School Holiday: ದಸರಾ ರಜೆ ದಿಢೀರ್ ವಿಸ್ತರಣೆ, ಅಕ್ಟೋಬರ್ 18 ಶನಿವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ... ಹೌದು ದಿಢೀರ್ ಅಂತಾ ಕರ್ನಾಟಕ ರಾಜ್ಯದಲ್ಲಿ ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ. ಶಾಲಾ & ಕಾಲೇಜುಗಳಿಗೆ ದಸರಾ ರಜೆ ವಿಸ್ತರಣೆ ಆಗಬಹುದು ಎಂಬ ಬಗ್ಗೆ ಹಲವು ದಿನಗಳ ಕಾಲ ಚರ್ಚೆ ನಡೆಯುತ್ತಾ ಇತ್ತು, ಇಂತಹ ಸಮಯದಲ್ಲೇ ದಸರಾ ರಜೆ ದಿಢೀರ್ ವಿಸ್ತರಣೆ ಮಾಡಲಾಗಿದೆ. ಅಕ್ಟೋಬರ್ 18 ಶನಿವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಿ, ರಜೆ ವಿಸ್ತರಣೆ ಮಾಡುವ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ...
ಶಾಲಾ & ಕಾಲೇಜುಗಳಿಗೆ ಕರ್ನಾಟಕ ರಾಜ್ಯದಲ್ಲಿ ದಸರಾ ರಜೆ ವಿಸ್ತರಣೆ ಆಗಿರುವ ವಿಚಾರಕ್ಕೇ ಇದೀಗ ವಿದ್ಯಾರ್ಥಿಗಳಿಗೆ ಖುಷಿಯಾಗಿದೆ. ಅಂದಹಾಗೆ, ಹಲವು ಕಾರಣಗಳ ಹಿನ್ನೆಲೆ ದಿಢೀರ್ ಅಕ್ಟೋಬರ್ 18 ಶನಿವಾರ ತನಕ ಶಾಲಾ & ಕಾಲೇಜುಗಳ ದಸರಾ ರಜೆ ವಿಸ್ತರಣೆ ಮಾಡಿ ಸಿದ್ದರಾಮಯ್ಯ ಅವರ ಸರ್ಕಾರವು ಮಹತ್ವದ ಘೋಷಣೆ ಹೊರಡಿಸಿದೆ. ಆದರೆ ಹೀಗೆ ರಜೆ ಘೋಷಣೆ ಮಾಡಿರುವ ವಿಚಾರ ವಿದ್ಯಾರ್ಥಿಗಳು & ಪುಟಾಣಿ ಮಕ್ಕಳಿಗೆ ಖುಷಿ ನೀಡಿದೆ. ಆದರೆ ದಿಢೀರ್ ಮತ್ತೆ ಶಾಲಾ & ಕಾಲೇಜುಗಳ ದಸರಾ ರಜೆಯಲ್ಲಿ ವಿಸ್ತರಣೆ ಆಗಿರುವ ವಿಚಾರ ಪೋಷಕರಿಗೆ ಒಂದಷ್ಟು ಟೆನ್ಷನ್ ತರಿಸಿದೆ. ಯಾಕಂದ್ರೆ ಪಾಠಗಳು ನಡೆಯದೆ ವಿದ್ಯಾರ್ಥಿಗಳ ಪರೀಕ್ಷೆ & ಭವಿಷ್ಯದ ಬಗ್ಗೆ ಅಪ್ಪ & ಅಮ್ಮನಿಗೆ ಟೆನ್ಷನ್ ಶುರುವಾಗಿದೆ...

ಅಕ್ಟೋಬರ್ 18 ಶನಿವಾರ ತನಕ ರಜೆ!
