ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ... School Holiday

ಶಾಲಾ & ಕಾಲೇಜುಗಳಿಗೆ ಸಾಲು ಸಾಲು ರಜೆಗಳು ಸಿಗುವಂತೆ ಆಗುತ್ತಿದ್ದು, ಒಂದು ಕಡೆ ಇದು ವಿದ್ಯಾರ್ಥಿ ಮುಖದಲ್ಲಿ ಖುಷಿ ಕೊಡುತ್ತಿದ್ದರೆ ಇನ್ನೊಂದು ಕಡೆ ಶಿಕ್ಷಕರು & ಪೋಷಕರು ಮಾತ್ರ ಸಾಲು ಸಾಲು ರಜೆಯ ಹಿನ್ನೆಲೆ ಚಿಂತೆ ಮಾಡುವಂತೆ ಆಗಿದೆ. ಹಲವು ಕಾರಣಗಳಿಗೆ ಕರ್ನಾಟಕದ ಹಲವು ಜಿಲ್ಲೆಗಳ ಶಾಲೆಗಳಿಗೆ & ಕಾಲೇಜುಗಳಿಗೆ ಈ ವರ್ಷದ ಜೂನ್ & ಜುಲೈ ತಿಂಗಳಲ್ಲೇ ರಜೆ ನೀಡಲಾಗಿತ್ತು. ಹೀಗಿದ್ದಾಗಲೇ, ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಅಂದಹಾಗೆ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ವಿಚಾರದಲ್ಲಿ ಸರ್ಕಾರ ಸಾಕಷ್ಟು ಆಲೋಚನೆ ಮಾಡುತ್ತೆ. ಆದರೆ ಅನಿವಾರ್ಯ ಸ್ಥಿತಿ ಇದ್ದಾಗ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕು, ಇಂತಹ ಸ್ಥಿತಿ ಈಗ ಮತ್ತೆ ಎದುರಾಗಿದೆ. ಈಗ ಶಾಲೆ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾದ್ರೆ ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ ಏಕೆ? ಮುಂದೆ ಓದಿ...

School Holiday May Announce In Karnataka On July 14 Of 2025 For This Reason

ಜುಲೈ 14 ಸೋಮವಾರ ರಜೆ ಘೋಷಣೆ?

ಶಾಲೆ & ಕಾಲೇಜುಗಳಿಗೆ ಪದೇ ಪದೇ ರಜೆ ಘೋಷಣೆ ಆಗುತ್ತಿದೆ ಅಂತಾ ವಿದ್ಯಾರ್ಥಿಗಳು ಖುಷಿಯಾಗಿದ್ದರೆ, ಆ ಕಡೆ ಪಾಠಗಳು ಸರಿಯಾಗಿ ನಡೆಸಲು ಆಗುತ್ತಿಲ್ಲ ಅಂತ ಶಿಕ್ಷಕರು ಚಿಂತೆ ಮಾಡುವಂತೆ ಆಗಿದೆ. ಯಾಕಂದ್ರೆ ಈಗ ಸರಿಯಾಗಿ ಪಾಠ ಮಾಡಿದರೆ ಮಾತ್ರ ಮುಂದೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಬಹುದು. ಆದರೆ ಈಗಲೇ ಶಾಲೆ & ಕಾಲೇಜುಗಳಿಗೆ ಸಾಲು ಸಾಲು ರಜೆಗಳನ್ನ ಕೊಡುತ್ತಿದ್ದರೆ ಮುಂದೆ ಮಕ್ಕಳಿಗೆ ಪಾಠ ಮಾಡುವುದು ಹೇಗೆ? ಅನ್ನೋ ಚಿಂತೆ ಕೂಡ ಶುರುವಾಗಿದೆ. ಹೀಗಿದ್ದಾಗಲೇ, ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಸಾಧ್ಯತೆ...

ಮಳೆ.. ಮಳೆ.. ಮಳೆ.. ಭಾರಿ ಮಳೆ!

ಹೌದು, ಜುಲೈ 12 ಶನಿವಾರದಿಂದ ನಮ್ಮ ಕರ್ನಾಟಕದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಯುವ ಕುರಿತು ಈಗ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ಸೇರಿ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡ, ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಕೊಡಗು ಸೇರಿ ಚಿಕ್ಕಮಗಳೂರು ಭಾಗದಲ್ಲೂ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಹಾಸನ, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಜುಲೈ 12 ಶನಿವಾರದಿಂದ ಭಾರಿ ಮಳೆ ಬೀಳುವ ಮುನ್ಸೂಚನೆಯು ಇದೆ. ಹೀಗಿದ್ದಾಗ ಉತ್ತರ ಕರ್ನಾಟಕ ಭಾಗದಲ್ಲೂ ಮಳೆರಾಯ ಅಬ್ಬರಿಸುವ ಮುನ್ಸೂಚನೆ ಸಿಗುತ್ತಿದೆ.

