Get Updates
Get notified of breaking news, exclusive insights, and must-see stories!

ಶಿಕ್ಷಕರ ಸಾಮಾನ್ಯ ವರ್ಗಾವಣೆ: ಮಹತ್ವದ ಅಪ್‌ಡೇಟ್‌

ಬೆಂಗಳೂರು, ಮೇ 21: ಕರ್ನಾಟಕ ಸರ್ಕಾರ 2025ನೇ ಸಾಲಿನಲ್ಲಿ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಆರಂಭಿಸಿದೆ. ಮೇ 15 ರಿಂದ ಜೂನ್‌ 14ರ ತನಕ ಸರ್ಕಾರಿ ನೌಕರರ ವರ್ಗಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. ಸಾರ್ವತ್ರಿಕ ವರ್ಗಾವಣೆಯ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

ಈಗ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ಅಂತಿಮ ವೇಡ್ ಅಂಕಗಳನ್ನು ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ ಜ್ಞಾಪನಾ ಪತ್ರವನ್ನು ಹೊರಡಿಸಿದೆ.

School Teachers Transfer 2024 25 Update

ಕಛೇರಿಯ ಟಿಪ್ಪಣಿ ಮಾನ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ ಎಂದು ಹೇಳಿದ್ದು, ಜ್ಞಾಪನಾ ಪತ್ರವನ್ನು ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ನಿರ್ದೇಶಕರು (ಪ್ರೌಢ ಶಿಕ್ಷಣ) ಹೊರಡಿಸಿದ್ದಾರೆ. ರಾಜ್ಯದ ಎಲ್ಲಾ ಉಪ ನಿರ್ದೇಶಕರು (ಆಡಳಿತ/ ಅಭಿವೃದ್ಧಿ) ಶಾಲಾ ಶಿಕ್ಷಣ ಇಲಾಖೆ, ಇವರಿಗೆ ಅಗತ್ಯ ಕ್ರಮಕ್ಕಾಗಿ ಕಳಿಸಲಾಗಿದೆ.

ಈ ಜ್ಞಾಪನಾ ಪತ್ರ 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಶಿಕ್ಷಕರ ಅಂತಿಮ ವೇಡ್ ಅಂಕಗಳನ್ನು ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020. ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, ಕಛೇರಿಯ ವಿವಿಧ ಟಿಪ್ಪಣಿಗಳನ್ನು ಉಲ್ಲೇಖಿಸಲಾಗಿದೆ.

ಜ್ಞಾಪನಾ ಪತ್ರದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಮತ್ತು ವಿವಿಧ ಉಲ್ಲೇಖಗಳ ಅನ್ವಯ, 2024-25ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ, ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಯ್ಟೇಡ್ ಅಂಕಗಳನ್ನು, ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್‌ನಲ್ಲಿ ಹಾಗೂ ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಿ, ಸೇವಾ ಮಾಹಿತಿಯ ಇಂದೀಕರಣಕ್ಕಾಗಿ ದಿನಾಂಕ 20-03-2025ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು.

ಮುಂದುವರೆದು, ಇಇಡಿಎಸ್‌ನಲ್ಲಿ ಎಲ್ಲಾ ನೌಕರರ ಮಾಹಿತಿಯನ್ನು ಇಂದೀಕರಣ ಮಾಡಲು ದಿನಾಂಕ 28-03-2025 ರವರೆಗೆ ಮತ್ತೊಮ್ಮೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಅಲ್ಲದೇ ಇಇಡಿಎಸ್‌ನಲ್ಲಿ ಇಂದೀಕರಣಕ್ಕಾಗಿ ಈ ಹಿಂದೆ ಹಲವಾರು ಬಾರಿ ಕಾಲಾವಕಾಶವನ್ನು ಕಲ್ಪಿಸಲಾಗಿರುತ್ತದೆ.

ವರ್ಗಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಗಳ ನಿರ್ವಹಿಸಬೇಕಾಗಿರುವುದರಿಂದ ಮತ್ತು ಈಗಾಗಲೇ ಇಇಡಿಎಸ್‌ನಲ್ಲಿ ಮಾಹಿತಿ ಇಂದೀಕರಣಕ್ಕಾಗಿ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಇನ್ನೂ ಮುಂದೆ ಇಇಡಿಎಸ್‌ನಲ್ಲಿ ಇಂದೀಕರಣ/ ತಿದ್ದುಪಡಿ/ ಬದಲಾವಣೆಯನ್ನು ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ.

ಅಂತಿಮವಾಗಿ ಪ್ರಕಟಿಸಲ್ಪಟ್ಟ ಸೇವಾ ಅಂಕಗಳನ್ನೇ ಪ್ರಸಕ್ತ ಸಾಲಿನಲ್ಲಿ ನಡೆಯುವ ವರ್ಗಾವಣೆಯ ಎಲ್ಲಾ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದೆಂದು ತಿಳಿಸಲಾಗಿದೆ ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ ಅಂತಿಮ ಸೇವಾ ಅಂಕಗಳನ್ನು ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್, ಕ್ಷೇತ್ರಶಿಕ್ಷಣಾಧಿಕಾರಿಗಳ/ ಉಪನಿರ್ದೇಶಕರ ಲಾಗಿನ್ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸುತ್ತಾ, ಸದರಿ ಮಾಹಿತಿಯನ್ನು ಎಲ್ಲಾ ಶಿಕ್ಷಕರಿಗೆ ತಲುಪಿಸಲು ಕ್ರಮವಹಿಸುವಂತೆ ಇಲಾಖೆಯ ಎಲ್ಲಾ ಕಛೇರಿಯ ಮುಖ್ಯಸ್ಥರಿಗೆ ಕೋರಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+