ಶಾಲಾ & ಕಾಲೇಜುಗಳಿಗೆ ರಜೆ.. ರಜೆ.. ರಜೆ.. ಹೀಗೆ ಕರ್ನಾಟಕದಲ್ಲಿ 2025 ಆರಂಭದಲ್ಲೇ ಶಾಲಾ & ಕಾಲೇಜುಗಳಿಗೆ ಭಾರಿ ರಜೆ ಘೋಷಣೆ ಮಾಡಿದ್ದರು. ನಂತರ ಶ್ರಾವಣ ಮಾಸ ಶುರುವಾಗಿ ಸಾಲು, ಸಾಲಾಗಿ ಹಬ್ಬಗಳು ಬಂದಿದ್ದ ಕಾರಣಕ್ಕೆ ಮತ್ತೆ ಶಾಲಾ & ಕಾಲೇಜುಗಳಿಗೆ ಸಾಲು & ಸಾಲು ರಜೆ ಸಿಕ್ಕಿವೆ. ಅದರಲ್ಲೂ ದಸರಾ ರಜೆ ಅಂತಾ ಸುದೀರ್ಘ ಬರೋಬ್ಬರಿ 18 ದಿನಗಳ ಕಾಲ ರಜೆಯನ್ನ ಎಂಜಾಯ್ ಮಾಡಿದ್ದಾರೆ ಲಕ್ಷ ಲಕ್ಷ ವಿದ್ಯಾರ್ಥಿಗಳು. ಕರ್ನಾಟಕದ ಶಾಲಾ & ಕಾಲೇಜುಗಳ ವಿದ್ಯಾರ್ಥಿಗಳು, ಪುಟಾಣಿ ಮಕ್ಕಳಿಗೆ ಈಗ ಭರ್ಜರಿ ಬಂಪರ್ ರಜೆಗಳು ಸಿಕ್ಕಿರುವ ಸಮಯದಲ್ಲೇ ಮತ್ತೆ ಅಕ್ಟೋಬರ್ 18 ಶನಿವಾರ ತನಕ ಶಾಲಾ & ಕಾಲೇಜುಗಳಿಗೆ ರಜೆ ಘೋಷಿಸಿ, ರಜೆಯನ್ನು ವಿಸ್ತರಣೆ ಮಾಡುವ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರ. ಇದು ಇನ್ನಷ್ಟು ಖುಷಿ ತರಿಸಿದೆ!
ಶಾಲಾ & ಕಾಲೇಜುಗಳಲ್ಲಿ ಸ್ಪೆಷಲ್ ಕ್ಲಾಸ್!
ಒಟ್ನಲ್ಲಿ ಕರ್ನಾಟಕ ರಾಜ್ಯದ ಶಾಲಾ & ಕಾಲೇಜುಗಳಿಗೆ ಈ ವರ್ಷ ಭರ್ಜರಿಯಾಗಿ ರಜೆಗಳು ಸಿಗುತ್ತಿವೆ. ಈ ಮೂಲಕ ಎದುರಾದ ಸಮಸ್ಯೆ ಸರಿ ಮಾಡಲು ವಿಶೇಷ ತರಗತಿ ನಡೆಸುವ ಮೂಲಕ ಪಾಠ ನಡೆಸಲು ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಖುದ್ದಾಗಿ ಸುದ್ದಿಗೋಷ್ಠಿ ನಡೆಸಿದ್ದು, ಈ ಸಮಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕೂಡ ಹಾಜರಿದ್ದರು. ಇದೇ ಸಮಯದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ಒಂದನ್ನು ನೀಡಿದ್ದು, ಅಕ್ಟೋಬರ್ 18 ಶನಿವಾರದ ತನಕ ರಜೆ ಘೋಷಣೆ ಆಗಿರುವ ಹಿನ್ನೆಲೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಕ್ಲಾಸ್ ನಡೆಯುವುದು ಕೂಡ ಫಿಕ್ಸ್ ಆಗಿದೆ!
ಮಳೆ ಆರ್ಭಟ ಕೂಡ ಜೋರು...
ಕರ್ನಾಟಕದಲ್ಲಿ ಇದೀಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದು ಮತ್ತೊಂದು ಒಳ್ಳೆ ಕೆಲಸ ಮಾಡಿದಂತೆ ಆಗಿದೆ. ಯಾಕಂದ್ರೆ ಕರ್ನಾಟಕದಲ್ಲಿ ಮತ್ತೆ ಘೋರ ಮಳೆ ಸುರಿಯುವ ಬಗ್ಗೆ ಈಗ ಮುನ್ನೆಚ್ಚರಿಕೆ ನೀಡಿದ್ದು, ಅಕ್ಟೋಬರ್ 09 ಗುರುವಾರ ನಂತರ ಮಳೆಯ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ. ಮಳೆ ಸುರಿಯುತ್ತಿರುವ ರೀತಿಗೆ ಜನರು ಕೂಡ ಬೆಚ್ಚಿ ಬಿದ್ದಿದ್ದಾರೆ. ಯಾಕಪ್ಪ ಅಂದ್ರೆ ಇನ್ನೇನು ಚಳಿಗಾಲದ ಎಂಟ್ರಿ ಆಗುತ್ತಿದ್ದರೂ ಮಳೆ ಆರ್ಭಟ ಮಾತ್ರ ಕಡಿಮೆ ಆಗುತ್ತಿಲ್ಲ. ಬದಲಾಗಿ ಈಗ ಮಳೆ ಮತ್ತೆ ತನ್ನ ಆರ್ಭಟ ತೋರಿಸಲು ಸಜ್ಜಾಗಿದೆ. ಅದರಲ್ಲೂ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಅಬ್ಬರ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ಈಗ ಕರ್ನಾಟಕದ ಒಳನಾಡು ಪ್ರದೇಶಗಳಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.












Click it and Unblock the Notifications