ಈ ಹಿನ್ನೆಲೆ ಜುಲೈ 12 ಶನಿವಾರ & ಜುಲೈ 14 ಸೋಮವಾರ ಶಾಲಾ, ಕಾಲೇಜು ರಜೆ ಘೋಷಣೆ ಸಾಧ್ಯತೆ ಹೆಚ್ಚು ಅಂತಾ ಹೇಳಲಾಗುತ್ತಿದೆ. ನಾಳೆ ಶನಿವಾರ ರಜೆ ಮಿಸ್ ಆದರೂ ಸೋಮವಾರ ಭಾರಿ ದೊಡ್ಡ ಮಳೆ ಇರುವ ಕಾರಣಕ್ಕೆ ಜುಲೈ 14 ಸೋಮವಾರ ಶಾಲಾ & ಕಾಲೇಜುಗಳಿಗೆ ರಜೆ ನೀಡುವ ಸಾಧ್ಯತೆ ದಟ್ಟವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ, ಈ ಹಿನ್ನೆಲೆಯಲ್ಲಿ ಭಾನುವಾರ ಸಂಜೆಯ ತನಕ ಕಾದು ನೋಡಬೇಕಿದೆ. ಒಟ್ನಲ್ಲಿ ಮಳೆ ಕಾರಣಕ್ಕೆ ಇದೀಗ ಕರ್ನಾಟಕದಲ್ಲಿ ಹಲವು ಜಿಲ್ಲೆಗಳ ಶಾಲಾ & ಕಾಲೇಜುಗಳಿಗೆ ರಜೆ ನೀಡುವ ಪರಿಸ್ಥಿತಿ ಬಂದಿರುವುದು ಶಿಕ್ಷಕರು ಹಾಗೂ ಮಕ್ಕಳ ಪೋಷಕರಿಗೆ ಚಿಂತೆ ತರಿಸಿದೆ.

ಮಳೆಗೆ ತುಂಬಿ ತುಳುಕುತ್ತಿರುವ ಜಲಾಶಯಗಳು!

ಹೌದು, ಕರ್ನಾಟಕ ರಾಜ್ಯದಲ್ಲಿ ಭಾರಿ ಭರ್ಜರಿ ಮಳೆ ಸುರಿಯುತ್ತಿರುವ ಕಾರಣಕ್ಕೆ ಜೂನ್ ತಿಂಗಳಲ್ಲೇ ಈ ಬಾರಿ ಜಲಾಶಯಗಳು ಅಂದ್ರೆ ಡ್ಯಾಂಗಳು ತುಂಬಿ ತುಳುಕಲು ಶುರು ಮಾಡಿವೆ. ಈ ಕಾರಣಕ್ಕೆ ರೈತರು ಹಾಗೂ ಕನ್ನಡ ನಾಡಿನ ಕನ್ನಡಿಗರು ಕೂಡ ಈ ವಿಚಾರದಲ್ಲಿ ಸಿಕ್ಕಾಪಟ್ಟೆ ಖುಷಿ ಖುಷಿಯಾಗಿದ್ದಾರೆ. ಅದರಲ್ಲೂ, ಬೆಂಗಳೂರಿಗೆ ಕುಡಿಯುವ ನೀರು ನೀಡುವ ಕೃಷ್ಣರಾಜ ಸಾಗರ ಅಂದ್ರೆ ನಮ್ಮ ಕೆಆರ್‌ಎಸ್ ಈಗ ಫುಲ್ ತುಂಬಿ ತುಳುಕುತ್ತಿದ್ದು, ಗರಿಷ್ಠ 124.80 ಅಡಿ ಇರುವ ಜಲಾಶಯ ಪೂರ್ಣವಾಗಿದೆ. ಹಾಗೇ ಆಲಮಟ್ಟಿಯ ಜಲಾಶಯ ಕೂಡ ತುಂಬಿ ತುಳುಕುತ್ತಿದ್ದು, ತುಂಗಭದ್ರಾ ಡ್ಯಾಂ ಸೇರಿದಂತೆ ಇದೀಗ ಕರ್ನಾಟಕದ ಬಹುತೇಕ ಎಲ್ಲಾ ದೊಡ್ಡ ದೊಡ್ಡ ಡ್ಯಾಂಗಳು ತುಂಬಿ ಹೋಗಿವೆ. ಇದರ ಜೊತೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆ ಸುರಿಯುವ ಬಗ್ಗೆ ಕೂಡ ಮುನ್ಸೂಚನೆ ಸಿಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+