೀಟರ್ ರದ್ದು ಮಾಡಲಾಗಿಲ್ಲ. ಹಿಂದೆ ಕಾಂಗ್ರೆಸ್‌ನವರು ರೌಡಿ ಶೀಟರ್‌ಗೆ ಹೆಸರು ಸೇರಿಸಿದ್ರು. ಗೋ ರಕ್ಷಣೆ ಮಾಡಿದವ್ರನ್ನೂ ರೌಡಿ ಶೀಟರ್ ಅಂದ್ರು. ಹಿಂದುತ್ವಕ್ಕೆ ನ್ಯಾಯ ಕೊಡಿಸಲು ನಾನು ಸ್ವತಂತ್ರವಾಗಿ ನಿಲ್ಲುವುದು ಖಚಿತ. 5 ಕ್ಷೇತ್ರದಲ್ಲಿ ಸರ್ವೆ ನಡೆತಿದೆ, ಡಿಸೆಂಬರ್ ಎರಡನೆ ವಾರದಲ್ಲಿ ಎಲ್ಲಿ ಸ್ಪರ್ಧೆ ಮಾಡಬೇಕು ಎಂದು ಸ್ಪಷ್ಟಪಡಿಸುತ್ತೇನೆ. ಇನ್ನೂ ಈ ಬಾರಿ 25 ಹಿಂದೂವಾದಿಗಳು ಕಣಕ್ಕೆ ಇಳಿಯುತ್ತಿದ್ದೇವೆ‌. 25 ಸೀಟ್ ಗಳನ್ನು ಹಿಂದುತ್ವವಾದಿಗಳಿಗೆ ಕೊಡಬೇಕು ಅಂತ ಬಿಜೆಪಿಗೆ ಕೇಳಿಕೊಂಡಿದ್ದೇವೆ. ಆದರೆ, ಅವ್ರು ಕೊಟ್ಟಿಲ್ಲ. ಸ್ವತಂತ್ರವಾಗಿ ಹಿಂದೂ ವಾದಿಗಳು ಚುನಾವಣೆ ಕಣಕ್ಕೆ ಇಳಿಯುತ್ತೇವೆ ಎಂದರು.

ಪ್ರೀತಿಗೆ ಮೋಸ ಹೋಗಿ ಫೀಸ್ ಫೀಸ್ ಆಗಬೇಡಿ

ದೆಹಲಿಯ ಶ್ರದ್ಧಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಹಿಂದೂ ಹುಡುಗಿಯರು ಎಚ್ಚರಿಕೆ ವಹಿಸಿ. ಆತುರದಲ್ಲಿ ಪ್ರೀತಿಗೆ ಮೋಸ ಹೋಗಿ ಫೀಸ್ ಫೀಸ್ ಆಗಬೇಡಿ. ದೆಹಲಿಯ ಘಟನೆಯಿಂದ ಎಲ್ಲರೂ ಎಚ್ಚೆತ್ತುಕೊಳ್ಳಿ. ಪ್ರೀತಿ ಮಾಡುವ ಮುನ್ನ ಯೋಚಿಸಿ. ಪೋಷಕರು ಕೂಡಾ ಈ ಬಗ್ಗೆ ಜಾಗೃತಿ ವಹಿಸಿ ಎಂದರು.

ಕನಕಪುರ ತಹಶಿಲ್ದಾರ್ ರಾಜಕಾರಣಿಗಳ ಚೇಲ ಆಗಬೇಡಿ

ಇನ್ನೂ ರಾಮನಗರ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮ ಮತಾಂತರ ನಡೆಯುತ್ತಿದೆ‌. ಕಾಂಗ್ರೆಸ್ ಕುಮ್ಮಕ್ಕಿನಿಂದ ಕನಕಪುರದಲ್ಲಿ ಮತಾಂತರ ನಡೆಯುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೆಚ್ಚಿಸಲು ಮತಾಂತರ ಮಾಡಲಾಗುತ್ತಿದೆ. ಇಲ್ಲಿ‌ ಕಾನೂನು ಬಾಹಿರ ಚರ್ಚ್ ಗಳು ತಲೆ ಎತ್ತುತ್ತಿವೆ. ಅವರಿಗೆ ಕುಮ್ಮಕ್ಕು ನೀಡಲು ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ಮಾಡಲು ಹೊರಟಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ಈ ಬಗ್ಗೆ ಎಸ್ಪಿ, ಡಿಸಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನ ಇಲ್ಲ. ರೇಷನ್ ಕಾರ್ಡ್ ಹಿಂದೆ ಯೇಸು ಫೋಟೊ ಪ್ರಿಂಟ್ ಮಾಡಿದ್ದಾರೆ. ಕನಕಪುರ ತಹಶಿಲ್ದಾರ್ ರಾಜಕಾರಣಿಗಳ ಚೇಲ ಆಗಬೇಡಿ, ಕಾನೂನಿನ ಪ್ರಕಾರ ಕೆಲಸ ಮಾಡಿ ಎಂದರು.

ಕ್ರೈಸ್ತ ಧರ್ಮದ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು. ಮತಾಂತರ ಮಾಡುವವರನ್ನ ಹದ್ದುಬಸ್ತಿನಲ್ಲಿಡಿ. ಇಲ್ಲದಿದ್ದರೇ ನಾವೇ ಆ ಕೆಲಸ ಮಾಡಬೇಕಾಗುತ್ತೆ. ಕಾನೂನು ಬಾಹಿರ ಚರ್ಚೆ ತೆರವು‌ಮಾಡಿ. ಬಿಜೆಪಿ ಕೇವಲ ಕಾನೂನು ರಚನೆ ಮಾಡಿದ್ರೆ ಸಾಲದು. ಅದನ್ನ ಪಾಲನೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.

English summary
Mangakuru Blasr Case; SDPI of Tamil Nadu getting link, the state government should be aware. It is useless to investigate after the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X