Heavy Rain: 24 ಗಂಟೆ ಭಾರಿ ಮಳೆ, ಶಾಲಾ & ಕಾಲೇಜಿಗೆ ರಜೆ ಘೋಷಣೆ!
ಮಳೆ ಅಬ್ಬರ ಜೋರಾಗಿದ್ದು, ಎಲ್ಲೆಲ್ಲೂ ಮಳೆರಾಯ ಆರ್ಭಟಿಸುತ್ತಿದ್ದಾನೆ. ಮುಂಗಾರು ಮಳೆ ಹೀಗೆ ಆರ್ಭಟಿಸುತ್ತಿರುವ ಕಾರಣಕ್ಕೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿದೆ. ಹೀಗಾಗಿ ಶಾಲಾ & ಕಾಲೇಜುಗಳಿಗೆ ಇದೀಗ ರಜೆಯನ್ನು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ನಾಳೆ ಶಾಲಾ & ಕಾಲೇಜು ರಜೆ ಇರಲಿದೆ? ಮುಂದೆ ಓದಿ.
ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ಹಾಗೇ ರಾಜಧಾನಿ ಬೆಂಗಳೂರು ಸೇರಿದಂತೆ ವಿಜಯಪುರ & ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ಬಾಗಲಕೋಟೆ & ಬೆಳಗಾವಿ & ಬಳ್ಳಾರಿ, ಕೊಪ್ಪಳ, ಧಾರವಾಡ, ಗದಗ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸಿದ್ದು, ಇದೇ ಸಮಯದಲ್ಲಿ ಕರ್ನಾಟಕದ ಡ್ಯಾಂಗಳ ನೀರಿನ ಪ್ರಮಾಣ ಭಾರಿ ಏರಿಕೆ ಕಾಣ್ತಿದೆ. ಅದರಲ್ಲೂ ಕಾವೇರಿ & ಕೃಷ್ಣಾ ನದಿ ಕೊಳ್ಳದಲ್ಲಿ ಇದೀಗ ಹೊಸ ಮಂದಹಾಸ ಮೂಡಿದೆ. ಹಿಗಿದ್ದಾಗ ಭಾರಿ ಮಳೆ ಬೀಳುತ್ತಿರುವ ಜಿಲ್ಲೆಗಳಲ್ಲಿ ಶಾಲಾ & ಕಾಲೇಜುಗಳಿಗೆ ಈಗ ರಜೆಯನ್ನ ನೀಡಲಾಗಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿ.

ಶಾಲಾ & ಕಾಲೇಜುಗಳು ಬಂದ್!
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ & ಉತ್ತರ ಕನ್ನಡದಲ್ಲಿ ಇದೀಗ ಭಾರಿ ಮಳೆ ಬೀಳುತ್ತಿದೆ. ಹೀಗಾಗಿ ಉಡುಪಿ ಜಿಲ್ಲೆಯ ಬೈಂದೂರು, ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜುಲೈ 5ರ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ಹಾಗೇ ಅಂಗನವಾಡಿ ಕೇಂದ್ರಗಳಿಗು ಸೇರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಘೋಷಣೆ ಮಾಡಿ ಕುಂದಾಪುರ ಸಹಾಯಕ ಆಯುಕ್ತರಾದ ರಶ್ಮೀ ಆದೇಶವನ್ನ ಹೊರಡಿಸಿದ್ದಾರೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕರ್ನಾಟಕದ ಡ್ಯಾಂಗಳಿಗೆ ಭಾರಿ ನೀರು!
ಒಟ್ನಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಕರ್ನಾಟಕದಲ್ಲಿ ಜಲಾಶಯಗಳು ತುಂಬಿ ತುಳುಕುತ್ತಿವೆ. ಕಳೆದ 2 ವಾರದಿಂದ ಅಲರ್ಟ್ ಆಗಿರುವ ಮುಂಗಾರು ಮಳೆಯ ಮೋಡಗಳು, ಭಾರಿ ಮಳೆ ಸುರಿಸುತ್ತಿವೆ. ಹೀಗಾಗಿ ಡ್ಯಾಂಗಳಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಕೆಆರ್‌ಎಸ್, ಕಬಿನಿ, ಆಲಮಟ್ಟಿ, ತುಂಗಭದ್ರಾ ಡ್ಯಾಂಗಳ ನೀರಿನ ಪ್ರಮಾಣ ಭಾರಿ ಏರಿಕೆ ಕಾಣುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿದೆ. ಆದರೆ ಭಾರಿ ಮಳೆ ಕಾರಣಕ್ಕೆ ಇದೀಗ ಶಾಲಾ & ಕಾಲೇಜು ಬಂದ್ ಮಾಡುವ ಪರಿಸ್ಥಿತಿ ಬಂದಿದೆ.












Click it and Unblock the Notifications